ಪ್ರಕೃತಿ ಸಂಪತ್ತನ್ನು ಕೃತ್ರಿಮವಾಗಿ ಸೃಷ್ಠಿಸಲು ಸಾಧ್ಯವಿಲ್ಲಃ ಪ್ರೇಮಾನಂದ ಬಿರಾದಾರ

ವಿಜಯಪುರ, ಜೂ.6-ಈ ಸೃಷ್ಠಿಯ ಮೇಲೆ 84 ಲಕ್ಷ ಜೀವರಾಶಿಗಳು ಬದುಕುತ್ತಿವೆ. ಗಾಳಿ ಪ್ರತಿ ಜೀವಿಯ ಜೀವಾಳವಾಗಿದೆ. ನಾವು ಪ್ರಕೃತಿ ಸಂಪತ್ತನ್ನು ಕೃತಿಕವಾಗಿ ಸೃಷ್ಠಿಸಲು ಸಾಧ್ಯಲಿಲ್ಲ ಎಂದು ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಹೇಳಿದರು.
ಅವರು ನಗರದ ಕನಕದಾಸ ಬಡಾವಣೆಯಲ್ಲಿನ ಉದ್ಯಾನವನದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ಯ ಸಸಿ ನೆಟ್ಟು ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ನಗರದ ವಿವಿಧ ಬಡಾವಣೆಗಳಲ್ಲಿ ನಿರ್ಮಿಸಿರುವ ಉದ್ಯಾನವನದಲ್ಲಿರುವ ಗಿಡ ಮರಗಳು, ಅಲಂಕಾರಿಕ ಸಸಿಗಳನ್ನು ಪೋಷಿಸಬೇಕು. ಹಸಿರಿನಿಂದ ಕಂಗೊಳಿಸುವಂತೆ ಮಾಡಬೇಕು ಎಂದರು.
ಸಹ ವಿಸ್ತರಣಾ ನಿರ್ದೇಶಕ ಡಾ.ಆರ್.ಬಿ.ಬೆಳ್ಳಿ ಪರಿಸರ ದಿನಾಚರಣೆಯ ಮಹತ್ವದ ಕುರಿತು ತಿಳಿಸುತ್ತಾ ಈ ಸಲದ ಘೋಷವಾಕ್ಯ ಪರಿಸÀರ ವ್ಯವಸ್ಥೆ ಪುನರ್‍ಸ್ಥಾಪನೆÉಯಾಗಿದ್ದು, ಅಂದರೆ ಸಕ್ರಿಯವಾಗಿ ಮರಗಳನ್ನು ನೆಡುವದರ ಮೂಲಕ ಅಥವಾ ಪರಿಸರ ವ್ಯವಸ್ಥೆಯನ್ನು ರಕ್ಷಿಸುವ ಮೂಲಕ ಹಾಗೂ ಹೆಚ್ಚುತ್ತಿರುವ ಮಾಲಿನ್ಯವನ್ನು ಕಡಿಮೆ ಮಾಡುವ ಮೂಲಕ ಪರಿಸರವನ್ನು ರಕ್ಷಣೆ ಮಾಡಬೆಕೆಂದರು. ನಾವೆಲ್ಲ ಭವಿಷ್ಯದ ಉತ್ತಮ ಜೀವನಕ್ಕಾಗಿ ಪ್ರತಿಯೊಬ್ಬರು ಗಿಡಮರಗಳನ್ನು ನೆಟ್ಟು ಪೋಷಿಸಬೇಕು ಈ ಮೂಲಕ ಪರಿಸರವನ್ನು ಉಳಿಸಬೆಕೆಂದರು.
ಈ ಕಾರ್ಯಕ್ರಮದಲ್ಲಿ ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ ಕ್ಯಾತನ್ ಹಾಗೂ ಪರಿಸರವಾದಿ ಶ್ರೀಶೈಲ ಸಜ್ಜನ ಪರಿಸರ ದಿನಾಚರಣೆಯ ಕುರಿತು ಮಾತನಾಡಿದರು. ಬಡಾವಣೆಯ ಶಿಕ್ಷಕಿ ಕೆ.ಸುನಂದಾ, ಎಲ್.ಬಿ.ಬಿರಾದಾರ, ಬಿ.ಜಿ.ಮಠಪತಿ, ಮಧುಗೊಂಡ ಶಿವಗದ್ದಿ ಸೇರಿದಂತೆ ಅನೇಕ ನಾಗರಿಕರು, ಹಿರಿಯರು ಉಪಸ್ಥಿತರಿದರು.