ಪ್ರಗತಿಪಥದಲ್ಲಿ ಅಳ್ನಾವರ ಕೋ ಆಪ್ ಬ್ಯಾಂಕ್

ಅಳ್ನಾವರ,ಏ7: ಗ್ರಾಮೀಣ ಬಾಗದ ಜನರಿಗೆ ಆರ್ಥಿಕ ಸಹಾಯ ನೀಡುವ ಮೂಲಕ ಸ್ವಾವಲಂಬಿ ಬದುಕಿನ ಕಲ್ಪನೆ ನೀಡಿದ ಇಲ್ಲಿನ ದಿ ಅಳ್ನಾವರ ಅರ್ಬನ್ ಕೋ ಆಪ್ ಬ್ಯಾಂಕ್ ಪ್ರಗತಿ ಪಥದಲ್ಲಿ ಸಾಗುತ್ತಿದೆ. ಆರ್ಥಿಕ ವರ್ಷದಲ್ಲಿ ರೂ. 341.57 ಕೋಟಿಗೂ ಅಧಿಕ ವ್ಯವಹಾರ ಮಾಡಿ ರೂ. 65.36 ಲಕ್ಷ ನಿವ್ಹಳ ಲಾಭ ಗಳಿಸಿದೆ ಎಂದು ಬ್ಯಾಂಕಿನ್ ಅಧ್ಯಕ್ಷ ಬಸವರಾಜ ತೇಗೂರ ಹೇಳಿದರು.
ಸುದ್ದಿಗಾರರೊಂದಿಗೆ ಬ್ಯಾಂಕಿನ ಆರ್ಥಿಕ ಸ್ಥಿತಿಯನ್ನು ಬಿಚ್ಚಿಟ್ಟ ಅವರು, ಸದಸ್ಯರ ಮತ್ತು ಗ್ರಾಹಕರ ಬದಲಾಗುತ್ತಿರುವ ಅವಶ್ಯಕತೆಗೆ ತಕ್ಕಂತೆ ಬ್ಯಾಂಕಿಂಗ್ ಸೇವೆ ಒದಗಿಸಲಾಗಿದೆ. ಸಹಕಾರ ಒಲಯದ ಉನ್ನತ್ ಧ್ಯೇಯ ಹಾಗೂ ಮೌಲ್ಯಗಳ ಆಧಾರದ ಅಡಿಯಲ್ಲಿ ನೈತಿಕ ವ್ಯವಹಾರ ಪದ್ದತಿ ಅನುಸರಿಸಿ ಜನರ ಆರ್ಥಿಕ ಅವಶ್ಯಕತೆ ಪೂರೈಸಲಾಗಿದೆ ಎಂದರು.
ಸನ್ 2020-21 ಅರ್ಥಿಕ ಸಾಲಿನಲ್ಲಿ ಬ್ಯಾಂಕ್ ರೂ. 57.95 ಕೋಟಿ ಠೇವಣಿ ಸಂಗ್ರಹ ಮಾಡಿ, ರೂ 43. 29 ಕೋಟೊಗೂ ಹೆಚ್ಚು ಸಾಲ ನೀಡಿದೆ. ಆದಾಯ ತೆರಿಗೆ ಇಲಾಖೆಗೆ ರೂ. 40 ಲಕ್ಷ ಮುಂಗಡ ತೆರಿಗೆ ಹಣ ಪಾವತಿಸಿದ ನಂತರವೂ ಬ್ಯಾಂಕ್ ಉತ್ತಮ ಲಾಭ ಮಾಡಿದೆ ಎಂದರು.
ಆಜಾಧ ರಸ್ತೆಯಲ್ಲಿನ ಶಾಖಾ ಕಚೇರಿಯಲ್ಲಿ ಕೂಡಾ ಉತ್ತಮ ವ್ಯವಹಾರ ನಡೆದಿದೆ. ಬ್ಯಾಂಕ್ ಸ್ವತಂತ್ರ ಐ.ಎಫ್.ಎಸ್.ಸಿ ಕೋಡ್ ಸಂಖ್ಯೆ ಹೊಂದಿದೆ. ಇದು ದೈನಂದಿನ ವ್ಯವಹಾರ ಬಳಿಕೆಗೆ ತುಂಬಾ ಸಹಕಾರಿಯಾಗಿದೆ. ಈ ವ್ಯವಸ್ಥೆಯನ್ನು ಸರಿಯಾಗಿ ಉಪಯೋಗ ಮಾಡಿಕೊಂಡು, ಗ್ರಾಹಹರು ತ್ವರಿತವಾಗಿ ಹಣ ವರ್ಗಾವಣೆ ಮಾಡಬಹುದಾಗಿದೆ. ಬ್ಯಾಂಕಿನ್ ವ್ಯವಹಾರ ಗಳಿಗೆ ಅಧುನಿಕ ಪ್ರಪಂಚದ ಬದಲಾವಣೆಗೆ ತಕ್ಕಂತೆ ಅಧುನಿಕ ಸ್ಪರ್ಷ ನೀಡಲು ಆಡಳಿತ ಮಂಡಳಿ ಸದಾ ಮುಂದೆ ಇದೆ. ಎನ್ ಇ ಎಫ್ ಟಿ ಮತ್ತು ಆರ್ ,ಟಿ. ಜಿ. ಎಸ್ ಸೇವೆ ಪ್ರಾರಂಬಿಸಲಾಗಿದೆ. ಇದರ ಲಾಭ ಗ್ರಾಹಕರು ಪಡೆದುಕೊಳ್ಳುತ್ತಿದ್ದಾರೆ ಎಂದರು.
