ಪ್ರಗತಿ ಕೇಂದ್ರಗಳಿಂದ ಸಂಸ್ಕಾರಯುತ ಗ್ರಾಮ ನಿರ್ಮಾಣ

ಔರಾದ :ಜು.25: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕ್ರಷಿ ಹಾಗೂ ಸಾಂಸ್ಕøತಿಕ ಸಂಘದ ವತಿಯಿಂದ ಔರಾದ ತಾಲುಕಿನ ಗಣೆಶಪೂರ ಗ್ರಾಮದಲ್ಲಿ ನಡೆದ ಪ್ರಗತಿ ಕೇಂದ್ರದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿದ ವಿಕಾಸ ಅಕಾಡೆಮಿಯ ತಾಲೂಕು ಸಂಚಾಲಕ ಗುರುನಾಥ್ ವಟಗೆ ಅವರು ಮಾತನಾಡಿ ಪ್ರತಿ ಗ್ರಾಮಗಳನ್ನು ಆದರ್ಶ ಹಾಗೂ ಉತ್ತಮ ಸಂಸ್ಕಾರಿತ ಗ್ರಾಮ ಮಾಡುವ ನಿಟ್ಟಿನಲ್ಲಿ ಪ್ರತಿ ಹಳ್ಳಿಗೆ ಬಾಲ ಸಂಸ್ಕಾರ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು. ಮಕ್ಕಳ ಸರ್ವತೋಮುಖ ಬೇಳವಣಿಗೆಗೆ ಸಂಘ ಶ್ರಮಿಸುತ್ತಿದೆ ಎಂದು ನುಡಿದರು.

ಸಂಘದ ಜಿಲ್ಲಾ ಪ್ರಮುಖರಾದ ರೇವಣಸಿದ್ದ ಜಾಡರ್ ಮಾತನಾಡಿ ಸಂಘದಿಂದ ಸರ್ವ ವ್ಯಾಪಿ ಸರ್ವ ಸ್ಪರ್ಶಿ ಎಂಬಂತೆ ಸಣ್ಣ ಮಕ್ಕಳಿಗೆ ಸಂಸ್ಕಾರ ಕೇಂದ್ರ, ಮಹಿಳೆಯರಿಗಾಗಿ ಪ್ರತಿ ಗ್ರಾಮಗಳಲ್ಲಿ ಕೌಶಲ್ಯ ತರಬೇತಿ ಕೆಂದ್ರ, ನಿರುದ್ಯೋಗ ಯುವಕ ಯುವತಿಯರಿಗೆ ತರಬೇತಿ, ಸಾವಯವ ಕೃಷಿ ಉತ್ತೆಜನ ಸೆರದಂತೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಪ್ರಶಾಂತ ಸಿಂಧೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸತಿಷ ಕಾಳೆ, ಶಿಲಾಬಾಯಿ ಗಾಯಕವಾಡ, ಎಕಂಬಾ ಗ್ರಾಮದ ಪ್ರಗತಿ ಕೇಂದ್ರದ ಸಂಯೋಜಕಿ ಪ್ರಿಯಾಂಕಾ ಗಾಯಕವಾಡ ಅತಿಥಿ ಸ್ಥಾನ ವಹಿಸಿದರು. ಕಾರ್ಯಕ್ರಮವನ್ನು ಪ್ರಗತಿ ಕೇಂದ್ರದ ಸಂಯೋಜಕಿ ರೋಹಿಣಿ ನಿರೂಪಿಸಿ ವಂದಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.