ಪ್ರಗತಿ ಹೌಸ್ ನಿಂದ ಮನೆಬಾಗಿಲಿಗೆ ಪಿಯು ಪರೀಕ್ಷಾ ಸೇವೆ

ದಾವಣಗೆರೆ.ಏ.೨೭; ಪ್ರಗತಿ ಆಪಲ್ ಎಜ್ಯುಕೇಷನ್ ಪ್ರವೇಟ್ ಲಿಮಿಟೆಡ್ ಭಾರತದ ಮೊಟ್ಟಮೊದಲ ‘ ಪ್ರಗತಿ ಸೈನ್ಸ್ ಹೌಸ್’ನಿಂದ ‘ ಮನೆಬಾಗಿಲಿಗೆ ಪಿಯು ಪ್ರವೇಶ ಪರೀಕ್ಷಾ ಸೇವೆ ಒದಗಿಸಲಾಗುತ್ತಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಕುಮಾರ್ ಬಳಿಗಾರ್ ಮಾಹಿತಿ ನೀಡಿದರು.ದಾವಣಗೆರೆ ವಿದ್ಯಾನಗರ ಮುಖ್ಯರಸ್ತೆಯ ನೂತನ್ ಕಾಲೇಜು ಸಮೀಪ ಇರುವ ಬಸವೇಶ್ವರ ಕೃಪ ವಾಣಿಜ್ಯ ಸಂಕೀರ್ಣದಲ್ಲಿ ಆರಂಭಿಸಿರುವ ‘ ಭಾರತದ ಮೊಟ್ಟಮೊದಲ ಪ್ರಗತಿ ಸೈನ್ಸ್ ಹೌಸ್’ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
ದ್ವಿತೀಯ ಪಿಯು ವಿಜ್ಞಾನ ಕೋರ್ಸ್ ಹಂತದಲ್ಲಿ ಸಾಕಷ್ಟು ವಿಧವಾದ ಪ್ರವೇಶ ಪರೀಕ್ಷೆಗಳಿವೆ . ಜೊತೆಗೆ ಪಿಯು ವಿಜ್ಞಾನ ನಂತರದ ವೃತ್ತಿಪರ ಕೋರ್ಸ್ ಪ್ರವೇಶಾತಿಗೆ ಸಂಬಂಧಿಸಿದಂತೆ ಅನೇಕ ಹಂತಗಳನ್ನು ದಾಟಿ ಹೋಗಬೇಕಾಗುತ್ತದೆ . ಈ ಎಲ್ಲ ಪರೀಕ್ಷೆಗಳು & ವಿವಿಧ ಹಂತಗಳಲ್ಲಿ ಮಾಡಬೇಕಿರುವ ಎಲ್ಲ ಕೆಲಸಗಳಿಗೆ ಸಂಬಂಧಿಸಿದ ಸೇವೆಗಳನ್ನು ವಿದ್ಯಾರ್ಥಿಗಳ ಮನೆಬಾಗಿಲಿಗೆ ಒದಗಿಸುವ ರಾಜ್ಯದ ಮೊಟ್ಟಮೊದಲ ಮನೆಬಾಗಿಲಿಗೆ ಪಿಯು ಪ್ರವೇಶ ಪರೀಕ್ಷೆ ಸೇವೆ ‘ ವಿಶೇಷ ಸೇವೆಯನ್ನು ಪ್ರಗತಿ ಸೈನ್ಸ್ ಹೌಸ್ ‘ ನಿಂದ  ಆರಂಭಿಸಲಾಗಿದೆ ಕಳೆದ ವರ್ಷ ಲಾಕ್‌ಡೌನ್ ಸಮಯದಲ್ಲಿ ರಾಜ್ಯದ ನೂರಾರು ವಿದ್ಯಾರ್ಥಿಗಳು ಅನೇಕ ಪ್ರವೇಶ ಪರೀಕ್ಷೆಗಳನ್ನು ಬರೆಯುವುದರಿಂದ ವಂಚಿತರಾಗಿದ್ದಾರೆ . ಜೊತೆಗೆ ಪ್ರವೇಶ ಪರೀಕ್ಷೆಗಳ ಅರ್ಜಿಯಲ್ಲಿ ಮಾಡಿಕೊಂಡ ತಪ್ಪುಗಳಿಂದಲೂ ಸಾಕಷ್ಟು ಅವಕಾಶಗಳನ್ನು ಕಳೆದುಕೊಂಡಿದ್ದಾರೆ . ಈ ಹಿನ್ನಲೆಯಲ್ಲಿ ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗೆ ಲಾಕ್‌ಡೌನ್ ಕಾರಣದಿಂದ ಇರುವ ಅವಕಾಶಗಳನ್ನು ಕಳೆದುಕೊಳ್ಳಬಾರದು ಎನ್ನುವ ಕಾರಣಕ್ಕೆ ನಾವು ‘ ಮನೆಬಾಗಿಲಿಗೆ ಪಿಯು ಪ್ರವೇಶ ಪರೀಕ್ಷೆ ‘ ಸೇವೆಯನ್ನು ಆರಂಭಿಸಿದ್ದೇವೆ. ಸಾಕಷ್ಟು ವಿದ್ಯಾರ್ಥಿಗಳ ಸಮಸ್ಯೆಗಳ ಪರಿಹಾರಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವಿರುದ್ಧ ಹೈಕೋರ್ಟ್‌ನಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆಪಿಯು ವಿಜ್ಞಾನ ಜಗತ್ತಿನ ಅವಕಾಶಗಳು ಮತ್ತು ಸ್ಕಾಲರ್‌ಶಿಪ್‌ಗಳ ಮಾಹಿತಿ ನೀಡುವಂತ ‘ ಮಾರ್ನಿಂಗ್ ಟಾಕ್ ವಿತ್ ಡ್ರೈಫ್ರೂಟ್ಸ್ ‘ ಎನ್ನುವ ವಿಶೇಷ ಕಾರ್ಯಾಗಾರವನ್ನು ಪ್ರಗತಿ ಸೈನ್ಸ್ ಹೌಸ್’ಆರಂಭಿಸಿದೆ . ಈ ಕಾರ್ಯಾಗಾರದಲ್ಲಿ ದಾವಣಗೆರೆ ಮತ್ತು ಶಿವಮೊಗ್ಗದ ವಿವಿಧ ಕಾಲೇಜುಗಳ ನಿರ್ದೇಶಕರು , ಪ್ರಾಚಾರ್ಯರು , ಉಪನ್ಯಾಸಕರು , ವೈದ್ಯರು , ಪೋಷಕರು , ಉದ್ಯಮಿಗಳು , ಪಿಯು ವಿಜ್ಞಾನ ಕಾಲೇಜಿನ & 10 ನೇ ತರಗತಿ ಬಳಿಕ ಪಿಯು ವಿಜ್ಞಾನ ಓದಬೇಕು ಎನ್ನುವ 450 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ ಇದರ ಲಾಭ ಪಡೆದುಕೊಂಡಿದ್ದಾರೆ .ಹಾಗಾಗಿ ಪಿಯು ವಿಜ್ಞಾನ ಜಗತ್ತಿನಲ್ಲಿ ವಿಶೇಷ ಸಾಧನೆ ಮಾಡಬೇಕು ಎನ್ನುವ ವಿದ್ಯಾರ್ಥಿಗಳು & ಪೋಷಕರು ಇದರ ಲಾಭ ಪಡೆಯಬಹುದಾಗಿದೆ . ಕಾರ್ಯಾಗಾರಕ್ಕೆ ಹೆಸರು ನೋಂದಣಿ ಮಾಡಿಕೊಳ್ಳಲು ಮೊ  : 9980438600 , 9972727602 , 9663481600 , 8792563600 ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದರು.