ಪ್ರಚಾರದ ಕೊರತೆ: ಯುವಜನೋತ್ಸವಕ್ಕೆ ನಿರಾತ್ಸಾಹ

ಸಂಜೆವಾಣಿ ನ್ಯೂಸ್
ಮೈಸೂರು: ನ.29:- ಜಿಲ್ಲಾ ಮಟ್ಟದ ಯುವ ಜನೋತ್ಸವ ಸ್ಪರ್ಧೆಯಲ್ಲಿ ಯುವ ಜನರೇ ಕಾಣಸಲಿಲ್ಲ. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಬೆರಳೆಯಣಿಕಷ್ಟು ಯುವ ಸಮೂಹ ಮಾತ್ರ ನೋಂದಣಿ ಮಾಡಿಕೊಂಡಿರಲಿಲ್ಲ. ಹೀಗಾಗಿ ಸ್ಥಳದಲ್ಲಿ ನೋಂದಣಿ ಪ್ರಕ್ರಿಯೆ ನಡೆಯಿತ್ತಾದರೂ ಗ್ರಾಮೀಣ ಭಾಗದ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸುವಿಕೆ ಕಂಡು ಬರಲಿಲ್ಲ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನೆಹರು ಯುವ ಕೇಂದ್ರದ ಸಹಯೋಗದಲ್ಲಿ ಸೋಮವಾರ ಚಾಮುಂಡಿ ವಿಹಾರ ಕ್ರೀಡಾಂಗಣದ ಆವರಣದಲ್ಲಿ ನಡೆದ ಯುವ ಜನೋತ್ಸವ ಸ್ಪರ್ಧೆ ಕೇವಲ ನಾಮಕಾವಸ್ತೆ ಎಂಬಂತೆ ನಡೆಯಿತು. ಕ್ರೀಡಾಂಗಣದ ವಿಶಾಲವಾದ ಆವರಣದಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ಮುಂಭಾಗ ಇದ್ದ ಶೇ.70 ಕುರ್ಚಿಗಳು ಖಾಲಿ ಇದ್ದವು.
18ರಿಂದ 29 ವರ್ಷದೊಳಗಿನ ವಿವಿಧ ಸಂಘ ಸಂಸ್ಥೆಗಳ ಯುವಕ, ಯುವತಿಯರು, ವಿದ್ಯಾರ್ಥಿಗಳು ಭಾಗವಹಿಸಲು ಸ್ಪರ್ಧೆಯಲ್ಲಿ ನೀಡಲಾಗಿತ್ತು. ಆದರೆ, ಕ್ರೀಡಾ ಇಲಾಖೆ ಕೇವಲ ಸರ್ಕಾರಕ್ಕೆ ದಾಖಲೆ ನೀಡಲು ಮಾತ್ರ ಸ್ಪರ್ಧೆ ಆಯೋಜಿಸಿದಂತೆ ಕಂಡು ಬಂತು.
ಜನಪದ ನೃತ್ಯ (ಸಮೂಹ), ಜನಪದ ಗೀತೆ (ಸಮೂಹ), ಜನಪದ ಗೀತೆ (ವೈಯಕ್ತಿಕ), ಜನಪದ ನೃತ್ಯ (ವೈಯಕ್ತಿಕ) ಸ್ಪರ್ಧೆಯಲ್ಲಿ ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜು, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಮರಿಮಲ್ಲಪ್ಪ ಕಾಲೇಜು, ತಾಂಡವಪುರದ ಎಂಐಟಿ ಕಾಲೇಜು ತಂಡಗಳು ಮಾತ್ರ ಭಾಗವಹಿಸಿತ್ತು. ಜನಪದ ಗೀತೆ ವಿಭಾಗದಲ್ಲಿ ಸ್ಪರ್ಧಿಗಳು ಕಡಿಮೆ ಇದ್ದರು. ಕಥೆ ಬರೆಯುವುದು, ಸ್ಟೋರಿ ರೈಟಿಂಗ್, ಪೆÇೀಸ್ಟರ್ ಮೇಕಿಂಗ್, ಛಾಯಾಚಿತ್ರಣ ಸ್ಪರ್ಧೆ, ಭಾಷಣ ಸ್ಪರ್ಧೆಗೆ ನೋಂದಣಿ ಮಾಡಿಕೊಳ್ಳುವಂತೆ ಕರೆ ನೀಡುತ್ತಿದ್ದರು ಹೊರತು ವಿದ್ಯಾರ್ಥಿಗಳು ಮಧ್ಯಾಹ್ನ 1ರವರೆಗೆ ನೋಂದಣಿ ಮಾಡಿಕೊಂಡರಲಿಲ್ಲ. ಬಳಿಕ ಯುವ ಜನರಿಲ್ಲದೆ ಮಧ್ಯಾಹ್ನ ನಂತರದ ಕೆಲವು ಸ್ಪರ್ಧೆಗಳು ನಡೆದವು.
