ಪ್ರಗತಿ ಪರಿಶೀಲನಾ ಸಭೆ ಅಧಿಕಾರಿಗಳ ಬೆಂಡೆತ್ತಿದ-ಶಾಸಕಿ ರೂಪಾಕಲಾ ಶಶಿಧರ್

ಕೆಜಿಎಫ್,ಆ,೪-ಲಂಚ, ಲಂಚ, ಲಂಚ.. ಕೆಜಿಎಫ್ ತಾಲೂಕು ಆಡಳಿತ ಭವನದಲ್ಲಿರುವ ಕಂದಾಯ ಇಲಾಖೆಯ ಪ್ರತಿಯೊಂದು ಗೋಡೆಯೂ ಜನರನ್ನು ಲಂಚಕ್ಕಾಗಿ ಪೀಡಿಸುತ್ತಿದ್ದು, ನಿಮಗೆ ಮಾನ ಮಾರ್ಯದೇ ಇದೆಯೇ, ಕಷ್ಟು ಪಟ್ಟು ೧೩ ತಿಂಗಳಲ್ಲಿ ೩ ಎಕರೆ ಜಾಗದಲ್ಲಿ ಸುಸಜ್ಜಿತವಾದ ತಾಲೂಕು ಆಡಳಿತ ಭವನವನ್ನು ನಿರ್ಮಿಸಿದ್ದು, ಇಂತಹ ಆಡಳಿತ ಭವನದಲ್ಲಿ ಲಂಚಕೋರರು, ಸರಕಾರಿ ಭೂಮಿಯನ್ನು ಕಬಳಿಕೆ ಮಾಡುವವರನ್ನು ಕೂರಿಸಿರುವುದಕ್ಕೆ ನನ್ನ ಮನಸ್ಸಿಗೆ ತುಂಬಾ ನೋವು ಉಂಟಾಗುತ್ತಿದೆ ಎಂದು ಶಾಸಕಿ ರೂಪಕಲಾಶಶಿಧರ್ ತಾಲೂಕು ಆಡಳಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೇಳಿದರು.
ಪಂಚಾಯಿತಿ ಕಚೇರಿಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಇಲಾಖೆ ಮುಖ್ಯಾಧಿಕಾರಿ ಸುರೇಶ್ ಅವರನ್ನು ತರಾಟೆಗೆ ತೆಗೆದುಕೊಂಡು, ಎಷ್ಟು ಸರಕಾರಿ ಭೂಮಿ ಸಂರಕ್ಷಿಸಲಾಗಿದೆ, ಬಂಗಾರದ ಗಣಿ ಗ್ರಾಮದ ಸರ್ವೇ ನಂ ೨, ೩, ರಲ್ಲಿ ಅಕ್ರಮ ಬಡಾವಣೆ ನಿರ್ಮಾಣ, ದೇವಾಲಯಗಳ ನಿರ್ಮಾಣ ಮಾಡಿರುವುದು ನಿಮಗೆ ಕಣ್ಣು ಕಾಣುವುದಿಲ್ಲವೇ ಎಂದ ಪ್ರಶ್ನಿಸಿದರು .
ಸಾರ್ವಜನಿಕರು ಕಂದಾಯ ಇಲಾಖೆಯ ಕುರಿತು ಹಾದಿ ಬೀದಿಗಳಲ್ಲಿ ಅಕ್ರಮ ಭೂಮಿಗಳ ಪರಬಾರೆ, ಬದುಕಿದ್ದವರ ಹೆಸರಿನಲ್ಲಿ ಪೌವತಿಖಾತೆ, ನಮೂನೆ ೫೩ ರಲ್ಲಿ ನಿಯಮನಗಳನ್ನು ಗಾಳಿಗೆ ತೂರಿ ಪಹಣಿ ಮ್ಯುಟೇಶನ್ ಕೂರಿಸಿರುವುದು, ಅಲ್ಲದೆ ಬಡ ರೈತರಿಗೆ ಸಾಗುವಳಿ ಚೀಟಿಯಡಿ ಮಂಜೂರಾದ ಒಂದು ಎಕರೆ, ಎರಡು ಎಕರೆ ಭೂಮಿಗೆ ಖಾತೆ ಮಾಡಿಸಿ ಕೊಳ್ಳಲು ರೈತರ ಚಪ್ಪಲಿ ಸವೆದುಹೋಗುತ್ತದೆ ಎಂದು ಕಂದಾಯ ಇಲಾಖೆ ಕರ್ಮ ಕಾಂಡಗಳನ್ನು ಶಾಸಕರು ಸಭೆಯಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟರು.
