ಪ್ರಗತಿ ಪಿಯು 100% ಫಲಿತಾಂಶ

ವಿಜಯಪುರ;ಮಾರ್ಚ್ ೨೦೨೩ ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ನಮ್ಮ ಕಾಲೇಜಿನಲ್ಲಿ ಹಾಜರಾಗಿದ್ದ ಒಟ್ಟು ೧೫೩ ವಿದ್ಯಾರ್ಥಿನಿಯರಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ೪೦, ಪ್ರಥಮ ದರ್ಜೆಯಲ್ಲಿ ೮೮, ದ್ವಿತೀಯ ದರ್ಜೆಯಲ್ಲಿ ೧೪ ಮತ್ತು ತೃತೀಯ ದರ್ಜೆಯಲ್ಲಿ ೦೪ ಸೇರಿ ಒಟ್ಟು ೧೪೬ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಸರಾಸರಿ ಶೇ. ೯೫.೫ ಫಲಿತಾಂಶ ಪಡೆದಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ ಹಾಜರಾದ ೫೧ ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿ ಶೇ. ೧೦೦% ಫಲಿತಾಂಶವನ್ನು ಸಾಧಿಸಲಾಗಿರುತ್ತದೆ. ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರುಗಳನ್ನು ಸಂಸ್ಥೆಯ ಅಧ್ಯಕ್ಷರಾದ ಎಂ. ಸತೀಶ್ ಕುಮಾರ್, ವ್ಯವಸ್ಥಾಪಕ ನಿರ್ದೇಶಕರಾದ ಕೃಪಾಶಂಕರ್ ಎಸ್. ಮತ್ತು ಪ್ರಾಂಶುಪಾಲರಾದ ಬಿ.ಎನ್. ರಮೇಶ್ ರವರು ಅಭಿನಂದಿಸಿದ್ದಾರೆ.
೧೦೦ಕ್ಕೆ ೧೦೦ ಅಂಕಗಳಿಸಿದವರು;-ವರ್ಷಿನಿ ಎಲ್ – ಕನ್ನಡ ೧೦೦, ಗೌತಮಿ ಎನ್ ವಿ . ಲೆಕ್ಕಶಾಸ್ತ್ರ ೧೦೦, ಗಣಕ ವಿಜ್ಞಾನ ೧೦೦, ವಿಸ್ಮಯ ಜಿ – ಜೀವಶಾಸ್ತ್ರ ೧೦೦, ಗಹನಾ ಎಂ. ಎನ್ – ಗಣಕ ವಿಜ್ಞಾನ ೧೦೦, ಬಿಂದುಶ್ರೀ ಎಸ್. ಗಣಕ ವಿಜ್ಞಾನ ೧೦೦ ಪಡೆದಿರುತ್ತಾರೆ.