ಪ್ರಜಾಪ್ರಭುತ್ವದಲ್ಲಿ ಚುನಾವಣೆಯ ಪಾತ್ರ ಬಹಳ ಮುಖ್ಯ

ಗುರುಮಠಕಲ್:ಮೇ.5: ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಮೇ 10 ರಂದು ನಡೆಯಲಿರುವ ಚುನಾವಣೆಯಲ್ಲಿ ಒಳ್ಳೆಯ ಅಭ್ಯರ್ಥಿ ಆಯ್ಕೆಯಾಗಬೆಕಾದರೆ ಪ್ರತಿಯೊಬ್ಬ ವ್ಯಕ್ತಿಯೂ ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲಾರು ಮತದಾನದಿಂದ ವಂಚಿತರಾಗದೆ ಎಲ್ಲಾರು ಕಡ್ಡಾಯವಾಗಿ ತಮ್ಮ ಮತ ಹಾಕ ಬೇಕೆಂದು ಹೇಳಿದರು. ಇಂದು ಮುಂಜಾನೆ ಚಂಡ್ರಿಕಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೀಮರಾಯ ಚುನಾವಣೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಪ್ರಜಾಪ್ರಭುತ್ವದಲ್ಲಿ ದೃಡ ವಿಸ್ವಾಸವುಳ್ಳ ಭಾರತದ ಪೌರ ರಾದ ನಾವು ನಮ್ಮ ದೇಶದ ಪ್ರಜಾಸತ್ತಾತ್ಮಕ ಮುಕ್ತ ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತವೆ ಮತ್ತು ನಿರ್ಬಿತರಾಗಿ ಯಾವುದೇ ಪ್ರೇರೇಪಣೆಗಳ ದಕ್ಷಿಣೆಗಳಿಗೆ ಹೊಳಗಾಗದೆ ಮತ ಚಲಾಯಿಸ ಬೇಕು ಎಂದು ಹೇಳಿದರು. ಈಗಾಗಲೇ ಎಂಬತ್ತು ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ಮತದಾನ ಮುಗಿದಿವೆ ಉಳಿದಂತ ಯಾವುದೇ ಹದಿನೆಂಟು ವರ್ಷ ಮೇಲ್ಪಟ್ಟ ವ್ಯಕ್ತಿ ಮತವನ್ನು ಹಾಕಬೇಕು ಕಡಿಮೆ ಮತದಾನ ವಾದರೆ ಪ್ರಜಾಪ್ರಭುತ್ವ ದಲ್ಲಿ ಉತ್ತಮ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಪ್ರಜಾಪ್ರಭುತ್ವ ಮೇಲ್ಮಟ್ಟಕ್ಕೆ ಹೋಗಬೇಕು ಉನ್ನತ ಮಟ್ಟದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಿ ಕಾರ್ಯ ನಿರ್ವಹಿಸ ಬೇಕಾದರೆ ಒಳ್ಳೆಯ ನಾಯಕನನ್ನು ಆಯ್ಕೆ ಮಾಡಿದಾಗ ಮಾತ್ರ ಸಾಧ್ಯ ಆದುದರಿಂದ ಒಳ್ಳೆಯ ಅಭ್ಯರ್ಥಿ ಆಯ್ಕೆ ಯಾಗಬೆಕಾದರೆ ನೂರಕ್ಕೆ ನೂರು ಮತದಾನ ಮಾಡಿದಾಗ ಸಾಧ್ಯ ಎಂದು ಹೇಳಿದರು. ಈ ವೇಳೆ ಗ್ರಾಮ ಪಂಚಾಯಿತಿ ಸಿಬ್ಬಂದಿಯವರು. ಮುಖ್ಯ ಗುರುಗಳು ಶಾಲಾ ಸಿಬ್ಬಂದಿ ಯವರು. ಪುಟಪಾಕ ಕ್ಲಸ್ಟರ್ ಸಿ ಆರ್ ಪಿ ಸೈಯ್ಯದ್ ಬಾಬಾ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಸಾರ್ವಜನಿಕರು ಇತರರು ಇದ್ದರು.