ಇನ್ನೂ ಮುಂದಾದರೂ ಮಾನವೀಯತೆಯಿಂದ ಕೆಲಸ ಮಾಡುವುದನ್ನು ಕಲಿಯರಿ, ಒಬ್ಬರ ಭೂಮಿಯನ್ನು ಇನ್ನೊಬ್ಬರ ಹೆಸರಿಗೆ ಪರಬಾರೆ ಮಾಡುವುದನ್ನು ನಿಲ್ಲಿಸಿ ಎಂದರು.
೯೪ ಸಿಸಿ ಅಡಿಯಲ್ಲಿ ಬಡವರು ವಾಸ ಮಾಡುವ ಮನೆಗಳಿಗೆ ಹಕ್ಕುಪತ್ರ ನೀಡಲು ಏನು ಕ್ರಮಕೈಗೊಂಡಿದ್ದೀರಾ, ಬಡವರ ಕೆಲಸ ಮಾಡಲು ನಿಮಗೆ ಎಲ್ಲಿ ಪುರುಸೊತ್ತು ಇದೆ ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು, ಕೂಡಲೇ ೯೪ ಸಿಸಿ ಅಡಿಯಲ್ಲಿ ಬಡವರಿಗೆ ನಿವೇಶನ ಹಕ್ಕು ಪತ್ರ ನೀಡಲು ಎಲ್ಲಿ ಅವಕಾಶ ಸಿಗುತ್ತದೂ ಅತಂಹ ಕಡೆ ಸರಕಾರಿ ಭೂಮಿಯನ್ನು ಗುರುತಿಸುವ ಕೆಲಸವನ್ನು ಮಾಡಿ ಎಂದರು.
ತಾಲೂಕಿನಲ್ಲಿ ೩೩ ಸಾವಿರ ವಿದ್ಯಾರ್ಥಿಗಳ ವ್ಯಾಸಂಗ:
ಶಿಕ್ಷಣ ಇಲಾಖೆ ಕುರಿತು ಬಿಇಓ ಚಂದ್ರಶೇಖರ್ ಮಾಹಿತಿ ನೀಡಿ, ತಾಲೂಕಿನಲ್ಲಿ ಸರಕಾರಿ ಶಾಲೆಗಳು, ಅನುದಾನ ರಹಿತ ಶಾಲೆಗಳು, ಸರಕಾರಿ ಅನುದಾನ ಪಡೆಯುತ್ತಿರುವ ಶಾಲೆಗಳಲ್ಲಿ ಒಟ್ಟು ೩೩ ಸಾವಿರ ಮಕ್ಕಳು ೧ ರಿಂದ ೧೦ ನೇ ತರಗತಿ ವರೆಗೂ ವಿದ್ಯಾಭ್ಯಾಸ ಮಾಡುತ್ತಿದ್ದಾರೆ, ಸರಕಾರಿ ಶಾಲೆಯ ಮಕ್ಕಳಿಗೆ ಬಿಸಿ ಊಟ, ಷೂ, ಸಾ?????ಗಳನ್ನು ವಿತರಣೆ ಮಾಡಲಾಗಿದೆ, ಎಲ್ಲ ಸರಕಾರಿ ಶಾಲೆಯ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರವನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು, ಶಾಸಕರು ಮಾತನಾಡಿ, ತಾಲೂಕಿನ ಸರಕಾರಿ ಶಾಲೆಗಳ ಅಸ್ತಿಯ ದಾಖಲೆಗಳನ್ನು ಬಿಇಓ ಕಚೇರಿಯಲ್ಲಿ ಸಂರಕ್ಷಣೆ ಮಾಡಬೇಕೆಂದು ತಿಳಿಸಿದರು.
