ಪ್ರಚೋದನಕಾರಿ ಭಾಷಣ ಆರೋಪ: ಶಾಸಕರಿಬ್ಬರ ವಿರುದ್ಧ ಪ್ರಕರಣ ದಾಖಲು

ವಿಜಯಪುರ:ಮಾ.6: ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಹಿನ್ನೆಲೆ ಇಬ್ಬರು ಶಾಸಕರ ವಿರುದ್ಧ ನಗರದ ಗಾಂಧಿಚೌಕ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಹೈದರಾಬಾದ್ ಗೋಶಮಹಾಲ್ ಶಾಸಕ ಟಿ. ರಾಜಾಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದೆ.
ನಗರದ ಶಿವಾಜಿ ವೃತ್ತದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಅಗರ್ ಮೇರಾ ಹಾತ್ ಮೇ ಹೋಂ ಮಿನಿಸ್ಟರ್ ರಹಾತೋ ಗೂಸ್‍ಕೆ ಎನ್ಕೌಂಟರ್ ಕರಕೇ, ಏಕ್ ಬಿ ಪಾಕಿಸ್ತಾನ ಘರಸೇ ಬಾಹರ್ ನಹಿ ಆನೇತಕ್, ಭಾರತ ಮಾತಾಕಿ ಜೈ.. ಜೈ ಛತ್ರಪತಿ ಶಿವಾಜಿ ಮಹಾರಾಜ ಕರತಾ ತಾ ಎಂದು ಪ್ರಚೋದನಕಾರಿ ಭಾಷಣ ಮಾಡಲಾಗಿದೆ. ಇನ್ನು ಶಾಸಕ ಟಿ. ರಾಜಾಸಿಂಗ್, ಅಬ್ ಗಲಿ ಗಲಿ ಮೈ ಅಫ್ಜಲಖಾನ್, ಔರಂಗಜೇಬ ಹೈ.. ಇಸ್ ಲಿಯೇ ಅಬ್ ಗಲಿ ಗಲಿ ಮೇ ಶಿವಾಜಿ ಮಹಾರಾಜ ಬನಾನ್ ಹೈ ಎಂದು ಈ ಶಾಸಕರಿಬ್ಬರು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆಂದು ನಗರದ ನಿವೃತ್ತ ಶಿಕ್ಷಕ ಅಬುಬಕರ್ ರಾಜೇಸಾಬ ಕಂಬಾಗಿ ಅವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಾಗಿದೆ.