ಪ್ರಚೋದನಾ ಕೃತ್ಯ ನಿಲ್ಲಿಸಲು ಕರೆ

ಚಿಕ್ಕಬಳ್ಳಾಪುರ.ಫೆ೪:ರಾಜ್ಯದಲ್ಲಿ ಪ್ರಚೋದನಕಾರಿ ಕೃತ್ಯಗಳಿಂದ ಯುವಕರುಗಳನ್ನು ದಾರಿ ತಪ್ಪಿಸುವ ಕೆಲಸ ಆಗುತ್ತಿದೆ ಇದು ದುರ್ದೈವ ಈ ಇಂತಹ ಪ್ರಚೋದನಕಾರಿ ಕೃತ್ಯಗಳನ್ನ ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಅಹಿಂದ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಹಿಂದ ಮುಖಂಡರು ಹಾಗೂ ಕುರುಬರ ಸಂಘದ ಜಿಲ್ಲಾಧ್ಯಕ್ಷರಾದ ಡಾಲ್ಫಿನ್ ನಾಗರಾಜ್ ಮಾತನಾಡಿ ಗೂಂಡಾಗಿರಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ, ಬಿಜೆಪಿ ಹಾಗೂ ಜೆಡಿಎಸ್ ಅವರು ಗೂಂಡಾಗಿರಿ ಪ್ರವೃತ್ತಿಯನ್ನ ಮುಂದುವರೆಸಿದ್ದೆ ಆದಲ್ಲಿ ಮುಂದಿನ ದಿನಮಾನಗಳಲ್ಲಿ ನಮ್ಮ ಹೋರಾಟದ ಸ್ವರೂಪ ಬದಲಿಸಬೇಕಾಗುತ್ತದೆ, ಗೂಂಡಾಗಿರಿ ಕೃತ್ಯಗಳಲ್ಲಿ ತೊಡಗಿರುವವರನ್ನು ಸರ್ಕಾರ ಈ ಕೂಡಲೇ ಬಂದಿಸಬೇಕು ಎಂದು ಆಗ್ರಹಿಸಿದ ಅವರು ಕಳೆದ ಮಂಗಳವಾರ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಟಿ.ರವಿ ರವರ ನೇತೃತ್ವದಲ್ಲಿ ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ನಡೆದ ಹನುಮಧ್ವಜದ ವಿವಾದದ ಪ್ರತಿಭಟನೆಯ ಮೇರವಣಿಗೆ ಸಮಯದಲ್ಲಿ ಮುಖಂಡರುಗಳು ಪ್ರತಿಭಟನಾಕಾರರನ್ನು ಪ್ರಚೋದನೆಗೋಳಿಸಿ ಮಂಡ್ಯ ನಗರದ ಬಿ.ಎಂ.ರಸ್ತೆಯಲ್ಲಿರುವ ಮಂಡ್ಯ ಜಿಲ್ಲಾ ಕುರುಬರ ಸಂಘದ ಕಟ್ಟಡ ಮತ್ತು ಸಾರ್ವಜನಿಕ ವಿದ್ಯಾರ್ಥಿನಿಲಯದ ಮೇಲೆ ಕಲ್ಲು ತೂರಾಟ ಮಾಡಿ ಕಟ್ಟಡದ ಕಿಟಕಿ ಗಾಜುಗಳನ್ನು ಧ್ವಂಸ ಗೊಳಿಸಿರುತ್ತಾರೆ ಇದು ಹೇಯ ಕೃತ್ಯ ಅಲ್ಲದೆ ಮತ್ತೆನು ಎಂದು ಪ್ರಶ್ನೆ ಮಾಡಿದ ನಾಗರಾಜ್ ಈ ಕೂಡಲೇ ಇಂತಹ ಕೃತ್ಯಗಳನ್ನು ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದರು.
ಮಾಜಿ ಮುಖ್ಯಮಂತ್ರಿ ಎಂಬ ಕನಿಷ್ಠ ಪ್ರಜ್ಞೆ ಇಲ್ಲದೆ ಇಂತಹ ಪ್ರಚೋದನಕಾರಿ ಕೃತ್ಯಗಳನ್ನ ನಡೆಸುವವರ ಹಿಂದೆ ಇದ್ದು ಇದು ಯುವಕರನ್ನ ಪ್ರಚೋದಿಸುವಂತಹ ಕೃತ್ಯಗಳಾಗುತ್ತಿರುವುದು ವಿಷಾದನೀಯ ಎಂದರು.
