ಪ್ರಖ್ಯಾತ ಯೂಟ್ಯೂಬರ್ ಅಗಸ್ತ್ಯ ಸಾವು

ಡೆಹ್ರಾಡೂನ್(ಉತ್ತರಾಖಂಡ),೪-ಜನಪ್ರಿಯ ಯೂಟ್ಯೂಬರ್ ಹಾಗೂ ವೃತ್ತಿಪರ ಬೈಕರ್ ಅಗಸ್ತ್ಯ ಚೌಹಾಣ್ ನಿನ್ನೆ ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ. ಡೆಹ್ರಾಡೂನ್ ನಿವಾಸಿ ಅಗಸ್ತ್ಯ ಚೌಹಾಣ್, ವೃತ್ತಿಯಲ್ಲಿ ಬೈಕ್ ಸವಾರ. ಅವರ ಯೂ ಟ್ಯೂಬ್ ಚಾನಲ್ ಪ್ರೋ ರೈಡರ್ ೧೦೦೦’ ೧.೨ ಮಿಲಿಯನ್ ಚಂದಾದಾರರನ್ನು ಹೊಂದಿದೆ. ಅಪಘಾತಕ್ಕೆ ೧೬ ಗಂಟೆಗಳ ಮೊದಲು ಅವರು ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ.
ವೇಗವಾಗಿ ಬೈಕ್ ಸ್ಟಂಟ್ ಮಾಡುವ ವಿಡಿಯೋಗಳನ್ನು ತನ್ನ ಚಾನೆಲ್ ನಲ್ಲಿ ಅಪ್ ಲೋಡ್ ಮಾಡುತ್ತಿದ್ದರು. ವೇಗದ ಚಾಲನೆ ಅಪಾಯಕಾರಿ ಎಂಬ ಎಚ್ಚರಿಕೆಯನ್ನೂ ತಮ್ಮ ಪ್ರತಿ ವಿಡಿಯೋದಲ್ಲಿ ನೀಡುತ್ತಿದ್ದರು. ಕೊನೆಗೆ ಅದೇ ವೇಗದಲ್ಲಿ ಪ್ರಾಣ ಕಳೆದುಕೊಂಡರು.
ಈ ಹಿನ್ನೆಲೆಯಲ್ಲಿ ನಿನ್ನೆ ಆಗ್ರಾದಿಂದ ಜಾನ್ ಎಕ್ಸ್ ೧೦ಆರ್ ನಿಂಜಾ ಸೂಪರ್ ಬೈಕ್ ನಲ್ಲಿ ದೆಹಲಿಯಲ್ಲಿ ಮೋಟಾರ್ ಬೈಕ್ ರೇಸಿಂಗ್ ನಲ್ಲಿ ಭಾಗವಹಿಸಲು ಹೊರಟಿದ್ದರು. ಗಂಟೆಗೆ ೩೦೦ ಕಿಲೋಮೀಟರ್ ವೇಗದಲ್ಲಿ ಸಾಗುತ್ತಿದ್ದ ಅಗಸ್ತ್ಯರ ಬೈಕ್ ಉತ್ತರ ಪ್ರದೇಶದ ಉಪ್ಪಲ್ ಪೊಲೀಸ್ ಠಾಣೆ ವ್ಯಾಪ್ತಿಯ ಯಮುನಾ ಎಕ್ಸ್ ಪ್ರೆಸ್ ಹೈವೇ ಬಳಿ ಬಂದಾಗ ನಿಯಂತ್ರಣ ತಪ್ಪಿ ಡಿವೈಡರ್ ಗೆ ಬಲವಾಗಿ ಡಿಕ್ಕಿ ಹೊಡೆದಿದೆ.
ಈ ಅಪಘಾತದಲ್ಲಿ ಅಗಸ್ತ್ಯ ಅವರ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ನಂತರ ಅವರು ಧರಿಸಿದ್ದ ಹೆಲ್ಮೆಟ್ ತುಂಡಾಗಿದೆ. ಮೊನ್ನೆಯಷ್ಟೇ ಈ ಸಾಹಸಕ್ಕೆ ಕೈಹಾಕಿದ್ದ ಅಗಸ್ತ್ಯನ ಸಾವು ಅವರ ಅಭಿಮಾನಿಗಳನ್ನು ದುಃಖದಲ್ಲಿ ಮುಳುಗಿಸಿದೆ.