ಪ್ರಕೃತಿಯನ್ನೇ ಗುರು ಎಂದು ಭಾವಿಸಿ ಪ್ರಕೃತಿಯಿಂದ ಸಮರ್ಪಣಾ ಭಾವ ಕಲಿಯಬೇಕು : ಹನುಮಂತರಾವ್ ಪಾಟೀಲ್

ಬೀದರ:ಜು.17: ಮಕ್ಕಳು ಪ್ರಕೃತಿಯನ್ನೇ ಗುರು ಎಂದು ಭಾವಿಸಿ ಪ್ರಕೃತಿಯಿಂದ ಸತ್ಯ, ತ್ಯಾಗ ಭಾವನೇ,ಸಮರ್ಪಣಾ ಭಾವ ಪ್ರಾಣಿ ಪಕ್ಷಿಗಳಿಂದ ಕಲಿಯಬೇಕು ಪುಣ್ಯಕೋಟಿಯ ಹಾಗೆ ನಾವಾಗಬೇಕೆಂದರು. ಮೋಕ್ಷ ಪ್ರಾಪ್ತಿಗಾಗಿ ಒಳ್ಳೆಯ ಸದ್ಗುಣಗಳನ್ನು ಕಲಿತು ಸಮಾಜದ ಋಣ ತಿರಿಸಬೇಕು ಎಂದು ಬೌದ್ಧಿಕ ಮಾತನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಹನುಮಂತರಾವ್ ಪಾಟೀಲ್ ಹೇಳಿದರು.

ಶ್ರೀ ಮಡಿವಾಳೇಶ್ವರ ಶಾಲೆಯಲ್ಲಿ ಇಂದು ಗುರು ವಂದನಾ ಕಾರ್ಯಕ್ರಮ ಹರ್ಷ ಉಲ್ಲಾಸ, ಭಕ್ತಿ, ಶೃದ್ಧೆಯಿಂದ ಹಮ್ಮಿಕೊಳ್ಳಲಾಗಿತ್ತು.

ಸಿಧ್ದಾರೂಢ ಮಠದ ಗುರುದೇವ ಆಶ್ರಮದ ಗಣಪತ್ ಮಹಾರಾಜ್ ಅವರು ಮಾತನಾಡಿ ನಮ್ಮ ಭಾರತೀಯ ಭವ್ಯ ಪರಂಪರೆ ಶ್ರೀಮಂತವಾದದ್ದು ಸನಾತನ ಧರ್ಮವನ್ನು ಇಂತಹ ಕಾರ್ಯಕ್ರಮಗಳಿಂದ ಜೀವಂತವಾಗಿಡಲು ಸಾಧ್ಯ ಎಂದು ಹೇಳಿದರು. ಗುರುವಿನ ಸ್ಥಾನ ಬಹಳಷ್ಟು ಪ್ರಮುಖವಾದದ್ದು, ಗುರುವಾದವರು ಮಕ್ಕಳ ಹಿತಾಸಕ್ತಿಗಾಗಿ ತಮ್ಮ ಬೋಧನೆಯನ್ನು ದೇವರಿಗೆ ಸಲ್ಲಿಸುವ ಪೂಜೆ ಎಂದು ಭಾವಿಸಿ ಬೋಧಿಸಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಶಿವಶರಣಪ್ಪ ಜೀ, ಗುರುನಾಥ್ ಮೂಲಗೆ ಆಡಳಿತ ಅಧಿಕಾರಿಗಳು, ಪ್ರೌಢಶಾಲೆ ಮುಖ್ಯ ಗುರುಗಳಾz ಶಿವಶರಣಪ್ಪ ಪಾಟೀಲ್ À , ಪ್ರಾಥಮಿಕ ಶಾಲೆ ಮುಖ್ಯಗುರುಗಳಾದ ಶ್ರೀಮತಿ ಅರ್ಚನಾ ಶಿರಿಗೇರಿ, ವೇದಿಕೆ ಮೇಲೆ ಉಪಸ್ಥಿತರಿದ್ದರು.

ಕುಮಾರಿ ವೈಷ್ಣವಿ ಸ್ವಾಗತಿಸಿದರು, ಕುಮಾರಿ ಶ್ರದ್ಧಾ ಅಮೃತ ವಚನ ಹೇಳಿದರು, ಕುಮಾರಿ ಶ್ವೇತಾ ವೈಯಕ್ತಿಕ ಗೀತೆ, ಕುಮಾರಿ ತ್ರಿಶಾ ವಂದಿಸಿದರು, ಕುಮಾರಿ ಸ್ನೇಹಾ ನಿರೂಪಣೆ, ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.