ಪ್ರಜಾತಂತ್ರ ಅವ್ಯವಸ್ಥೆ ಪ್ರಶ್ನಿಸುವ ಗಟ್ಟಿತನ ಬೆಳೆಸಿಕೊಳ್ಳಲು ಕರೆ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ.ಮಾ.26 ಇತ್ತೀಚಿನ ದಿನಗಳಲ್ಲಿ ಪ್ರಜಾತಂತ್ರ ಬುಡಮೇಲು ಕೃತ್ಯಗಳು ನಡೆಯುತ್ತಿದ್ದು ಅದನ್ನು ಪ್ರಶ್ನಿಸುವ ಎದೆಗಾರಿಕೆ ಸಾಹಿತ್ಯ ಅಗತ್ಯವಿದೆ ಎಂದು ಪತ್ರಕರ್ತ ಹುಳ್ಳಿ  ಪ್ರಕಾಶ್ ಹೇಳಿದರು.
 ಪಟ್ಟಣದ ಕೃಷಿಕ ಸಮಾಜ ಭವನದಲ್ಲಿ ಶನಿವಾರ ಬಂಡಾಯ ಸಾಹಿತ್ಯ 44 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಡೋಲು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ದೇಶ ಮತ್ತು ರಾಜ್ಯದ ಸಾಹಿತ್ಯ ಸಾಂಸ್ಕೃತಿಕ ವಲಯದಲ್ಲಿ ಪ್ರಸಕ್ತ ವಿದ್ಯಮಾನಗಳನ್ನು ನೋಡಿದಾಗ ಬಂಡಾಯ ಸಾಹಿತ್ಯ ಸಂಘಟನೆಗೆ ಮರು ಜೀವಂತಿಕೆ ನೀಡುವಾಗತ್ಯವಿದೆ ಎಂದರು.
 ಬಂಡಾಯ ಸಾಹಿತ್ಯದ ಚಿಂತಕ ವೀರಣ್ಣ ಕಲ್ಮನಿ ಮಾತನಾಡಿ ಪ್ರಜಾಪ್ರಭುತ್ವದಲ್ಲಿ ನಡೆಯುವ ಅನಾಚಾರ ದೌರ್ಜನ್ಯ ಪ್ರಶ್ನಿಸುವ ಪ್ರತಿಪಟಿಸುವ ಗಟ್ಟಿತನ ಸಾಹಿತ್ಯದಲ್ಲಿ ಮತ್ತು ಚಿಂತಕರಲ್ಲಿ ಕಣ್ಮರೆಯಾಗಿದೆ ಎಂದರು.
 ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಮೇಟಿ ಕೊಟ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಸಂಚಾಲಕ ಪಿಆರ್ ವೆಂಕಟೇಶ್ ಮಾತನಾಡಿದರು. ವಾಸ್ತವಿಕವಾಗಿ ಜಯ ಸೂರ್ಯ ಮಾತನಾಡಿದರು.
 ಕವಿಗೋಷ್ಠಿಯಲ್ಲಿ ಸಾಹಿತಿ ಉಪ್ಪಾರ್ ಬಸಪ್ಪ, ಗಣೇಶ್ ರಾವ್ ಹವಾಲ್ದಾರ್, ವಿಶ್ವನಾಥ ಮೂರ್ತಿ  ಹವಾಲ್ದಾರ್, ಅತ್ತೆ ಬಸವೇಶ್ ಗಂಡಿ ಮಂಜುನಾಥ್ ಕುಂಬಾರ ರವಿ ಉಸ್ಮಾನ್ ಭಾಷಾ ಜಿ ಸರೋಜಮ್ಮ ಸಂಸದ್ ಬೇಗಂ, ಜಯಮ್ಮ ಮತ್ತಳ್ಳಿ ಕೊಟ್ರೇಶ್ ಭಾಗವಹಿಸಿದ್ದರು.