ಪ್ರಗತಿಪಥದಲ್ಲಿ ವೇದಪತ್ತಿನ ಸಹಕಾರ ಸಂಘ 

 ಹಿರಿಯೂರು.ಆ.30 ನಗರದ ಹೆಸರಾಂತ ವೇದಾ ಪತ್ತಿನ ಸಹಕಾರ ಸಂಘವು ಈ ಸಾಲಿನಲ್ಲಿ 8.10 ಲಕ್ಷ ನಿವಳ ಲಾಭಗಳಿಸಿದ್ದು ಪ್ರಗತಿಪಥದಲ್ಲಿ ಸಾಗುತ್ತಿದೆ  ಎಂದು ಸಂಘದ ಅಧ್ಯಕ್ಷರಾದ ಎಂಎಸ್ ರಾಘವೇಂದ್ರ ಹೇಳಿದರು. ನೆಹರು ಮೈದಾನದ ಎ ಕೃಷ್ಣಪ್ಪ ರೋಟರಿ ಸಭಾಂಗಣದಲ್ಲಿ ನಡೆದ ಸಂಘದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಮಹಾಬಲೇಶ್ , ನಿರ್ದೇಶಕರಾದ ಡಾ ಎಂ.ಎನ್. ಶ್ರೀ ಪತಿ, ಬಿ ಕೆ ಕರಿಯಪ್ಪ, ಎನ್ ಸುಂದರಂ ಕೆ ಸತ್ಯನಾರಾಯಣ ಚಾರ್ ಎಂ ವಿ ಹರ್ಷ ಡಿ ಎಸ್ ತಿಪ್ಪೇಸ್ವಾಮಿ. ಎಂ.ಡಿ ಸಣ್ಣಪ್ಪ, ಜಿ. ದೇವರಾಜ್ ಪಾಲ್ಗೊಂಡಿದ್ದರು. ಎಂ ಆರ್ ಅಮೃತ ಲಕ್ಷ್ಮಿ ಪ್ರಾರ್ಥಿಸಿದರು, ನಿರ್ದೇಶಕರಾದ ಎಂ ವಿ ಹರ್ಷ ಎಲ್ಲರನ್ನು ಸ್ವಾಗತಿಸಿದರು. ವ್ಯವಸ್ಥಾಪಕರಾದ ಗುರುರಾಜ್ ವರದಿ ಓದಿದರು ಸಿಬ್ಬಂದಿ ವರ್ಗದವರು ಹಾಗೂ  ಶೇರುದಾರರು ಭಾಗವಹಿಸಿದ್ದರು.