ಪ್ರಕೃತಿ ವಿಕೋಪ ತಡೆಯುವ ಮುಂಜಾಗ್ರತಾ ಸಭೆ

ಸಿರುಗುಪ್ಪ, ಜೂ.09 : ನಗರದ ತಾಲೂಕು ಕಛೇರಿಯಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಪ್ರಕೃತಿ ವಿಕೋಪದಡಿಯಲ್ಲಿ ಎದುರಾಗುವ ಅನಾಹುತಗಳನ್ನು ತಡೆಗಟ್ಟುವ ಮುಂಜಾಗ್ರತೆ ಸಭೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ತಹಶೀಲ್ದಾರ್ ಎಸ್.ಬಿ.ಕೂಡಲಗಿ ಮಾತನಾಡಿ, ಮಳೆಗಾಲ ಪ್ರಾರಂಭವಾಗಿರುವುದರಿಂದ ಹೆಚ್ಚು ಮಳೆಗಾಲವಾದರೆ ನದಿಗೆ ಹೆಚ್ಚು ನೀರು ಬಂದು ಹಾಗೂ ತುಂಗಭದ್ರ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಾಗ ನದಿಯ ಪಾತ್ರದಲ್ಲಿರುವ ಗ್ರಾಮಗಳಿಗೆ ಹಾಗೂ ಜನ ಜಾನುವಾರುಗಳಿಗೆ ಅಪಾಯವಾಗದಂತೆ ತಡೆಗಟ್ಟಲ್ಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು, ಜಲಾಶಯದಿಂದ ನದಿಗೆ 2ಲಕ್ಷ ಹೆಚ್ಚು ಕ್ಯೂಸೇಕ್ಸ್ ನೀರು ಬಿಟ್ಟಾಗ ಪ್ರವಾಹಕ್ಕೆ ತುತ್ತಾಗುವ ಬಾಗೆವಾಡಿ ಮತ್ತು ಹಚ್ಚೋಳ್ಳಿ ಗ್ರಾಮಗಳಿಗೆ ಅಪಾಯವು ಎದುರಾಗದಂತೆ ಅಲ್ಲಿನ ಜನರಿಗೆ ಅರಿವು ಮೂಡಿಸಿ ಮಳೆಗಾಲ ಕಳೆಯುವವರಿಗೆ ಸ್ಥಳಾಂತರಿಸಬೇಕು ಮತ್ತು ಪ್ರವಾಹ ಇಳಿದ ನಂತರವು ಸಾಂಕ್ರಾಮಿಕ ರೋಗಗಳು ಬಾರದಂತೆ ಅಲ್ಲಿನ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗಮನವಹಿಸಿ ಪ್ರವಾಹ ಬಂದು ಹೋದ ಪ್ರದೇಶಗಳಲ್ಲಿ ತ್ಯಾಜ್ಯಗಳನ್ನು ವಿಲೇವಾರಿ ಮಾಡಿ, ಬ್ಲೀಚಿಂಗ್ ಪೌಡರ್ ಸಿಂಪರಣೆ ಮಾಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾರ್ಯನಿರ್ವಾಹಕಾಧಿಕಾರಿ ಶಿವಪ್ಪ ಸುಬೇದಾರ್, ಕೃಷಿ ಸಹಾಯಕ ನಿದೇರ್ಶಕ ನಜೀರ್ ಅಹ್ಮದ್, ತೋಟಗಾರಿಕೆ ಹಿರಿಯ ನಿದೇರ್ಶಕ ವಿಶ್ವನಾಥ, ಪ್ರಭಾರಿ ತಾಲೂಕು ಆರೋಗ್ಯಾಧಿಕಾರಿ ವಿದ್ಯಾಶ್ರೀ, ಪೌರಾಯುಕ್ತ ಪ್ರೇಮ್ ಚಾಲ್ರ್ಸ್, ನರೇಗಾ ಯೋಜನಾಧಿಕಾರಿ ನಿರ್ಮಲ, ನೀರಾವರಿ ಇಲಾಖೆ ಹನುಮಂತಪ್ಪ ನಾಯಕ ಸೇರಿದಂತೆ ತಾಲೂಕು ಅಧಿಕಾರಿಗಳು ಇದ್ದರು