ಪ್ರಗತಿಯ ಹೆಜ್ಜೆ ೫.೦ ಯಶಸ್ವಿ

ಆನೇಕಲ್, ಫೆ. ೨೨- ಕ್ಷೇತ್ರ ಶಿಕ್ಷಣಾದಿಕಾರಿಗಳ ಕಚೇರಿ ಆವರಣದಲ್ಲಿ ಶಿಕ್ಷಣ ಇಲಾಖೆ ಮತ್ತು ಮಂತ್ರ ಪಾರ್ ಚೇಂಜ್ ಸಹಯೋಗದಲ್ಲಿ ಆಯೋಜಿಸಿದ್ದ ಪ್ರಗತಿಯ ಹೆಜ್ಜೆ ೫.೦ ಕಾರ್ಯಕ್ರಮಕಕ್ಕೆ ಕ್ಷೇತ್ರ ಶಿಕ್ಷಣಾದಿಕಾರಿಗಳಾದ ಶ್ರೀಮತಿ ಜಯಲಷ್ಮೀ ರವರು ಮತ್ತು ಖ್ಯಾತ ಪವಾಡ ಬಯಲು ತಜ್ಞ ಹುಲಿಕಲ್ ನಟರಾಜ್ ರವರು ಚಾಲನೆ ನೀಡಿ ಶುಭ ಹಾರೈಸಿದರು.
ಇನ್ನು ಆನೇಕಲ್ ತಾಲೂಕಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ವಿನೂತನ ಹಾಗೂ ಸೃಜನಾತ್ಮಕ ಅನ್ವೇಷಣೆಗಳಿಗೆ ಪ್ರೋತ್ಸಾಹ ನೀಡುವ ಜೊತೆಗೆ ವಿದ್ಯಾರ್ಥಿಗಳ ಶಾಲಾ ಹಂತದ ಕಲಿಕೆಗೆ ಉತ್ತಮ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಪ್ರಗತಿ ಹೆಜ್ಜೆ ಕಾರ್ಯಕ್ರಮವನ್ನ ಪ್ರತಿ ವರ್ಷ ಮಂತ್ರ ಸಂಸ್ಥೆ ವತಿಯಿಂದ ನಡೆಸಲಾಗುತ್ತಿದೆ.
ಇಂದು ಕ್ಲಸ್ಟರ್ ಮಟ್ಟದಲ್ಲಿ ಅಯ್ಕೆಯಾದ ಶಾಲಾ ವಿದ್ಯಾರ್ಥಿಗಳು ತಮ್ಮ ಸೃಜನಾತ್ಮಕ ವೈಜ್ಞಾನಿಕ ಆವಿಷ್ಕಾರಗಳನ್ನು ಪ್ರತಿ ಹೆಜ್ಜೆ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಿದರು.
ಹಲವು ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ವಿದ್ಯಾರ್ಥಿಗಳ ನೂತನ ಆವಿಷ್ಕಾರಗಳ ಪ್ರಾತ್ಯಕ್ಷಿತೆ ಮೂಲಕ ತಿಳಿದು ಕೊಂಡರು.
ಖ್ಯಾತ ಪವಾಡ ಬಯಲು ತಜ್ಞ ಹುಲಿಕಲ್ ನಟರಾಜ್ ಮಾತನಾಡಿ ಇತ್ತೀಚೆಗೆ ಸಮಾಜದಲ್ಲಿ ಮೌಡ್ಯತೆ ಹೆಚ್ಚಾಗುತ್ತಿದೆ, ಜನರು ವಿಜ್ಞಾನವನ್ನ ಮರೆತು ಮೂಢನಂಬಿಕೆಯ ದಾಸರಾಗುತ್ತಿದ್ದಾರೆ. ವಿದ್ಯಾರ್ಥಿಗಳು ಮೌಡ್ಯತೆಯನ್ನ ಮರೆತು ವಿಜ್ಞಾನಕ್ಕೆ ಹೆಚ್ಚಿನ ಮಹತ್ವವನ್ನ ನೀಡುವ ಕೆಲಸ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ತಿಳುವಳಿಕೆ ಮೂಡಿಸಿದರು
ಕಾರ್ಯಕ್ರಮದಲ್ಲಿ ಬಿಆರ್ ಪಿ ಬಾಸ್ಕರ್, ಶ್ರೀಮತಿ ರಿಜ್ವಾನ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ. ಶಿವಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ, ಚಂದ್ರಶೇಖರ್, ಖಜಾಂಚಿ ಗೋವಿಂದರಾಜ್, ಮಂತ್ರ ಪಾರ್ ಚೇಂಜ್ ಸಂಸ್ಥೆಯ ವ್ಯವಸ್ಥಾಪಕ ಮೌನೇಶ್, ಆನೇಕಲ್ ನರೇಂದ್ರ ಕುಮಾರ್, ಮಂತ್ರ ಸಂಸ್ಥೆಯ ವೆಂಕಟೇಶ್, ಪ್ರದೀಪ್, ರಾಘವೇಂದ್ರ, ರಪೀ, ಮೌನೇಶ್, ನಾರಾಯಣ್, ವಿಜಯ್, ಬಸವರಾಜ್, ಬಾಲಕೃಷ್ಣ, ಶಿವರಾಜ್, ಗಣಪತಿ ಭಟ್, ತಮ್ಮಣ್ಣ, ಧನಲಷ್ಮೀ, ಸರಸ್ವತಿ, ರಾಧ, ಸಿದ್ದರಾಜು, ಅಲ್ಲಮ ಪ್ರಭು ಬಾಗವಹಿಸಿದ್ದರು.