ಪ್ರಗತಿಪರ ರೈತರಿಗೆ ಸನ್ಮಾನ

ಕಾಳಗಿ. ಏ.3 : ತಾಲೂಕಿನ ಭರತನೂರ ಗ್ರಾಮದಲ್ಲಿ ಶ್ರೀ ಗುರುನಂಜೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಲಿಂಗೈಕ್ಯ ಶ್ರೀ ಗುರುನಂಜೇಶ್ವರ ಮಹಾಸ್ವಾಮಿ ಅವರ 27 ನೇ ಪುಣ್ಯ ಸ್ಮರಣೋತ್ಸವ, ಮಹಾಪುರಾಣ ಪ್ರಾರಂಭ ಮತ್ತು ಮಂಗಲೋತ್ಸ್ವದ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಜರಗಿತು.

ರಟಕಲ್ ಸಿದ್ದರಾಮ ಮಹಾಸ್ವಾಮಿಗಳು, ರಾವುರ ಸಿದ್ದಲಿಂಗ ದೇವರು, ಶಾಸಕರಾದ ಅವಿನಾಶ ಜಾಧವ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಜಗದೇವ ಗುತ್ತೇದಾರ, ಜಿಲ್ಲಾ ಪಂಚಾಯತ ಸದಸ್ಯರಾದ ಸಂಜೀವನ ಯಾಕಪೂರ, ಗೌತಮ್ಮ ಪಾಟೀಲ, ರಾಮಲಿಂಗ ರೆಡ್ಡಿ ದೇಶಮುಖ, ಮುಖಂಡರಾದ ಬಸವರಾಜ ಪಾಟೀಲ ಹೆರೂರ್, ಸುಧಾಕಾರ ಪಾಟೀಲ ರಾಜಾಪೂರ, ಜಗದೀಶ ಪಾಟೀಲ ಸೇರಿದಂತೆ ಅನೇಕರಿದ್ದರು.