ಗ್ರಾಮೀಣ ಭಾಗದ ಶಾಲಾ-ಕಾಲೇಜುಗಳಿಗೆ ಯುವ ಜನ ಸ್ಪರ್ಧೆ ನಡೆಯಲಿದೆ ಎಂದು ಮಾಹಿತಿ ಇರಲಿಲ್ಲ ಎಂಬುದು ಮೇಲ್ನೋಟಕ್ಕೆ ಭಾಸವಾಯಿತು. ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಲ್ಲೂ ಉತ್ಸಾಹ ಕಾಣಲಿಲ್ಲ. ಆದರೆ, ಇದ್ದಷ್ಟೆ ಯುವ ಸಮೂಹ ಸ್ಪರ್ಧಿಗಳಿಗೆ ಚಪ್ಪಾಳೆ ತಟ್ಟಿ ಪೆÇ್ರೀತ್ಸಾಹ ನೀಡಿದರು. ಜಿಲ್ಲಾ ಮಟ್ಟದಲ್ಲಿ ಗೆದ್ದವರು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ತಾಂಡವಪುರದ ಎಂಐಟಿ ಕಾಲೇಜಿನ ವಿದ್ಯಾರ್ಥಿನಿಯರು ಮಾರಿ ಕುಣಿತವನ್ನು ಪ್ರದರ್ಶಿಸಿದರು. ಲಯ ಬದ್ದವಾದ ತಮಟೆಯ ಶಬ್ಧಕ್ಕೆ ಕೋಲು ಮತ್ತು ತಲೆಯಲಿ ಮಾರಿ ದೇವತೆಯನ್ನು ಹೊತ್ತು ಹೆಜ್ಜೆ ಹಾಕಿ ಚಪ್ಪಾಳೆ ಗಿಟ್ಟಿಸಿಕೊಂಡರು. ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಮತ್ತು ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿಯರು ಮಾದೇವ ಹಾಡಿಗೆ ಕಂಸಾಳೆ ನೃತ್ಯ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾದರು. ಮಹದೇಶ್ವರ, ಸಿದ್ದಪ್ಪಾಜಿ, ಕಾವೇರಿ ನದಿ ಹರಿಯುವ ಕುರಿತದ ಜನಪದ ಗೀತೆಗಳನ್ನು ಹಾಡಿದರು.
ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗೈರು: ಯುವ ಜನೋತ್ಸವದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೆರವೇರಿಸಬೇಕಿತ್ತು. ಸಚಿವ ಕೆ.ವೆಂಕಟೇಶ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ತನ್ವೀರ್ ಸೇಠ್, ಟಿ.ಎಸ್.ಶ್ರೀವತ್ಸ, ಕೆ.ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ ಅವರು ಅತಿಥಿಗಳಾಗಿ ಆಗಮಿಸಬೇಕಿತ್ತು. ಆದರೆ ಯಾವೊಬ್ಬ ಜನಪ್ರತಿನಿಧಿಯೂ ಕಾರ್ಯಕ್ರಮಕ್ಕೆ ಬರಲಿಲ್ಲ. ಹೀಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರು ಸೇರಿ ಕೆಲ ಅಧಿಕಾರಿಗಳು ಯುವ ಜನೋತ್ಸವಕ್ಕೆ ಚಾಲನೆ ನೀಡಿದರು.