ಪ್ರಗತಿ ಪರಿಶಿಲನೆ ನಡೆಸಿದ ಶಾಸಕ ಡಾ.ಅವಿನಾಶ್ ಜಾಧವ

ಚಿಂಚೋಳಿ,ಆ.1- ಶಾಸಕರಾದ ಡಾ. ಅವಿನಾಶ್ ಜಾಧವ್ ಅವರ ಅಧ್ಯಕ್ಷತೆಯಲ್ಲಿ ತಾಲೂಕ ಪಂಚಾಯತ ಕಾರ್ಯಾಲಯದಲ್ಲಿ ಜರುಗಿದ ತಾಲೂಕ ಮಟ್ಟದ ಪ್ರಗತಿ ಪರಿಶೀಲನ ಸಬೆಯಲ್ಲಿ ಮಾತನಾಡಿ ರಾಜ್ಯ ಸರ್ಕಾರದ ಯೋಜನೆಗಳು ಎಲ್ಲಾ ಇಲಾಖೆಯ ಅಧಿಕಾರಿಗಳು ತಾಲೂಕಿನ ಜನರಿಗೆ ವಿವಿಧ ಯೋಜನೆಗಳ ಲಾಭವನ್ನು ತಾಲೂಕಿನ ಜನರಿಗೆ ತಲುಪಿಸಬೇಕು.
ತಾಲೂಕಿನ ಎಲ್ಲಾ ಸರ್ಕಾರಿ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳಿಗಾಗಿ ಮೂಲ ಸೌಕರ್ಯಗಳಾದ ಶೌಚಾಲಯ ವ್ಯವಸ್ಥೆ ಮತ್ತು ನೀರಿನ ಕಲ್ಪಿಸಿ ಕೊಡಬೇಕೆಂದು ಕ್ಷೇತ್ರ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಈಗಾಗಲೇ ಶಿಕ್ಷಣ ಇಲಾಖೆಗಾಗಿ 45 ಲಕ್ಷ ರೂಪಾಯಿ ಮಂಜೂರು ಮಾಡಲಾಗಿದೆ ಅದರಿಂದ ಗ್ರಾಮೀಣ ಮಕ್ಕಳ ಶಾಲೆಯಲ್ಲಿ ಶೌಚಾಲಯ ಮತ್ತು ನೀರಿನ ಸಮಸ್ಯೆ ಬರದಂತೆ ನೋಡಿಕೊಳ್ಳಲು ಸಭೆಯಲ್ಲಿ ಶಾಸಕರು ಹೇಳಿದರು.
ಸಭೆಯಲ್ಲಿ ಚಿಂಚೋಳಿ ತಹಸಿಲ್ದಾರ ಅಂಜುಮ್ ತಬಸ್ಸುಮ್, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹಂಪಣ್ಣ ನಾಯಕ್, ಮತ್ತು ತಾಲೂಕಿನ ಎಲ್ಲಾ ಅಧಿಕಾರಿಗಳು ಹಾಗೂ ವಿಧ ಇಲಾಖೆ ಸಿಬ್ಬಂದಿಗಳು ಸಭೆಯಲ್ಲಿ ಭಾಗಿಯಾಗಿದ್ದರು.