ಪ್ರಗತಿಯಲ್ಲಿ ಹಿರಿಯೂರು ವೀರಶೈವ ಪತ್ತಿನ ಸಂಘ


ಹಿರಿಯೂರು.ನ.3- ಹಿರಿಯೂರು ತಾಲ್ಲೂಕು ವೀರಶೈವ ಪತ್ತಿನ ಸಹಕಾರ ಸಂಘ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದೆ ಎಂದು ಸಂಘದ ಅಧ್ಯಕ್ಷರಾದ ಎಸ್ ಬಿ ಶಿವಕುಮಾರ್ ಹೇಳಿದರು      2020.21 ನೇಸಾಲಿನ ಸರ್ವ ಸದಸ್ಯರಸಭೆ ಮತ್ತು ನೂತನವಾಗಿ ನಿರ್ಮಿಸಿರುವ ಶಿವಸಭಾಂಗಣದ ಉದ್ಘಾಟನೆ  ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು  ಸಂಸ್ಥೆಯು 14 ಕೋಟಿಗೂ ಅಧಿಕ ವಹಿವಾಟು ನಡೆಸಿ ಒಟ್ಟು ರೂ 7.85  ಲಕ್ಷ ನಿವ್ವಳ ಲಾಭಗಳಿಸಿ ಸಂಘವು “ಎ” ಶ್ರೇಣಿಯನ್ನು ಕಾಯ್ದಿರಿಸಿಕೊಂಡಿದೆ ಮತ್ತು 21 ನೇ ಮಹಾಸಭೆಯಲ್ಲಿ ತಮಗಿತ್ತ ವಾಗ್ದಾನದಂತೆ ಶಿವಸಭಾಂಗಣ ಇಂದು ತಮ್ಮ ಸಮ್ಮುಖದಲ್ಲಿ ಉದ್ಘಾಟನೆಗೊಂಡಿದೆ ಎಂದರು ಸಂಘದ ಏಳಿಗೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಪ್ರತಿಯಬ್ಬರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಸಂಘದ ಕಟ್ಟಡದಲ್ಲಿ ನೂತನವಾಗಿ ನಿರ್ಮಿಸಿರುವಶಿವಸಭಾಂಗಣದ ಉದ್ಘಾಟನೆಯನ್ನು ಗಾಣಿಗ ಸಮಾಜದ ಅಧ್ಯಕ್ಷರಾದ ಡಿ.ಎಸ್.ಮಹೇಶ್ ನೆರವೇರಿಸಿದರು  ಆಕಾಲಿಕ ಮರಣ ಹೊಂದಿದ ಚಿತ್ರ ನಟ ಪುನೀತ್ ರಾಜ್‌ಕುಮಾರ್ ಹಾಗೂ ದೈವಾಧೀನರಾದ ಸಂಘದ ಸದಸ್ಯರಿಗೆ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯ್ತು. ಹಾಗೂ ಸಂಘದ ಕಟ್ಟಡವನ್ನು ನಿರ್ಮಿಸಿದ ಇಂಜಿನಿಯರ್ ಸಿ.ಎಂ.ದಿವಾಕರ್ ಮತ್ತು ಕೃಷಿ ಪದವಿಯಲ್ಲಿ ಬಂಗಾರದ ಪದಕ ಪಡೆದ  ಬಿ.ಪ್ರೀತಿ ಇವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷರಾದ ಅರ್.ಟಿ.ನಾಗರಾಜ್, ನಿರ್ದೇಶಕರಾದ ವಿ.ಮಂಜುನಾಥ್, ಡಿಎಸ್.ಮಹೇಶ್,ಜಿ.ಎಸ್. ಸೋಮಶೇಖರ್, ಸಿ.ಸಿದ್ಧರಾಮಣ್ಣ, ಎಂಯಶೋಧರ, ವಿ.ವೇದಾವತಿ. ಸಿದ್ದಗಂಗಯ್ಯ, ಎ.ಬಿ.ಸಿದ್ದರಾಮಣ್ಣ, ಕೆ.ಮಹಂತೇಶ್, ಮಲ್ಲಿಕಾರ್ಜುನಪ್ಪ ಮತ್ತು ವ್ಯವಸ್ಥಾಪಕರಾದ ವಿ.ಪ್ರಸನ್ನಕುಮಾರ್, ಹಾಗೂ ಸಿಬ್ಬಂದಿ  ಪಿಗ್ಮಿ  ಪ್ರತಿನಿಧಿಗಳು  ಮತ್ತು ಸದಸ್ಯರು ಪಾಲ್ಗೊಂಡಿದ್ದರು