ಒಂದು ವಿವಾಧವನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಲಾಗಿ ಚಿತ್ರದುರ್ಗದಲ್ಲಿ ನಡೆದ ನಮ್ಮ ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ಶೋಷಿತರ ಜಾಗೃತಿ ಸಮಾವೇಶವನ್ನು ಯಶಸ್ವಿಯಾಗಿ ಮಾಡಿದ ಪ್ರತಿಕಾರ ಮತ್ತು ಅಸೂಯೆಗಾಗಿ ಕುರುಬರ ಜನಾಂಗದವರು ಕೂಡ ಶೋಷಿತ ಸಮುದಾಯಗಳಲ್ಲಿ ಬರುವ ಕಾರಣದಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರವರು ಶೋಷಿತರ ಜಾಗೃತಿ ಸಮಾವೇಶದಲ್ಲಿ ಮುಖ್ಯಮಂತ್ರಿಯವರ ಭಾಷಣವನ್ನು ಸಹಿಸಿಕೊಳ್ಳಲಾಗದೇ ಶೋಷಿತರ ಮೇಲೆ ಭಯ ಮತ್ತು ದಬ್ಬಾಳಿಕೆಯ ವಾತವರಣವನ್ನು ಸೃಷ್ಟಿಸಲು ಹೊರಟಿದ್ದಾರೆ ಎಂದವರು ಚೆಡಿಸಿದರು
ಸೇವಾದಳದ ಜಿಲ್ಲಾಧ್ಯಕ್ಷ ಹನುಮಂತಪ್ಪ ಮಾತನಾಡಿ ಇಂತಹ ಕೃತ್ಯಗಳು ರಾಜ್ಯದಲ್ಲಿ ಮರುಕಳಿಸಿದರೆ ರಾಜ್ಯಾದ್ಯಂತ್ಯ ಬಿ.ಜೆ.ಪಿ ಮತ್ತು ಜೆ.ಡಿ.ಎಸ್ ಪಕ್ಷಗಳ ವಿರುದ್ದವಾಗಿ ದಂಗೆ ಎಳಬೇಕಾಗುತ್ತದೆ ಎಂದರು.
ಕಿಸಾನ್ ಕೇತ್ ಮಜದುರ್ ಜಿಲ್ಲಾಧ್ಯಕ್ಷ ಜಾತವಾರ ರಾಮಕೃಷ್ಣಪ್ಪ ಮಾತಾಡಿ ಮಾಜಿ ಸಚಿವ ಸಿ.ಟಿ. ರವಿ ಎಂಬ ಬಿ.ಜೆ.ಪಿ ಪಕ್ಷದ ಮುಖಂಡ ಹಿಂದುತ್ವವನ್ನು ಗುತ್ತಿಗೆಗೆ ತೆಗೆದುಕೊಂಡ ರೀತಿಯಲ್ಲಿ ವರ್ತಿಸುತ್ತಿದ್ದು, ಈಗಾಗಲೇ ಇದರ ಪರಿಣಾಮವನ್ನು ಅನುಭವಿಸುತ್ತಿದ್ದಾರೆ. ಶೋಷಿತ
ಸಮುದಾಯಗಳು ಕೂಡ ಬಹುಸಂಖ್ಯಾತ ಹಿಂದುಗಳಾಗಿದ್ದು, ಇಂತಹ ಪ್ರಚೋದನಕಾರಿ ಕೃತ್ಯಗಳಿಂದ ಯುವಕರುಗಳನ್ನು ದಾರಿ ತಪ್ಪಿಸುವ ಕೆಲಸವನ್ನು ಕೂಡಲೇ ನಿಲ್ಲಿಸಬೇಕು ಎಂದರು. ಕುರುಬರ ಸಂಘದ ತಾಲೂಕು ಅಧ್ಯಕ್ಷ ಎನ್ ಆನಂದ ಮಾತನಾಡಿದರು.
ಅಹಿಂದ ಮುಖಂಡರುಗಳಾದ ನಾಯನಹಳ್ಳಿ ನಾರಾಯಣಸ್ವಾಮಿ, ನಗರಸಭೆ ಮಾಜಿ ಸದಸ್ಯರಾದ ನರೇಂದ್ರಬಾಬು, ಎಸ್ ಪಿ, ಶ್ರೀನಿವಾಸ್, ಸೇವಾದಳದ ಪ್ರಧಾನ ಕಾರ್ಯದರ್ಶಿ ಮುನಿರಾಜು, ನಾಯನಹಳ್ಳಿ ಮಂಜುನಾಥ್, ಮುನೀಂದ್ರ, ನಾಯನಹಳ್ಳಿ ಮಂಜು, ವಕೀಲರಾದ ಚಂದ್ರಶೇಖರ್, ಮಂಜುನಾಥ್, ವಿಜಯಕುಮಾರ್, ನೆಲಮಾಕಹಳ್ಳಿ ರಾಮಾಂಜಿ, ತಾಲೂಕು ಮತ್ತು ಜಿಲ್ಲಾ ಕುರುಬರ ಸಂಘದ ವಿವಿಧ ಪದಾಧಿಕಾರಿಗಳು ಸದಸ್ಯರು ಸೇರಿದಂತೆ ಇನ್ನಿತರ ಶೋಷಿತ ಸಮುದಾಯಗಳ ಸಂಘಗಳ ಮುಖಂಡರು, ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿದಂತೆ ಎಲ್ಲಾ ವರ್ಗದ ಸದಸ್ಯರು ಇದ್ದರು.