ರಾಜ್ಯ ವಿಧಾನಸಭಾ ಚುನಾವಣೆಯ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದ ಹೈ ವೋಲ್ಟೇಜ್ ಯುವ ನಾಯಕ ಶ್ರೀ ಪ್ರಿಯಾ ಕೃಷ್ಣ ಅವರು, ಬಿರುಸಿನ ಪ್ರಚಾರ ನಡೆಸಿದ್ದು, ಹೋದ ಕಡೆಯೆಲ್ಲ ಭವ್ಯ ಸ್ವಾಗತ ದೊರೆಯುತ್ತಿದೆ.
ಪ್ತರು, ಬೆಂಬಲಿಗರು, ಕಾರ್ಯಕರ್ತರೊಂದಿಗೆ ಕ್ಷೇತ್ರದ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿರುವ ಶ್ರೀ ಪ್ರಿಯಾ ಕೃಷ್ಣ ಅವರಿಗೆ, ಕೆಲವೆಡೆ ಹೂ ಗುಚ್ಛ ನೀಡಿ ಸ್ವಾಗತಿಸಲಾಗುತ್ತಿದ್ದರೆ, ಮತ್ತೆ ಕೆಲವೆಡೆ ಹಾರ ಹಾಕಿ, ಶಾಲು ಹೊದಿಸಿ ಅಭಿಮಾನ ವ್ಯಕ್ತಪಡಿಸಲಾಗುತ್ತಿದೆ. ಪುಟಾಣಿ ಮಕ್ಕಳೂ ಸಹ ಪ್ರಿಯಾ ಕೃಷ್ಣ ಅವರಿಗೆ ಗುಲಾಬಿ ಹೂ ಕೊಟ್ಟು ಪ್ರಿತಿ ತೋರುತ್ತಿರುವುದು ವಿಶೇಷ. ಅದೇ ರೀತಿ, ಪಂತರ ಪಾಳ್ಯದಲ್ಲಿ ಪ್ರಚಾರಕ್ಕೆ ಆಗಮಿಸಿದ ನೆಚ್ಚಿನ ನಾಯಕನಿಗೆ, ಮಹಿಳೆಯರು ಆರತಿ ಮಾಡಿ, ತಿಲಕ ಇಟ್ಟು ಸ್ವಾಗತಿಸಿದರು.
ಸ್ಥಳೀಯ ಮುಖಂಡರ ಜೊತೆ ಕಾವೇರಿಪುರ ವಾರ್ಡ್, ಮೂಡಲಪಾಳ್ಯ ವಾರ್ಡ್, ನಾಗರಭಾವಿ ವಾರ್ಡ್, ಅಗ್ರಹಾರ ದಾಸರಹಳ್ಳಿ ವಾರ್ಡ್, ಮಾರೇನಹಳ್ಳಿ ವಾರ್ಡ್ ಸೇರಿದಂತೆ ಗೋವಿಂದರಾಜನಗರ ಕ್ಷೇತ್ರ ವ್ಯಾಪ್ತಿಯ ಪ್ರತಿ ಮನೆಗೂ ಭೇಟಿ ನೀಡಿ ಮತ ಯಾಚಿಸುತ್ತಿದ್ದಾರೆ. ಈ ನಡುವೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳುವ ಮೂಲಕ ಪಕ್ಷ ಬಲವರ್ಧನೆಯೂ ಸಾಗಿದ್ದು, ಕಾಂಗ್ರೆಸ್ ಪಕ್ಷದ ಯೋಜನೆಗಳು ಹಾಗೂ ತಮ್ಮ ಸಮಾಜಮುಖಿ ಕಾರ್ಯಗಳನ್ನು ಕ್ಷೇತ್ರದ ಮನೆಗಳಿಗೆ ತಲುಪಿಸುವ ಮೂಲಕ, ತಮ್ಮ “ಕೈ” ಬಲಪಡಿಸುವಂತೆ ಪ್ರಿಯಾ ಕೃಷ್ಣ ಮನವಿ ಮಾಡುತ್ತಿದ್ದಾರೆ.
ಹೋದ ಕಡೆಯೆಲ್ಲ ಅವರಿಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿದ್ದು, ಕ್ಷೇತ್ರದ ಜನತೆ ಮಜ್ಜಿಗೆ, ಪಾನಕ, ಚಹ, ಕಾಫೀ, ತಿಂಡಿ ಕೊಟ್ಟು ಪ್ರೀತಿ, ಅಭಿಮಾನ ಮೆರೆಯುತ್ತಿದ್ದಾರೆ. ಪ್ರಿಯಾ ಕೃಷ್ಣ ಜನರ ಸತ್ಕಾರ ಸ್ವೀಕರಿಸಿ, ಅವರ ಕಷ್ಟಗಳು ಮತ್ತು ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ಭರವಸೆ ನೀಡುತ್ತಿದ್ದಾರೆ.
ವಿ.ಸೋಮಣ್ಣ ಅವರ ಕ್ಷೇತ್ರ ಬದಲಾವಣೆ ಹಾಗೂ ಆಡಳಿತಾರೂಢ ಬಿಜೆಪಿ ಪಕ್ಷದ ಮೇಲೆ ಇರುವ ಬೆಲೆ ಏರಿಕೆ, ಭ್ರಷ್ಟಾಚಾರ, ೪೦% ಕಮೀಷನ್ ಇತ್ಯಾದಿ ಆರೋಪಗಳು, ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾ ಕೃಷ್ಣ ಗೆಲುವಿಗೆ ಪ್ಲಸ್ ಪಾಯಿಂಟ್ ಆಗಬಹುದು ಎಂದು ಅಂದಾಜಿಸಲಾಗಿದೆ.