ಪ್ರಕೃತಿ ಅಂತರಾಷ್ಟ್ರೀಯ ಸಾಕ್ಷ್ಯ ಚಿತ್ರೋತ್ಸವದ ಉದ್ಘಾಟನೆ

ಮೈಸೂರು, ನ.24:- ವಿಶ್ವವಿದ್ಯಾಲಯದ ಧನಸಹಾಯ ಆಯೋಗ ನವದೆಹಲಿ ಹಾಗೂ ಶೈಕ್ಷಣಿಕ ಸಂವಹನ ಒಕ್ಕೂಟ ನವದೆಹಲಿ, ಶೈಕ್ಷಣಿಕ ಮಾಧ್ಯಮ ಸಂಶೋಧನಾ ಕೇಂದ್ರ ಇವರ ಸಹಯೋಗದಲ್ಲಿ ಉದ್ಘಾಟನಾ ಸಮಾರಂಭ ಮತ್ತು 23ನೇ ಯುಜಿಸಿ-ಸಿಇಸಿ ಶೈಕ್ಷಣಿಕ ವಿಡಿಯೋ ಸ್ಪರ್ಧೆಗಳ ಪ್ರದರ್ಶನ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಾಗೂ ಪ್ರಕೃತಿ ಅಂತರಾಷ್ಟ್ರೀಯ ಸಾಕ್ಷ್ಯ ಚಿತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಉದ್ಘಾಟಿಸಿದರು.
ಮೈಸೂರು ವಿವಿ ಕುಲಪತಿ ಪೆÇ್ರ.ಜಿ.ಹೇಮಂತ್ ಕುಮಾರ್ ಆಶಯ ಭಾಷಣ ಮಾಡಿದರು. ಶೈಕ್ಷಣಿಕ ಸಂವಹನ ಒಕ್ಕೂಟದ ನಿರ್ದೇಶಕ ಪೆÇ್ರ.ಜಗತ್ ಭೂಷಣ್ ನಡ್ಡ ಚಿತ್ರೋತ್ಸವದ ಕಿರುಪರಿಚಯವನ್ನು ಮಾಡಿದರು.
1998 ರಿಂದಸಿಇಸಿಶೈಕ್ಷಣಿಕ ವಿಡಿಯೋ ಸ್ಪರ್ಧೆಗಳನ್ನು ನಡೆಸುತ್ತಾ ಬಂದಿದ್ದು, ಶೈಕ್ಷಣಿಕ ವಿವಿಯೋ ನಿರ್ಮಾಣವನ್ನು ಪೆÇ್ರೀತ್ಸಾಹಿಸುವುದು ಇದರ ಉದ್ದೇಶ. ಶೈಕ್ಷಣಿಕ ಮಾಧ್ಯಮ ಸಂಶೋಧನಾ ಕೇಂದ್ರಗಳ ಮೂಲಕ ಸಿಇಸಿ ಈ ನಿರ್ಮಾಣಗಳನ್ನು ತಲುಪಲು ಪ್ರಯತ್ನಿಸುತ್ತಿದೆ.
ಶೈಕ್ಷಣಿಕ ದ್ರವ್ಯದ ಗುಣಮಟ್ಟವನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ. ಚಿತ್ರತಯಾರಿಕರನ್ನು ಪೆÇ್ರೀತ್ಸಾಹಿಸಲು ಪ್ರಕೃತಿ ಅಂತರರಾಷ್ಟ್ರೀಯ ಸಾಕ್ಷ್ಯ ಚಿತ್ರಗಳ ಉತ್ಸವವನ್ನು ಸಿಇಸಿ ಆಯೋಜಿಸುತ್ತಾ ಬಂದಿದೆ. ಪರಿಸರ, ಅಭಿವೃದ್ಧಿ, ಮಾನವ ಹಕ್ಕುಗಳ ಹಾಗೂ ಸ್ವಚ್ಛ ಭಾರತ ಮುಂತಾದ ವಿಷಯಗಳ ಬಗ್ಗೆ ಯುವಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ವಿಡಿಯೋ ಸ್ಪರ್ಧೆಯಲ್ಲಿ 12 ಸಾಕ್ಷ್ಯ ಚಿತ್ರಗಳನ್ನು, 17 ಸಾಕ್ಷ್ಯ ಚಿತ್ರಗಳನ್ನು ಪ್ರದರ್ಶಿಸಲಾಗುವುದು.
ವಿಡಿಯೋ ಸ್ಪರ್ಧೆ ವಿವಿಧ ವರ್ಗಗಳಿಗೆ ಸೀಮಿತವಾಗಿದ್ದು 25,000ದಿಂದ ಒಂದು ಲಕ್ಷದವರೆಗೆ ನಗದು ಬಹುಮಾನ ಗಳಿಸಿದೆ ವಿಜೇತ ಸಾಕ್ಷ್ಯ ಚಿತ್ರಗಳಿಗೆ ವಿಶೇಷ ಪ್ರದರ್ಶನ, ಪ್ರಮಾಣ ಪತ್ರ, ಮತ್ತು ಟ್ರೋಫಿಯ ಜೊತೆ 50,000ರೂ.ಗಳ ಬಹುಮಾನವನ್ನು ಘೋಷಿಸಲಾಗಿದೆ.