ಪ್ರಕೃತಿಯ ಮಡಿಲಿನಲ್ಲೊಂದು ಆಕರ್ಷಕ ಶಾಲೆ

(ರಾಜಲಿಂಗಪ್ಪ ಸಜ್ಜನ್)
ಗುರುಮಠಕಲ್:ಜೂ.14:ಚಂಡರಿಕಿ. ತಾಲೂಕಿನ ಚಪೆಟ್ಲಾ ಕ್ಲಸ್ಟರ್ ನಾ ವ್ಯಾಪ್ತಿಯಲ್ಲಿ ಬರುವ ನಲ್ಲಬಂಡ ತಾಂಡ (ಕಮಲನಗರ) ದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಶಾಲೆಯ ಸ್ವಲ್ಪ ದೂರದಲ್ಲಿ , ಶಾಲಾ ಎಡಬಲದಲ್ಲಿ ಹೆಚ್ಚು ಹಸುರಿನ ಬೆಟ್ಟಗಳು ,ಸುತ್ತಲು ಹೊಲಗಳಿಂದ ಕೂಡಿದೆ.
ಶಾಲೆಗೆ ಸುಸರ್ಜಿತ ಕಾಂಪೌಂಡ್ ಇದ್ದು, ಶಾಲಾ ಪ್ರವೇಶ ಗೋಡೆಗಳಲ್ಲಿ ವರ್ಲಿ ಪೇಂಟಿಂಗ್ ನ ಆಕರ್ಷಕ ಚಿತ್ರಗಳನ್ನು ರಚಿಸಿದ್ದಾರೆ.
ಶಾಲಾ ಕಂಪೌಂಡಿಗೆ ಪರಿಸರ ಸ್ನೇಹಿ ನುಡಿಗಟ್ಟುಗಳನ್ನು ಬರೆಸಿದ್ದಾರೆ.
ಪ್ರಾರಂಭ:- ಸದರಿ ತಂಡದಲ್ಲಿ 2004 -2005 ಸಾಲಿನಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾರ್ಯಾರಂಭ ಮಾಡಿದ್ದು ನಲ್ಲಬಂಡ ತಾಂಡಾವು ಸುಮಾರು 30 -40 ಕುಟುಂಬಗಳು ವಾಸವಿದ್ದ ಚಿಕ್ಕ ತಾಂಡವಾಗಿದೆ.
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ (2023-24) ಒಂದರಿಂದ ಐದನೇ ತರಗತಿಯವರೆಗೆ ಒಟ್ಟು 28 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು ಬಹುತೇಕ ವಿದ್ಯಾರ್ಥಿಗಳಿಗೆ ಸ್ಪಷ್ಟವಾದ ಕನ್ನಡ ಓದು, ಬರಹ, ಗಣಿತದ ಬುನಾದಿ ಕಲಿಕಾ ಅಂಶಗಳು ಕಲಿತಿದ್ದಾರೆ.
ಇಂದು ಶಿಕ್ಷಕರು ಮಕ್ಕಳಿಗೆ ಸೇತುಬಂಧ ಕಾರ್ಯಕ್ರಮ ಅಡಿಯಲ್ಲಿ ಒತ್ತಕ್ಷರದ ಪದಗಳನ್ನು ಪರಿಚಯಿಸಿ ಬರೆಯಲು ಕಲಿಸುತ್ತಿದ್ದರು. ಗಣಿತದ ಸಂಖ್ಯೆ ಹುಡುಕು ಚಟುವಟಿಕೆಯನ್ನು ಮಾಡಿಸಿದರು.
ಮೂರನೇ ತರಗತಿಯ ವಿದ್ಯಾರ್ಥಿ ಗೋವಿಂದ ತಂದೆ ಚಂದರ್ ವಿದ್ಯಾರ್ಥಿಯನ್ನು ಪರೀಕ್ಷಿಸಿದಾಗ ವಿದ್ಯಾರ್ಥಿಯು ನಿರರ್ಗಳವಾಗಿ ಮಗ್ಗಿ ಹಾಗೂ ಆಂಗ್ಲ ಭಾಷೆಯ ತಿಂಗಳಗಳÀ್ನು ಹೇಳಿದನು.
5ನೇ ತರಗತಿಯ ವಿದ್ಯಾರ್ಥಿ ವೆಂಕಟೇಶ್ ತಂದೆ ನಾಣ್ಯ ಇವನು ತನ್ನ ಹಿಂದಿನ ತರಗತಿಯ ಕನ್ನಡ ಭಾಷೆಯ ಪದ್ಯವನ್ನು ಸ್ಪಷ್ಟವಾಗಿ ಓದಿದನು.
ಶಾಲೆಯ ಮುಖ್ಯ ಶಿಕ್ಷಕ ಜವಾಬ್ದಾರಿ ವಹಿಸುತ್ತಿರುವ ಶ್ರೀ ಚಂದ್ರಕಾಂತ್ ಶಿಕ್ಷಕರು ಮಾತನಾಡುತ್ತಾ ಪ್ರಸ್ತುತ ಶಾಲೆಗೆ ಇಬ್ಬರು ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು, ನಾನು ಮಾತ್ರ ಕಾರ್ಯನಿರ್ವಹಿಸುತ್ತಿದ್ದೇನೆ , ಇಲಾಖೆಯ ಗಮನಕ್ಕೆ ಈ ವಿಷಯ ಇದ್ದು ಇನ್ನು ಕೆಲವೇ ದಿನಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡುವ ಭರವಸೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.
ನಮ್ಮ ತಾಂಡದ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಉತ್ತಮವಾಗಿ ಬೆರೆತು ಮನಮುಟ್ಟುವಂತೆ ಪಾಠ ಮಾಡುತ್ತಾರೆ ಎಂದು ಶಾಲೆಯ ಎಸ್ ಡಿ ಎಂ ಸಿ ಸದಸ್ಯರು ತಿಳಿಸಿದರು.
ಒಟ್ಟಾರೆಯಾಗಿ ಶಾಲೆಯು ಭೌತಿಕವಾಗಿ ಆಕರ್ಷಕವಾಗಿದ್ದು ಶಿಕ್ಷಕರು ಮಕ್ಕಳೊಂದಿಗೆ ಉತ್ತಮವಾದ ಪಾಠ ಬೋಧನೆಯಲ್ಲಿ ತೊಡಗಿದ್ದು ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉತ್ತಮ ಎನ್ನುವುದು ಸಾಬೀತಾ ಗುವಂತಿದೆ.