ಪ್ರಗತಿ ಸೇವಾನಿಧಿಗಳಿಗೆ ಬಹುಮಾನ

ಮಾಲೂರು, ಆ. 13: ಪಟ್ಟಣದ ಪದ್ಮಾವತಿ ಕಾಂಪ್ಲೆಕ್ಸ್‌ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ತಾಲೂಕಿನಲ್ಲಿ ಕಳೆದ ೮-೯ ವರ್ಷದಲ್ಲಿ ಗ್ರೂಪ್ ೨೮೯೨ ಹಾಗೂ ೨೮೦೦೦ ಸದ್ಯಸರಿಗೆ ಪ್ರಗತಿನಿಧಿ ನೀಡಿದ ಸೇವಾ ಪ್ರತಿನಿಧಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಯೋಜನೆ ಅಧಿಕಾರಿ ಸತೀಶ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸ್ವಉದ್ಯೋಗಕ್ಕೆ ಪೂರ್ವಕವಾಗಿ ತರಬೇತಿ ನೀಡಿ ಸೂರ್ಯನ ಕಿರಣಗಳಿಂದ ಉತ್ಪಾದನೆಯಾದ ಅನುಷ್ಠಾನ ಮಾಡಲು ಸದಸ್ಯರಿಗೆ ಮಾಹಿತಿ ನೀಡಿ ಹಾಲು ಕರೆಯುವ ಯಂತ್ರ, ಸೋಲಾರ್ ಲೈಟ್ ವಾಟರ್ ಹಿಟರ್, ಟೈಲರಿಂಗ್ ಮಷೀನ್, ಅಳವಡಿಸಿದರೆ ೭೫೦ ಅನುದಾನ ಉಚಿತವಾಗಿಸಿಗುತ್ತದೆ. ಪ್ರತಿ ಸದಸ್ಯರು ಮತ್ತು ಕೃಷಿಗೆ ಪೂರಕವಾಗಿ ತರಬೇತಿಯನ್ನು ನೀಡಿ ನಮ್ಮ ಯೋಜನೆಯಿಂದ ಸಾಲ ಪಡೆದು ತೆಂಗು, ಅಡಿಕೆ, ದಾಳಿಂಬೆ, ಸಪೋಟ, ಗುಲಾಬಿ, ಕನಕಾಂಬರ, ಹನಿ ನೀರಾವರಿ ಪದ್ಧತಿ ಬೋರ್ವೆಲ್ ರಚನೆ ಟ್ರಾಕ್ಟರ್ ಖರೀದಿ ರೋಟವೇಟರ್ ಕಲ್ಟಿವೇಟರ್ ಔಷಧಿ ಸಿಂಪಡಣೆ ಮಾಡುವ ಯಂತ್ರ ಮೇಕೆ ಸಾಕಾಣಿಕೆ ಕುರಿ ಸಾಕಾಣಿಕೆ ಮಾದರಿಯಾಗಿ ಮಾಡಿದರೆ ನಮ್ಮ ಯೋಜನೆ ವತಿಯಿಂದ ೫೦೦೦ ತನಕ ಅನುದಾನಸಿಗುತ್ತದೆ ಎಂದರು.
ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ಸೋಲಾರ್ ಮ್ಯಾನೇಜರ್ ಆದ ವಿನೋದ್ ರಾಜ್, ಹರೀಶ್, ತಾಲೂಕಿನ ಕೃಷಿ ಮಧುರಾಜ್, ವಿಚಕ್ಷಣಾಧಿಕಾರಿ ತಿಪ್ಪೇಸ್ವಾಮಿ, ಉಷಾರಾಣಿ, ಮೇಲ್ವಿಚಾರಕರು ರಮೇಶ್, ದರ್ಶನ್, ಆದಿ ನಾರಾಯಣ, ರಂಜಿತ್, ಮಂಜುನಾಥ, ಪುರುಷೋತ್ತಮ್, ಕವಿತಾ, ನೇತ್ರಾವತಿ, ಲಕ್ಷ್ಮಿನರಸಿಂಹಸ್ವಾಮಿ, ಸಹಾಯಕ ಪ್ರಬಂಧಕರು ಮಮತಾ, ತಾಲೂಕಿನ ಎಲ್ಲಾ ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.