
ದೇವದುರ್ಗ.ಆ.೦೭- ಪಟ್ಟಣದ ತಾಲ್ಲೂಕು ಪಂಚಾಯಿತಿ ಸಂಭಾಗಣದಲ್ಲಿ ಸೋಮವಾರ ನಡೆದ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕಿ ಕರೇಮ್ಮ ಜಿ ನಾಯಕ ತೀವ್ರ ತರಾಟೆಗೆ ತೆಗೆದುಕೊಂಡರು.
ಕೋತ್ತದೋಡ್ಡಿ ಗ್ರಾಮದ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ರಾಜ್ಯ ಹೆದ್ದಾರಿ ಮತ್ತು ಶಾಲೆಯ ಹಿಂಬಾಗದಲ್ಲಿ ಎನ್ ಆರ್ ಬಿ ಸಿ ಕಾಲುವೆ ಇದೆ ಶಾಲೆಗೆ ಕಾಂಪೌಂಡ್ ಇಲ್ಲದೆ ಮಕ್ಕಳನ್ನು ಯಾಕೆ ಶಾಲೆಗೆ ಕಳಿಸಿದಿದ್ದಿರಿ. ಮಕ್ಕಳಿಗೆ ತೊಂದರೆ ಯಾದರೆ ಪೋಲಿಸ್ ಇನ್ಸಪೆಕ್ಟರ್ ಹೊಸಕೆರಪ್ಪ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಶಾಲೆಯ ಮುಖ್ಯಗುರಗಳ ಮೇಲೆ ಕ್ರಮ ಕೈಗೊಳವೆ ಎಂದು ತರಾಟೆಗೆ ತೆಗೆದುಕೊಂಡರು.
ಕಡ್ಡಾಯವಾಗಿ ಎಲ್ಲಾ ಅಧಿಕಾರಿಗಳು ಕೆ ಸಿ ಎಸ್ ಆರ್ ನಿಯಮದಂತೆ ಕೇಂದ್ರ ಸ್ಥಾನದಲ್ಲಿ ವಾಸಿಸಿ ಜನರಿಗೆ ಅನುಕೂಲ ಆಗುವಂತೆ ಕಾರ್ಯ ನಿರ್ವಹಿಸಿ ತಾಲ್ಲೂಕಿನ ಬಹುತೇಕ ಸಿಬ್ಬಂದಿ ದೂರದ ಜಿಲ್ಲಾ ಕೇಂದ್ರದಿಂದ ಬಂದು ಕಾರ್ಯ ನಿರ್ವಹಿಸುವ ಬಗ್ಗೆ ಮಾಹಿತಿ ಇದೆ.
ಸಭೆಗೆ ಗೈರಾದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಸುಖದೇವ್ ಸೇರಿದಂತೆ ಎಲ್ಲರಿಗೂ ನೋಟಿಸ್ ಜಾರಿ ಮಾಡುವಂತೆ ತಿಳಿಸಿದರು.