ಪ್ರಜಾತಂತ್ರ ಶಕ್ತಿಗೆ ಪತ್ರಿಕಾರಂಗದ ಕಾರ್ಯ ಅತೀ ಮಹತ್ವದ್ದು

ಬಾಗಲಕೋಟೆ: ಜು27 : ಭಾರತ ದೇಶದಲ್ಲಿ ಪ್ರಜೆಗಳೆ ಪ್ರಭುತ್ವವಾದ ಪ್ರಜಾತಂತ್ರದ ವ್ಯವಸ್ಥೆಯಲ್ಲಿರುವ ಆಡಳಿತಕ್ಕೆ ನ್ಯಾಯಾಂಗ ಶಾಸಕಾಂಗ ಕಾರ್ಯಾಂಗ ಎಷ್ಟು ಮಹತ್ವವೋ, ಪತ್ರಿಕಾರಂಗವು ನಾಲ್ಕನೇಯ ಆಂಗವಾಗಿ ಅಷ್ಟೇ ಮಹತ್ವ ಪಡೆದುಕೊಂಡಿದೆ. ಪತ್ರಿಕೆಗಳ ಮೂಲಕ ಪತ್ರಕರ್ತರು ರೂಪಿಸುವ ಸಾಮಾಜಿಕ ಅಭಿಪ್ರಾಯಗಳಿಗೆ ತುಂಬಾ ಮಹತ್ವವಿದೆ. ನಾಗರಿಕರಿಗೆ ಪ್ರಜಾತಂತ್ರವ್ಯವಸ್ಥೆ ನಡುವಿನ ಸೇತುವೆಯಾಗಿ ಕೆಲಸ ಮಾಡುವಲ್ಲಿ ಪತ್ರಿಕಾರಂಗ ಅತೀ ಮುಖ್ಯವಾಗಿ, ಸ್ವಾಸ್ಥ್ಯವನ್ನು ಕಾಪಾಡುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ರಬಕವಿ-ಬನಹಟ್ಟಿಯಲ್ಲಿ ತಾಲೂಕಾ ಪತ್ರಕರ್ತರ ಸಂಘದಿಂದ ಜರುಗಿದ ಪತ್ರಿಕಾ ದಿನಾಚರಣೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೀನದಲಿತ-ಬಡವರ ಹಾಗು ಶೋಷಿತರ ವರ್ಗದ ಪರ ನಿಲ್ಲುವಲ್ಲಿ ಪತ್ರಿಕಾರಂಗದ ಜವಾಬ್ದಾರಿಯು ಅತ್ಯಂತ ಶ್ರೇಷ್ಠತೆ ಹೊಂದಿದೆ. ಇದಕ್ಕೆ ಕಳಂಕರಹಿತ ಪತ್ರಕರ್ತರ ಸೇವೆ ಅತೀಮುಖ್ಯವಾಗಿದೆ. ಯಾರನ್ನೋ ತೆಜೋವಧೆ ಮಾಡಿ ಇನ್ನೋಬ್ಬರ ಖುಷಿಪಡಿಸುವ ಸುದ್ದಿಗಳ ಬದಲಾಗಿ ಸಮಾಜ ಪರಿವರ್ತನೆಗಾಗಿ ಸುದ್ಧಿಗಳನ್ನು ಭಿತ್ತರಿಸಬೇಕು ಎಂದರು.
ರಬಕವಿ-ಬನಹಟ್ಟಿ ತಾಲೂಕಾ ಪತ್ರಕರ್ತರ ಭವನಕ್ಕೆ ರೂಪುರೇಷದೊಂದಿಗೆ ವಿಶೇಷ ಅನುದಾನ ನೀಡುವದಾಗಿ ವಿಶ್ವಾಸವೂ ಕೂಡಾ ಈ ಸಂಧರ್ಭದಲ್ಲಿ ವ್ಯಕ್ತಪಡಿಸಿದರು.
ಮಾಜಿ ಸಚಿವೆ ಉಮಾಶ್ರೀ ಮಾತನಾಡಿದರು. ಕಾನಿಪ ತಾಲೂಕಾಧ್ಯಕ್ಷ ವಿಶ್ವಜ ಕಾಡದೇವರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಕಾನಿಪ ರಾಜ್ಯ ಕಾರ್ಯಕಾರಣಿ ಸದಸ್ಯ ಮಹೇಶ ಅಂಗಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರ ಕಲ್ಯಾಣಿ, ನಗರಸಭಾಧ್ಯಕ್ಷ ಸಂಜಯ ತೆಗ್ಗಿ ಇದ್ದರು.
ಮಲ್ಲಿಕಾರ್ಜುನ ತುಂಗಳ ಸ್ವಾಗತಿಸಿದರು. ಕಿರಣ ಆಳಗಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕನ್ಯಾಕುಮಾರಿ ಹೂಗಾರ ನಿರೂಪಿಸಿ, ಚಂದ್ರಶೇಖರ ತುಂಗಳ ಒಂದಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ನೀಲಕಂಠ ದಾತಾರ, ಶಿವಾನಂದ ಮಹಾಬಳಶೆಟ್ಟಿ, ಬಸಯ್ಯ ವಸ್ತ್ರದ, ಗಂಗಯ್ಯ ಹಿರೇಮಠ. ಪ್ರಕಾಶ ಕುಂಬಾರ, ಮಹೇಶ ಆರಿ, ಮಹೇಶ ಮನ್ನಯ್ಯನವರಮಠ, ಅರುಣ ಯಾದವಾಡ, ಅಮರ ಇಂಗಳೆ, ಬಿ.ಟಿ. ಪತ್ತಾರ, ರವೀಂದ್ರ ಅಷ್ಟಗಿ, ಚಂದ್ರು ಮೋರೆ, ಯಶವಂತ ವಾಜಂತ್ರಿ, ಯಶವಂತ ವಾಘಮೋರೆ, ಮ.ಕೃ. ಮೇಗಾಡಿ, ಈಶ್ವರ ಕರೋಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.