ಪ್ರಚಾರಕ್ಕೆ ಸಾಮಾಜಿಕ ಜಾಲತಾಣಗಳ ಬಳಕೆ

ಕೋಲಾರ, ಏ. ೪-ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಗೆ ಪರ್ಯಾಯವಾಗಿ ಸಾಮಾಜಿಕ ಜಾಲ ತಾಣಗಳು ಬೆಳೆದಿವೆ, ಲಕ್ಷಾಂತರ ಜನರನ್ನು ಕ್ಷಣ ಮಾತ್ರದಲ್ಲಿ ತಲುಪುತ್ತವೆ. ಸಾಮಾಜಿಕ ಜಾಲ ತಾಣದಲ್ಲಿ ಯಾವುದೇ ಸಂದೇಶವನ್ನು ಪರಿಣಾಮಕಾರಿಯಾಗಿ ಹಂಚಿಕೊಳ್ಳಬಹುದಾಗಿದೆ. ಇದು ಡಿಜಿಟಲ್ ಯುಗ ಆಗಿದೆ. ಕೈಯಲ್ಲಿ ಆಂಡ್ರಾಯಿ ಮೊಬೈಲ್ ಪೋನ್ ಇದ್ದರೆ, ಕ್ಷಣ ಮಾತ್ರದಲ್ಲಿ ಜಗತ್ತಿನ ಯಾವುದೇ ಮೂಲೆಯನ್ನು ತಲುಪಬಹುದಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಬೆಳಗಿನ ದಿನಚರಿ ಮೊಬೈಲ್‌ನಲ್ಲಿ ಬರುವ ವಾಟ್ಸ್‌ಆಪ್, ಫೇಸ್‌ಬುಕ್, ಮೆಸೆಂಜರ್ ಮೂಲಕ ಆರಂಭವಾಗುತ್ತದೆ.
ಸಾಮಾಜಿಕ ಜಾಲತಾಣಗಳು ಪ್ರಭಾವಿ ಸಮುದಾಯದ ಮಾಧ್ಯಮಗಳಾಗಿ ಬೆಳೆದಿದೆ, ಮೊಬೈಲ್ ಪೋನ್‌ನಲ್ಲಿ ಕುರಿತಲ್ಲೇ ದಿನದ ಆಗುಹೋಗುಗಳು ಸೇರಿದಂತೆ ಇತರ ವಿಷಯಗಳನ್ನು ಕ್ಷಣ ಮಾತ್ರದಲ್ಲಿ ನೋಡಬಹುದಾಗಿದೆ. ಸಾಮಾಜಿಕ ಮಾಧ್ಯಮಗಳು ಸಾರ್ವಜನಿಕ ಅಭಿಪ್ರಾಯಗಳನ್ನು ಮೂಡಿಸುತ್ತವೆ. ಇಂದಿನ ಕಾಲ ಘಟ್ಟದಲ್ಲಿ ಜನ ಸಾಮಾನ್ಯರಿಂದ ಹಿಡಿದು ಸರ್ಕಾರಿ ಸಂಸ್ಥೆಗಳು ಉದ್ಯಮಗಳು, ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳು ಸಂವಹನೆಗಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತವೆ. ಕಾರಣ ಸಾಮಾಜಿಕ ಜಾಲತಾಣಗಳು ಲಕ್ಷಾಂತರ ಜನರನ್ನು ಕ್ಷಣದಲ್ಲಿ ತಲುಪುವುದು ಅಲ್ಲದೇ ಅಭಿಪ್ರಾಯ ಮೂಡಿಸುತ್ತವೆ.
ಈ ನಿಟ್ಟಿನಲ್ಲಿ ಮತ್ತು ಸ್ವೀಪ್ ಸಮಿತಿ ಈ ಬಾರಿಯ ಚುನಾವಣೆಯ ಸ್ವೀಪ್ ಚಟುವಟಿಕೆಗಳು ಮತ್ತು ಮತದಾರರಲ್ಲಿ ಜಾಗೃತಿ ಮೂಡಿಸಲು ಸಾಮಾಜಿಕ ಜಾಲ ತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿವೆ. ಪ್ರತಿ ದಿನ ನಡೆಯುವ ಸ್ವೀಪ್ ಚಟುವಟಿಕೆಗಳು ಹಾಗೂ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಮತದಾರರನ್ನು ತಲುಪುವ ಪ್ರಯತ್ನ ನಡೆದಿದೆ. ಈಗಾಗಲೇ ಸ್ವೀಪ್ ಸಮಿತಿಯಿಂದ ಮತದಾನ ಹೆಚ್ಚಿಸಲು ಮತ್ತು ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಲು ಜಾಗೃತಿ ಮೂಡಿಸುವ ಉದ್ದೇಶದಿಂದ ಪಂಜಿನ ಮೇರವಣಿಗೆ ಬೈಕ್ ರ್‍ಯಾಲಿ ವಿದ್ಯಾರ್ಥಿಗಳು ಪತ್ರ ಬರೆದು ಪೋಷಕರು ಮತದಾನದಲ್ಲಿ ಭಾಗವಹಿಸುವಂತೆ ಮನವಿ ಮಾಡುವ ಅಭಿಯಾನ ನಡೆದಿದೆ. ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಹಲವಾರು ಸ್ಪರ್ಧಾತ್ಮಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಶಾಲಾ ಕಾಲೇಜುಗಳಲ್ಲಿ ಮತದಾನ ಸಾಕ್ಷರತಾ ಕ್ಲಬ್‌ಗಳ ಮೂಲಕ ಜಾಗೃತಿ ಮೂಡಿಸಲಾಗಿದೆ. ಈ ಎಲ್ಲಾ ಚಟುವಟಿಕೆಗಳನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅಕ್ರಂ ಪಾಷ ತಮ್ಮ ಅಧಿಕೃತ ಫೇಸ್ ಬುಕ್, ಟ್ವಿಟ್ಟರ್, ಇನ್ಟಾಗ್ರಾಂನ್ಲಲಿ ಹಂಚಿಕೊಂಡಿದ್ದಾರೆ.