ಪ್ರಗತಿಯ ಮುಂಚೂಣಿಯಲ್ಲಿರುವ ಹರ ವಿವಿಧೊದ್ದೇಶ ಸೌಹಾರ್ದ ಸಹಕಾರಿ

ದಾವಣಗೆರೆ.ಡಿ.೨೨; ಹರ ವಿವಿಧೊದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಇದರ 2019-20ನೇ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ ರೂ 34,51.ಲಕ್ಷಗಳ  ನಿವ್ವಳ ಲಾಭಗಳಿಸಿದ್ದು. ಹಾಗೂ ಸದಸ್ಯರಿಗೆ     ಶೇ 10 ಷೇರು ಲಾಭಾಂಶವನ್ನು ಘೋಷಣೆ ಮಾಡಿದ್ದು. ಸಹಕಾರಿಯು ಅಭಿವೃಧ್ದಿ ಪಥದಲ್ಲಿ ಸಾಗಿದೆ ಎಂದು ಸಹಕಾರಿಯ ಅಧ್ಯಕ್ಷರಾದ ಬಿ.ಸಿ.ಉಮಾಪತಿಯವರು ಹರ್ಷ ವ್ಯಕ್ತಪಡಿಸಿದರು. ಕಳೆದ 7-8 ತಿಂಗಳು ಕೋವಿಡ್ 19 ಪರಿಸ್ಥಿತಿಯಲ್ಲೂ ಸಹಕಾರಿಯ ಠೇವಣಿ ಸಂಗ್ರಹ ಹಾಗೂ ಸಾಲ ವಸೂಲಾತಿಯಲ್ಲಿ ಗಮನಾರ್ಹ ಪ್ರಗತಿ ಕಂಡಿದ್ದು ಇದಕ್ಕೆ ಸದಸ್ಯರ ಸಹಕಾರ ಪ್ರಮುಖ ಕಾರಣ ಎಂದು ತಿಳಿಸಿದರು. ನಗರದ ಡಾ. ಸದ್ದೋಜಾತ ಶಿವಚಾರ್ಯ ಮಹಾಸ್ವಾಮಿಗಳವರ ಮಠ, ಶಿವಾಚಾರ್ಯ ನಿಕೇತನ, ಹೀರೆಮಠ.ದಲ್ಲಿ ದಿನಾಂಕ 20-12-2020 ರಂದು ಜರುಗಿದ ಸಹಕಾರಿಯ 2019-20ನೇ ಸಾಲಿನ 8ನೇ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹಕಾರಿಯು ಷೇರು ಸಂಗ್ರಹಣೆಯಲ್ಲಿಯೂ ಸಹ ಗಮನಾರ್ಹ ಪ್ರಗತಿಯನ್ನು ಕಂಡಿದ್ದು ಸಹಕಾರಿಯು ಕಳೆದ ಸಾಲಿನಲ್ಲಿ ರೂ 92.40 ಲಕ್ಷಗಳ ಷೇರು ಬಂಡವಾಳವಿದ್ದು ಆರ್ಥಿಕ ವರ್ಷಾಂತ್ಯಕ್ಕೆ 1,01 ಕೋಟಿ ಷೇರು ಬಂಡವಾಳವನ್ನು ಹೊಂದಿದೆ. ಕಳೆದ ಸಾಲಿನಲ್ಲಿ 7.74 ಕೋಟಿ ರೂ ಗಳ ಠೇವಣಿ ಸಂಗ್ರಹವಾಗಿದ್ದು, ಆರ್ಥಿಕ ವರ್ಷಾಂತ್ಯಕ್ಕೆ 8.49 ಕೋಟಿ ರೂ ಗಳ ಠೇವಣಿ ಸಂಗ್ರಹವಾಗಿದೆ. ಪ್ರಸ್ತುತ ಸಹಕಾರಿಯು 7.80 ಕೋಟಿ ರೂಗಳ ಸಾಲವನ್ನು  ಸದಸ್ಯರಿಗೆ ವಿತರಿಸಿದೆ ಎಂದು ತಿಳಿಸಿದರು.ಸರ್ವತೋಮುಖ ಅಭಿವೃದ್ದಿಲ್ಲಿ ತನ್ನದೇ ಆದ ಚಾಪು ಮೂಡಿಸಿರುವ ಈ ಸಹಕಾರಿ ಪ್ರಗತಿದಾಯಕವಾಗಿ ಮುನ್ನಡೆಯಲು ಸಹಕಾರಿ ಸದಸ್ಯರ ಪ್ರೋತ್ಸಹ ಹಾಗೂ ಸಹಕಾರ, ಸಿಬ್ಬಂದಿ ವರ್ಗದವರು ಹಾಗೂ ಪಿಗ್ಮಿ ಸಂಗ್ರಹಕಾರರ ಪರಿಶ್ರಮ, ಆಡಳಿತ ಮಂಡಲಿ ಇಚ್ಚಾಶಕ್ತಿ ಹಾಗೂ ಹಿಂದಿನ ಕಾರ್ಯದರ್ಶಿಯಾಗಿದ್ದ ದಿ. ಕೆ ಎಂ ತೋಟದ್ರವರ ಮಾರ್ಗದರ್ಶನ ಕಾರಣವಾಗಿದೆ ಎಂದು ತಿಳಿಸಿದರು. ಪ್ರತಿಯೊಬ್ಬ ಸಹಕಾರಿಯ ಸದಸ್ಯರು ಇನ್ನೂ ಹೆಚ್ಚಿನ ರೀತಿಯಲ್ಲಿ ತಮ್ಮ ಹಣಕಾಸಿನ ವಹಿವಾಟನ್ನು ನಡೆಸಿ ಸಹಕಾರಿಯ ಅಭಿವೃದ್ದಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಕರೆಕೊಟ್ಟರು.ಅಂಗಡಿ ಸಂಗಮೇಶ್ ಹಾಗೂ  ಕಲಿವೀರ ಕಳ್ಳಿಮನಿ ಕಾರ್ಯಕ್ರಮ ನಿರೂಪಿಸಿದರು.