ಬ್ಯಾಂಕಿನ್ ಆರ್ಥಿಕ ಸ್ಥಿತಿ ಗತಿಯನ್ನು ಏಳೆ ಎಳೆಯಾಗಿ ಬಿಡಿಸಿಟ್ಟ ಅಧ್ಯಕ್ಷ ಬಸವರಾಜ ತೇಗೂರ, ರೂ. 22.40 ಕೋಟಿ ಶೇರು ಬಂಡವಾಳ ಇದೆ. ರೂ. 5.25 ಕೋಟಿ ನಿಧಿ ಸಂಗ್ರಹಿಸಲಾಗಿದೆ. ರೂ. 67.90 ಕೋಟಿ ದುಡಿಯುವ ಬಂಡವಾಳ ಹೊಂದಿದ ನಮ್ಮ ಬ್ಯಾಂಕ್ ಕೊರೊನಾ ಕಾಲ ಘಟ್ಟವನ್ನು ಸಮರ್ಥವಾಗಿ ಎದುರಿಸಿ ಸದಸ್ಯರ ಹಿತಾ ಶಕ್ತಿ ಸರಿಯಾಗಿ ನಿಬಾಯಿಸುವದರ ಜೊತೆಗೆ ನಿವ್ಹಳ್ ಎನ್ ಪಿ ಎ ಪ್ರಮಾಣವನ್ನು 4.06 ಕ್ಕೆ ಸೀಮಿತಗೊಳಿಸಿದೆ ಎಂದರು.
ಸಕಾಲದಲ್ಲಿ ಸಾಲ ಮರು ಪಾವತಿ ಮಾಡಿ ಬ್ಯಾಂಕಿನ್ ಏಳಿಗೆಗೆ ಕೈಜೊಡಿಸಿದ ಗ್ರಾಹಕರಿಗೆ ಕೃತಜ್ಷತೆ ತಿಳಿಸಿದ ಅಧ್ಯಕ್ಷ ತೇಗೂರ, ಬ್ಯಾಂಕ್ ಬದಲಾದ ಕಾಲದಲ್ಲಿ ತನ್ನ ಚಟುವಟಿಕೆಗಳನ್ನು ಇನ್ನಷ್ಟು ಚುರುಕುಗೊಳಿಸಲು ನಿರ್ಧರಿಸಿದೆ. ಗ್ರಾಹಕರ ಹಿತ್ ಕಾಪಾಡಲು ಸದಾ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಶ್ರಮಿಸುತ್ತಿದೆ ಎಂದರು.
ಬ್ಯಾಂಕ್ ತನ್ನ ಆರ್ಥಿಕ ಚಟುವಟಿಕೆ ಜೊತೆಗೆ ಸಾಮಾಜಿಕ ಕಾರ್ಯದಲ್ಲಿ ಕೂಡಾ ಮುಂದೆ ಇದೆ. ಪ್ರತಿ ವರ್ಷ ಪ್ರತಿಭಾವಂತ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ.
ಕೋವಿಡ್ ಕಾಲದಲ್ಲಿ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ರೂ. ಒಂದು ಲಕ್ಷ ಧೇಣಿಗೆ ನೀಡಿ ಮಾನವೀಯತೆ ತೋರಿದೆ. ಕೊರೊನಾ ವಾರಿಯರ್ಸಗಳಾದ ತಾಲ್ಲೂಕಿನ 28 ಜನ ಆಶಾ ಸೇನಾನಿಗಳಿಗೆ ತಲಾ ರೂ . ಮೂರು ಸಾವಿರ ಪ್ರೋತ್ಸಾಹ ಧನ ನೀಡಲಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಅಧ್ಯಕ್ಷ ಬಸವರಾಜ ತೇಗೂರ ಅವರ ಜೊತೆಗೆ ಉಪಾಧ್ಯಕ್ಷ ಆರ್. ಎಂ .ಗುಂಡಕಲ್, ನಿರ್ದೇಶಕರುಗಳಾದ ಎನ್.ಎನ್. ಗಡಕರ, ಸಿ.ಕೆ. ಪೋಕಾರ ( ಪಟೇಲ) , ಎಸ್.ಜಿ. ಜಕಾತಿ, ಡಿ.ಬಿ. ತೇಗೂರ, ಎಂ.ಕೆ. ಬಡಸ್ಕರ್, ಎ. ವಿ. ಉಡುಪಿ , ಎಂ.ಆರ್.ಗಾಣಿಗೇರ, ಜೆ.ಆರ್. ತೊಲಗಿ, ಆರ್. ಎ. ಅಷ್ಟೇಕರ, ಎನ್. ಪಿ. ಹಂಜಗಿ, ಎಫ್. ಎಸ್. ಮೇದಾರ, ಎ.ಸ್. ಹಿರೇಮಠ, ಪಿ.ಜಿ. ಮಟ್ಟಿ, ಸಂಧ್ಯಾ ಎಸ್. ಅಂಬಡಗಟ್ಟಿ ಹಾಗೂ ಮ್ಯಾನೇಜರ ರವಿ ಪಟ್ಟಣ ಇದ್ದರು.