ಪ್ರಚಾರ ವಾಹನಕ್ಕೆ ಶಾಸಕ ತೇಲ್ಕೂರ ಚಾಲನೆ

ಸೇಡಂ, ಜ,16: ರಾಷ್ಟ್ರಕೂಟರ ಕೋಟೆ ನಾಡಿಗೆ ಮೊಟ್ಟ ಮೊದಲ ಬಾರಿಗೆ ಜನವರಿ 19ಕ್ಕೆ ಮಳಖೇಡ ಬಳಿ ಕಂದಾಯ ಗ್ರಾಮ ನಿವೇಶನ ಮಂಜುರಾತಿ ಪ್ರಮಾಣ ಪತ್ರದ ಹಕ್ಕುಪತ್ರ ವಿತರಣೆಗೆ ಆಗಮಿಸುತ್ತಿರುವ ಭಾರತದ ಯುಗಪುರುಷ ಪ್ರಧಾನ ಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅಂಗವಾಗಿ ಈ ಕಾಯ9ಕ್ರಮದ ಪ್ರಚಾರ ವಾಹನಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಡಿಸಿಸಿ ಅಧ್ಯಕ್ಷರು ಶಾಸಕರಾದ ಸನ್ಮಾನ್ಯ ಶ್ರೀ ರಾಜಕುಮಾರ ಪಾಟೀಲ್ ತೆಲ್ಕೂರ ಅವರು ಚಾಲನೆ ನೀಡಿ ಮಾತನಾಡಿದರು.ಈ ವೇಳೆಯಲ್ಲಿ ರಾಜ್ಯ ಕಾಯ9ದಶಿ9ಯಾದ ಶ್ರೀ ಕೇಶವ ಪ್ರಸಾದ್, ವಿಭಾಗೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಬೆನ್ನಾಡಿ,ಮಂಡಲ ಅಧ್ಯಕ್ಷರಾದ ಶ್ರೀ ಪವ9ತರೆಡ್ಡಿ ಪಾಟೀಲ್ ನಾಮವಾರ,ನಗರ ಅಧ್ಯಕ್ಷರಾದ ಶ್ರೀ ಸತೀಶ್ ಪಾಟೀಲ್ ತರನಳ್ಳಿ, ಶಿವಕುಮಾರ್ ಪಾಟೀಲ್ ತೇಲ್ಕೂರ್, ಸಂತೋಷಿರಾಣಿ ಆರ್ ಪಾಟೀಲ್, ಮಾಜಿ ಪುರಸಭೆ ಅಧ್ಯಕ್ಷೆ ಶ್ರೀಮತಿ ಚೆನ್ನಮ್ಮ, ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.