ಅಂಗನವಾಡಿಗಳಿಗೆ ಭೇಟಿ ನೀಡಲು ಅಧಿಕಾರಿಗೆ ಶಾಸಕರು ಸೂಚನೆ:
ತಾಲೂಕಿನಲ್ಲಿರುವ ಪ್ರತಿಯೊಂದು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸೂಚಿಸಿದ ಶಾಸಕಿ ರ್ಗಬೀಣೀಯರು, ಬಾಣಂತಿಯರು ಮಕ್ಕಳಿಗೆ ನೀಡುತ್ತಿರುವ ಪೌಷ್ಟಿಕ ಆಹಾರ ವಿತರಣೆಯಾಗುತ್ತಿದ್ದೇಯೇ ಪರಿಶೀಲಿಸಿ ಕ್ರಮಕೈಗೊಳ್ಳಿ, ಒಂದು ವೇಳೆ ಅಂಗನವಾಡಿ ಆಹಾರ ಸರ್ಮಪಕವಾಗಿ ವಿತರಣೆಯಾಗದೆ ಇದ್ದಲ್ಲಿ ನೋಟಿಸ್ ಜಾರಿ ಮಾಡಿ ಕ್ರಮ ಜರುಗಿಸುವಂತೆ ಶಾಸಕರು ಸೂಚನೆ ನೀಡಿದರು.
ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ೮೦ ವಿದ್ಯಾರ್ಥಿಗಳ ಜಾಗದಲ್ಲಿ ೨೦೦ ವಿದ್ಯಾರ್ಥಿಗಳು ಇರುವುದರಿಂದ ಜಾಗದ ಕೊರತೆಯಾಗಿದೆ ಎಂದು ತಾಲೂಕು ಅಧಿಕಾರಿ ಸಕಪಾಲ್ ಸಭೆಯಲ್ಲಿ ತಿಳಿಸಿದರು,
ಇದಕ್ಕೆ ಪರ್ಯಾಯ ವ್ಯವಸ್ಥೆ ಕೈಗೊಳ್ಳುವಂತೆ ಶಾಸಕರು ಸೂಚಿಸಿ ಹಿಂದಳಿದ ವರ್ಗಗಳ ವಸತಿ ನಿಲಯವನ್ನು ಬೇತಮಂಗಲ ಮತ್ತು ಕ್ಯಾಸಂಬಳ್ಳಿಯಲ್ಲಿ ಸ್ಥಾಪನೆ ಮಾಡುವಂತೆ ಅಧಿಕಾರಿಗೆ ಶಾಸಕರು ಸೂಚಿಸಿದರು.
ತಾಲೂಕು ಆರೋಗ್ಯಧಿಕಾರಿ ಸ್ವರಸತಿ ತಮ್ಮ ಇಲಾಖೆ ಕುಂದು ಕೊರತೆಗಳ ಬಗ್ಗೆ ಸಭೆಯಲ್ಲಿ ತಿಳಿಸಿದಾಗ, ಪ್ರತಿಯೊಂದು ಹಳ್ಳಿಯಲ್ಲಿ ರೋಗಿಗಳು ಬಂದಾಗ ನೀವು ತಿಳುವಳಿಕೆ ನೀಡಿ ರೋಗಿಗಳು ಇಂತಹ ಕಾಯಿಲೆ ಇಂತಹ ವೈದ್ಯರನ್ನು ಸಂಪರ್ಕ ಮಾಡಿದರೆ ನಿಮಗೆ ಖಾಯಿಲೆ ವಾಸಿಯಾಗುತ್ತದೆ ಎಂದು ಮನವರಿಕೆ ಮಾಡಿಕೊಡಬೇಕೆಂದು ತಿಳಿಸಿದರು.
ಸಭೆಯಲ್ಲಿ ತಾಲೂಕು ಪಂ, ಇ.ಓ ಮಂಜುನಾಥ್ ಇದ್ದರು.