ಪ್ರಜಾಧ್ವನಿಯ ಮೂಲಕ ಹೊಸ ಉತ್ಸಾಹ ಪಡೆದ ಕೈ ಪಡೆ.


ಸಂಜೆವಾಣಿ ವಾರ್ತೆ
ಹೊಸಪೇಟೆ ಜ17: ಮುಂಬರುವ ಚುನಾವಣೆ ಗೆ ರಣೋತ್ಸಾಹ ಪಡೆಯಲು ಚುನಾವಣಾ ಪೂರ್ವ ಸಿದ್ದತೆಯಲ್ಲಿ ತೊಡಗಿದ ಕಾಂಗ್ರೆಸ್ ಉತ್ಸಾಹ ಕಂಡಿತು.
ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಅವಳಿ ಜಿಲ್ಲೆಯ ವಿವಿಧ ತಾಲೂಕಿನ ಹಾಗೂ ಹೊಸಪೇಟೆಯ  ಕಾರ್ಯಕರ್ತರು ತಂಡೋಪತಂಡವಾಗಿ ಸಾಗರದಂತೆ ಹರಿದು ಬರಲಾರಂಭಿಸಿತು.
ತಮ್ಮ ತಮ್ಮ ನಾಯಕರ ಭಾವಚಿತ್ರ ಹಿಡಿದ ಕಾರ್ಯಕರ್ತರು ಜೈಕಾರ ಹಾಕುತ ಕಾಂಗ್ರೆಸ್ ಪಕ್ಷಕ್ಕೆ  ಹೊಸ ಉತ್ಸಾಹ ಬಂದಿರುವುದಕ್ಕೆ ಸಾಕ್ಷಿಕರಿಸಿತು.
ಹೊಸಪೇಟೆ ಪ್ರಮುಕ ನಾಯಕರಾದ ಹೆಚ್.ಆರ್.ಗವಿಯಪ್ಪ,  ಹೆಚ್.ಎನ್.ಎಫ್ ಇಮಾಮ್ ನಿಯಾಜಿ, ರಾಜಶೇಖರ ಹಿಟ್ನಾಳ್, ಸಿರಾಜ್ ಶೇಖ್, ಸೈಯದ್ ಮಹಮ್ಮದ ಸೇರಿದಂತೆ ಇತರೆ ನಾಯಕರು ತಮ್ಮ ತಮ್ಮ ಬೆಂಬಲಗರ ತಂಡದೊಂದಿಗೆ ಸಾಂಪ್ರದಾಯಿಕ ಡೊಳ್ಳು, ಹಲಗೆವಾದ್ಯದೊಂದಿಗೆ  ವೇದಿಕೆಯತ್ತ ಆಗಮಿಸುತ್ತಿದ್ದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಬಿ.ಕೆ. ಹರಿಪ್ರಸಾದ್ ಆಗಮನ ಹಾಗೂ ಕಾಣಲು ನಿರೀಕ್ಷೆಯಲ್ಲಿದ್ದರು ಕಾರ್ಯಕರ್ತರು.
ನಗರದಾದ್ಯಂತ ಫ್ಲಕ್ಸ್ ಗಳು ಮೂಲಕ ತಮ್ನ ಚುನಾವಣಾ ಪೂರ್ವ ಸಿದ್ದತೆಯನ್ನು ಪ್ರದರ್ಶನ ಮಾಡಿರುವುದು ಕಂಡು ಬಂತು.