ಪ್ರಕೃತಿ ವಿಕೋಪ ಎದುರಿಸಲು ತಾಲೂಕ ಆಡಳಿತ ಸನ್ನದ್ದರಾಗಿ:ಡಾ.ಅಜಯಸಿಂಗ್

ಜೇವರ್ಗಿ:ಜು.28: ಸತತವಾಗಿ ಒಂದು ವಾರದಿಂದ ಮಳೆ ಸುರಿತ್ತಿದ್ದು ಅಪಾರ ಜಾನುವಾರಗಳು ಮನೆಗಳು ಬಿದ್ದುಹೋಗಿವೆ ಅವುಗಳ ಸರ್ವೆ ಸಂಪೂರ್ಣವಾಗಿ ಮಾಹಿತಿ ಕೊಡಬೇಕು ತಾಲೂಕ ಆಡಳಿತದ ಪ್ರತಿಯೊಂದು ಇಲಾಖೆ ಅಧಿಕಾರಿಗಳು ಪ್ರಕೃತಿ ವಿಕೋಪಕ್ಕೆ ಬಲಿಯಾದ ಕುಟುಂಬಗಳಿಗೆ ಭೇಟಿ ಮಾಡಿ ಅವರಿಗೆ ಪರಿಹಾರ ಕಾರ್ಯ ನೀಡಲು ಸನ್ನದ್ಧರಾಗಬೇಕೆಂದು ಶಾಸಕ ಡಾಕ್ಟರ್ ಅಜಯ್ ಸಿಂಗ್ ಹೇಳಿದರು ಪಟ್ಟಣದ ಸರ್ಕಾರಿ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ಸತತವಾಗಿ ಮಳೆಯಿಂದ 55 ಮನೆಗಳು ಬಿದ್ದಿವೆ ಅದಕ್ಕೆ ಪರಿಹಾರ ಕೊಡಲು ತೀರ್ಮಾನ ಮಾಡಲಾಗಿದೆ ಮತ್ತು ಬಿರಾಳ ಗ್ರಾಮದ ಮಹಿಳೆಗೆ 5 ಲಕ್ಷ ಪರಿಹಾರ ಕೂಡ ಕೊಡಲಾಗಿದೆ ಭೀಮಾ ತೀರದಲ್ಲಿರುವ ಹಳ್ಳಿಗಳಲ್ಲಿ ನದಿಯ ದಂಡೆಯಲ್ಲಿ ಹೋಗದಂತೆ ಎಚ್ಚರಿಕೆ ವಹಿಸಬೇಕು ಮತ್ತು ಜಾನುವಾರುಗಳು ಮತ್ತು ಯಾವುದೇ ಸಂದರ್ಭ ಇಲ್ಲದೆ ಮಳೆ ಈ ಕೋಪಕ್ಕೆ ಸಾರ್ವಜನಿಕರು ಮತ್ತು ಜಾನುವಾರುಗಳು ಬಲಿಯಾಗುವ ಸಂಭವವಿದೆ ಆದ್ದರಿಂದ ನದಿಯು ತೀರದಲ್ಲಿ ದಡದ ಮೇಲೆ ಯಾರು ಹೋಗಬಾರದು ಭಾನುವಾರಗಳು ಕೂಡ ಬಿಡಬಾರದು ಮತ್ತು ಆ ಪ್ರದೇಶದಲ್ಲಿ ಗಂಜಿ ಕೇಂದ್ರ ಪ್ರಾರಂಭಿಸಲಾಗುವುದು ಹಾಗೂ ತಾಲೂಕ ಆಡಳಿತದ ಗ್ರಾಮ ಲೆಕ್ಕಾಧಿಕಾರಿಗಳು ಕಂದಾಯ ನಿರೀಕ್ಷೆಗಳು ಪ್ರತಿಯೊಂದು ಗ್ರಾಮದ ಮಾಹಿತಿಯನ್ನು ತಾಲೂಕ ಆಡಳಿತಕ್ಕೆ ತಿಳಿಸಬೇಕು ಹಾಗೂ ಕಂದಾಯ ನಿರೀಕ್ಷಕರು ಕೇಂದ್ರ ಸ್ಥಾನದಲ್ಲಿ ಇದ್ದು ಸಂಪೂರ್ಣ ಗ್ರಾಮದ ಬಗ್ಗೆ ವಿವರ ಇರಬೇಕು ಮತ್ತು ಆರೋಗ್ಯ ಇಲಾಖೆ ವತಿಯಿಂದ ಶಾಲಾ ಮತ್ತು ಹಾಸ್ಟೆಲ್ ಗಳಲ್ಲಿ ಕಡ್ಡಾಯವಾಗಿ ಆರೋಗ್ಯ ಬಗ್ಗೆ ಜಾಗೃತಿ ಮೂಡಿ ಚಿಕಿತ್ಸೆ ನೀಡಬೇಕು ಎಂದು ಹೇಳಿದರು ಸಂದರ್ಭದಲ್ಲಿ ದಂಡಾಧಿಕಾರಿಗಳ ರಾಜೇಶ್ವರಿ ಸಮಾಜ ಕಲ್ಯಾಣ ಅಧಿಕಾರಿಯ ಅಶೋಕ್ ನಾಯಕ್ ವೈದ್ಯಧಿಕಾರಿ ಸಿದ್ದು ಪಾಟೀಲ್ ಗ್ರಾಮ ಲೆಕ್ಕಾಧಿಕಾರಿ ಮಲ್ಲಿಕಾರ್ಜುನ ಚನ್ನುರ ಮುಖಂಡರಾದ ಮರಿಯಪ್ಪ ಸರಡಗಿ ಬಸಣ್ಣ ಸರ್ಕಾರ ಸೇರಿದಂತೆ ಅನೇಕರಿದ್ದರು