ಪ್ರಚಾರ ಆರಂಭಿಸಿದ ಆಮ್ ಆದ್ಮಿ ಅಭ್ಯರ್ಥಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.23; ನಗರ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕೊರ್ಲಗುಂದಿ ದೊಡ್ಡ ಕೇಶವ ರೆಡ್ಡಿ ಅವರು ಮನೆ ಮನೆಗೆ ತೆರಳಿ ಮತ ಯಾಚಿಸುವ ಕಾರ್ಯವನ್ನು ಆರಂಭಿಸಿದ್ದಾರೆ.
ಅವರು ಇಂದು ನಗರದ 28, 35,23,6 ಮತ್ತು 7 ನೇ ವಾರ್ಡಿನಲ್ಲಿ ಸಂಚರಿಸಿ ದೆಹಲಿ ಮತ್ತು ಪಂಜಾಬಿನಲ್ಲಿ ಉತ್ತಮ ಆಡಳಿತ ನೀಡಿ ಜನ ಮನ್ನಣೆ ಪಡೆದಿರುವ ಆಮ್ ಆದ್ಮಿ ಪಕ್ಷಕ್ಕೆ ಮತ ನೀಡಿ ಎಂದು ಕೋರಿದರು.
ಈ ಸಂದರ್ಭದಲ್ಲಿ  ಪಕ್ಷದ ಬೆಂಬಲಿಗರಾದ ಪಿಂಕಿ, ಸಮನದೀಪ್, ಜಹೀರ್, ಸುಬ್ಬು, ಆಂಥೋನಿ ದಾಸ್, ಶಂಕರ್, ರಾಹುಲ್, ಉಮೇಶ್, ಸಿದ್ದ ಮೊದಲಾದವರು ಇದ್ದರು.

One attachment • Scanned by Gmail