ಪ್ರಚಾರದ ವೇಳೆ ಹಾಡು ಹೇಳಿ ಚಪ್ಪಾಳೆ ಗಿಟ್ಟಿಸುತ್ತಿರುವ ಬಿಜೆಪಿ ಅಭ್ಯರ್ಥಿ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.05- ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಲರಾಜು ಪ್ರಚಾರ ಸಭೆಯಲ್ಲಿ ಹಾಡು ಹೇಳುವ ಮೂಲಕ ವಿಶಿಷ್ಠವಾಗಿ ಮತಯಾಚನೆ ಮಾಡುತ್ತಿದ್ದಾರೆ.
ಗಾಯನ ಮಾದಪ್ಪನ ಹಾಡು ಹೇಳಿ ಮತದಾರರನ್ನು ಸೆಳೆಯುತ್ತಿರುವ ಹವ್ಯಾಸಿ ಗಾಯಕರು ಆಗಿರುವ ಬಾಲರಾಜ್ ಅವರು ಈಗಾಗಲೇ 75 ಹಾಡುಗಳ ಆಲ್ಬಂ ಸಾಂಗ್ ಹೊರತಂದಿದ್ದು, ನಾಮಿನೇಷನ್ ವೇಳೆಯೂ ವಿಜಯೇಂದ್ರರೋಡ್ ಶೋನಲ್ಲಿ ಹಾಡು ಹೇಳಿದ್ದರು.
ಪ್ರತಿ ಪ್ರಚಾರ ಸಭೆಯಲ್ಲೂ ಬಾಲರಾಜು ಗೀತ ಗಾಯನದ ಮೂಲಕ ಮತಯಾಚನೆ ಮಾಡುತ್ತಿದ್ದಾರೆ. ಅಲ್ಲದೆ ಮತದಾರರಿಂದ ಚಪ್ಪಾಳೆ ಸಹ ಗಿಟ್ಟಿಸುತ್ತಿದ್ದಾರೆ.