ಪ್ರಕೃತಿಯನ್ನು ಪೂಜಿಸಿ

ಬಾಗಲಕೋಟೆ, ಜೂ 6 : ತಾಲೂಕಿನ ಬೆನಕಟ್ಟಿ ಗ್ರಾಮದ ಶ್ರೀ ಕಂಚಿ ವೆಂಕಟೇಶ್ವರ ದೇವಸ್ಥಾನ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾಡು ಬೆಳಿಸಿ.ನಾಡು ಉಳಿಸಿ.ಹಸಿರೇ ಉಸಿರು ಎಂಬ ಮಾತಿನಂತೆ ಇಲ್ಲಿನ ಗ್ರಾಮ ಪಂಚಾಯತ ಅಧ್ಯಕ್ಷ ವೇಮರಡ್ಡಿ ಪಾಂಡಪ್ಪ ಯಡಹಳ್ಳಿ ಸದಸ್ಯರು ಸೇರಿ ದೇವಸ್ಥಾನದ ಆವರಣದಲ್ಲಿ ಸುಮಾರು 60 ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ನೀರುಣಿಸಿದರು.
ಇದೆ ಸಂದರ್ಭದಲ್ಲಿ ಮಾತನಾಡಿ ಪ್ರಕೃತಿಯನ್ನು ತಾಯಿ ಎಂದು ಪೂಜಿಸಿ. ದೇವರೆಂದು ಗೌರವಿಸಿ. ಮಗುವೆಂದು ರಕ್ಷಿಸಿ. ಸ್ನೇಹಿತರಂತೆ ಬೆಂಬಲಿಸಿ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಎಸ್ ಎಚ್ ಕಾಳಗಿಯವರು ಮಾತನಾಡಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಆರ್ ಎಲ್ ದೊಡಮನಿ, ಗ್ರಾ ಪಂ ಸದಸ್ಯರಾದ ವಿನೋದ ನಾಯಕ, ಬಾಲವ್ವ ಮಾದರ ಗ್ರಾಮದ ಹಿರಿಯರಾದ ಮಾಜಿ ಸೈನಿಕ ಬಸು ಅರಿಷಿನಗೋಡಿ, ಕೃಷ್ಣ ಯಡಹಳ್ಳಿ, ಶಿವಪ್ಪ ಗೌಡರ, ಚಂದ್ರಶೇಖರ ಬಾಳ್ಕನವರ, ಶಿವು ಅಂಗಡಿ ಹಾಗೂ ಪಂಚಾಯತ ಸಿಬ್ಬಂದಿ ಮಹಾಂತೇಶ ರಾಮದುರ್ಗ. (ಬಿ ಎಪ್ ಟಿ) ಶಿವು ಛಲವಾದಿ. ಬಾಲು ಆಲೂರ. (ಮೆಟ್) ಯಲ್ಲಪ್ಪ ಸುಳಿಕೇರಿ ಮತ್ತಿತರು ಈ ಕಾರ್ಯಕ್ರಮದಲ್ಲಿದ್ದರು.