ಕಲಬುರಗಿ:ಜು.29: ರಾಷ್ಟ್ರೀಯ ಪ್ರಾಣಿಯಾದ ಹುಲಿಗಳ ಸಂಖ್ಯೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಅವುಗಳ ಸಂರಕ್ಷಣೆ ಅಗತ್ಯ. ಹುಲಿಗಳಿರುವ ಅರಣ್ಯ ಸುರಕ್ಷಿತವಾಗಿದ್ದು, ಇದು ಪ್ರಕೃತಿ ಸಮತೋಲನಕ್ಕೆ ಪೂರಕವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಜೆ.ಆರ್.ನಗರದ ‘ಕೊಹಿನೂರ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದಿಂದ ಶನಿವಾರ ಜರುಗಿದ ‘ಅಂತಾರಾಷ್ಟ್ರೀಯ ಹುಲಿಗಳ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಹುಲಿಗಳ ಸಂರಕ್ಷಣೆಗಾಗಿ ‘ಹುಲಿಗಳ ಸಂರಕ್ಷಣಾ ಪ್ರದೇಶ’, ‘ಸಂರಕ್ಷಣಾ ಕೋಶಗಳ ಆರಂಭ’, ‘ರಾಷ್ಟ್ರೀಯ ಉದ್ಯಾನಗಳ ಸ್ಥಾಪನೆ’, ‘ಹುಲಿಗಳ ಸಮೀಕ್ಷಾ ಕಾರ್ಯ’, ‘ಕಳ್ಳ ಬೇಟೆ ತಡೆಯುವ ವಿಶೇಷ ತಂಡ’ಗಳ ರಚನೆ ಸೇರಿದಂತೆ ಮುಂತಾದ ಕ್ರಮಗಳನ್ನು ಕೈಗೊಂಡು ಹುಲಿಗಳು ಸಂರಕ್ಷಣೆ ಮಾಡುವ ಕಾರ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಿವಯೋಗಪ್ಪ ಬಿರಾದಾರ, ದತ್ತು ಹಡಪದ, ಪ್ರಥ್ವಿ ಕೋರವಾರ ಸೇರಿದಂತೆ ಮತ್ತಿತರರಿದ್ದರು.