ಪ್ರಚಾರ ಮುಂದುವರಿಸಿದ  ಲಕ್ಷ್ಮೀ ಅರುಣಾ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.04:  ಕಲ್ಯಾಣ ರಾಜ್ಯ ಪ್ರಗತಿ  ಪಕ್ಷದಿಂದ  ಮೊದಲ‌ ಬಾರಿಗೆ ಬಳ್ಳಾರಿ ನಗರ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದಿರುವ
ಗಾಲಿ ಲಕ್ಷ್ಮಿ ಅರುಣಾ  ಅವರು  ಇಂದು ಸಹ ತಮಗೆ ಮತ ನೀಡುವಂತೆ ಮನೆ ಮನೆಗೆ ತೆರಳಿ ಮತಯಾಚನೆ ಕಾರ್ಯವನ್ನು ಮುಂದುವರೆಸಿದ್ದಾರೆ.
ನಗರದ ನಗರದ ಸಾಂಸ್ಕೃತಿಕ ಸಮುಚ್ಚಯದ ಆವರಣದಲ್ಲಿ ಬೆಳಿಗ್ಗೆ ವಾಕಿಂಗ್ ನಲ್ಲಿದ್ದ ಜನರಿಗೆ  ಅಲ್ಲದೆ.17 ನೇ ವಾರ್ಡಿನ ಜನತಾ ಕಾಲೋನಿ,  ಮೊದಲಾದ ಕಡೆ  ಮುಂಜಾನೆಯಿಂದಲೇ ಓಣಿ ಓಣಿ ಸಂಚರಿಸಿ ಮತಯಾಚನೆ ಮಾಡಿದ ಲಕ್ಷ್ಮೀ ಅರುಣಾ ಅವರು. ನಗರದ ಅಭಿವೃದ್ಧಿ ದೃಷ್ಟಿಯಿಂದ ಮತ ನೀಡಿ  ಬಳ್ಳಾರಿ ನಗರದ ಮೊದಲ‌ ಮಹಿಳಾ  ಶಾಸಕಿಯನ್ನಾಗಿ ಮಾಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ತಮ್ಮ ಪತಿ  ಜನಾರ್ಧನರೆಡ್ಡಿ ಅವರು  ಹಿಂದೆ ಸಚಿವರಾಗಿ  ನಗರದ  ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದ್ದರು. ಅವರು ಅಂದು ಮಾಡಿದ್ದ ರಸ್ತೆಗಳ ಅಗಲೀಕರಣ ಮತ್ತು ಅಭಿವೃದ್ದಿ ಇಂದಿಗೂ ಸಾಕ್ಷಿಯಾಗಿವೆಂದರು.
ಜನತೆ ತಮ್ಮ ಪ್ರದೇಶದ ಕೆಲ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದಾಗ ಸರ್ವ ಜನರ ಸಂಕಷ್ಟಗಳಿಗೆ ಸ್ಪಂದಿಸಲಿದೆಂದು ಭರವಶೆ ನೀಡಿದರು.
ಈ ಸಂದರ್ಭದಲ್ಲಿ  ಪಕ್ಷದ ಮುಖಂಡರು, ಸ್ಥಳೀಯ  ಕಾರ್ಯಕರ್ತರಿದ್ದರು.