ಪ್ರಕೃತಿಯನ್ನು ಉಳಿಸಿ ಪೂಜಿಸಿ: ಶ್ರೀಕಾಂತ ಮೋದಿ

ಬೀದರ ನ 18: ನಗರದ ಬರಿದ್ ಶಾಹಿ ಉದ್ಯಾನವನದಲ್ಲಿಇಂಟರ್ ನ್ಯಾಷನಲ್ ನ್ಯಾಚುರೋಪತಿ ಆರ್ಗನೈಸೇಶನ್ ಹಾಗೂ ಸೂರ್ಯ ಫೌಂಡೇಶನ್ ಬೀದರ ವತಿಯಿಂದ ಪ್ರಾಕೃತಿಕ ಚಿಕಿತ್ಸಾ ದಿವಸ ಕಾರ್ಯಕ್ರಮ ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐ.ಎನ್.ಓ ಬೀದರ ಜಿಲ್ಲಾ ಘಟಕದ ಅಧ್ಯಕ್ಷ ಧೊಂಡಿರಾಮ ಚಾಂದಿವಾಲೆ ವಹಿಸಿದ್ದರು.
ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ಮೋದಿ ಯವರು ಮುಖ್ಯ ವಕ್ತಾರರಾಗಿ ಮಾತನಾಡುತ್ತಾ ನಮಗೆ ಈ ಪ್ರಕೃತಿ ಲೆಕ್ಕವಿಲ್ಲದಷ್ಟು ಕೊಡುಗೆಯಾಗಿ ನೀಡಿದೆ ಮಾನವನು ಅದನ್ನು ಯಥೇಚ್ಛವಾಗಿ ಸದುಪಯೋಗಪಡಿಸಿಕೊಳ್ಳದೇನೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾನೆ ಇದರಿಂದ ಮುಂಬರುವ ಪೀಳಿಗೆಗೆ ಉಳಿಸುವ ಕಾರ್ಯ ಮಾನವನಿಂದಾಗಬೇಕು ಈ ನಿಟ್ಟಿನಲ್ಲಿ ಪ್ರಕೃತಿಯಲ್ಲಿ ದೊರೆಯುವ ಎಲ್ಲ ವಸ್ತುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಮತ್ತು ಪ್ರಕೃತಿಯನ್ನು ಪ್ರೀತಿಸಬೇಕು ಎಂದರು.
ಆಯುಶ್ ಇಲಾಖೆ ನಿರ್ದೇಶಕರಾದ ಡಾ.ಶಾರದಾ ಮೈತ್ರಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ನಾವೆಲ್ಲರು ಪ್ರಕೃತಿಯಿಂದಲೆ ಬಂದಿದ್ದೇವೆ ಮರಳಿ ಅದೆ ಪ್ರಕೃತಿಯಲ್ಲೆ ಲೀನವಾಗುತ್ತೇವೆ ನಮಗೆ ಈ ಪ್ರಕೃತಿ ಗಾಳಿ,ಬೆಳಕು,ನೀರು ಎಲ್ಲವನ್ನು ಬೇಕಾದಷ್ಟು ನೀಡುತ್ತಿದೆ ನಾವು ಅದನ್ನು ಹಾಳು ಮಾಡದೆ ಉಳಿಸಬೇಕು ಈ ನಿಟ್ಟಿನಲ್ಲಿ ಐ.ಎನ್.ಓ ಹಾಗೂ ಸೂರ್ಯ ಫೌಂಡೇಶನ್ ನವರು ಒಳ್ಳೆಯ ಕೆಲಸ ಮಾಡತಿದ್ದಾರೆ ಎಂದರು.
ಮನ್ಮಥಯ್ಯಾ ಸ್ವಾಮಿ ಮಾತನಾಡಿ ಪ್ರಕೃತಿಯಿಂದ ದೊರೆಯುವ ಲಾಭಗಳು ಹಾಗೂ ಪದೆ ಪದೆ ಮಾತ್ರೆಗಳನ್ನು ಸೇವಿಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿದರು.
ಸೂರ್ಯ ಫೌಂಡೇಶನ್ ಜಿಲ್ಲಾ ಸಂಯೋಜಕ ಗುರುನಾಥ ರಾಜಗೀರಾ ಪ್ರಾಸ್ತಾವಿಕ ಮಾತನಾಡಿದರು.ಜಗದೀಶ ಬುಟ್ಟೆ ನಿರೂಪಿಸಿದರು ರವೀಂದ್ರ ಸೋರಳ್ಳಿ ವಂದಿಸಿದರು.
ಈ ಸಂದರ್ಭದಲ್ಲಿ ಬೀದರ ಜಿಲ್ಲಾ ಐಎನ್ ಓ ಘಟಕದ ಎಲ್ಲಾ ಸದಸ್ಯರು ಹಾಗೂ ಬರಿದ್ ಶಾಹಿ ಯೋಗ ಬಂಧುಗಳು ಇದ್ದರು.