ಪ್ರಕರಣ ಮುಚ್ಚಲು ಗೃಹ ಸಚಿವರ ಬೇಜವಾಬ್ದಾರಿ ಹೇಳಿಕೆ:ಕೂಚಬಾಳ

ತಾಳಿಕೋಟೆ:ಜು.27:ಉಡಪಿಯ ಪ್ಯಾರಾ ಮೇಡಿಕಲ್ಲ ಕಾಲೇಜೊಂದರ ಶೌಚಾಲಯದಲ್ಲಿ ರಹಸ್ಯ ಕ್ಯಾಮರಾ ಇಟ್ಟು ಆ ವಿಡಿಯೋವನ್ನು ಬೇರೆ ಬೇರೆ ವಾಟ್ಸಾಫ್ ಗ್ರೂಪ್‍ಗಳಿಗೆ ಕಳುಹಿಸುವಂತಹ ಕೆಲಸ ಮಾಡಿದವರ ಮೇಲೆ ಕ್ರಮ ಜರುಗಿಸದೇ ಇದೊಂದು ಸಣ್ಣ ಪ್ರಕರ್ಣವೆಂದು ಗ್ರಹ ಸಚೀವರು ಬೇಜವಾಬ್ದಾರಿ ಹೇಳಿಕೆ ನೀಡಿರುವದು ಖಂಡನೀಯವಾದುದ್ದಾಗಿದೆ ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರು ಹೇಳಿದರು.

ಬುಧವಾರರಂದು ಪಟ್ಟಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ನಮ್ಮ ಭಾರತೀಯ ಸಂಸ್ಕøತಿಯಲ್ಲಿ ಮಹಿಳೆಯರಿಗೆ ತಾಯಿ ಸ್ಥಾನದಲ್ಲಿಟ್ಟು ಗೌರವವನ್ನು ಕೊಡುತ್ತೇವೆ ಆದರೆ ಇಂತಹ ಪ್ರಕರ್ಣವನ್ನು ನೋಡಿದರೆ ರಾಜ್ಯದಲ್ಲಿ ಮಹಿಳೆಯರಿಗೆ ಭದ್ರತೆ ಇದೆ ಇಲ್ಲವೋ ಎಂಬ ಸಂಶಯ ಹುಟ್ಟು ಹಾಕಿದೆ ಎಂದ ಅವರು ವಿಧ್ಯಾರ್ಥಿನಿಯರ ಶೌಚಾಲಯದಲ್ಲಿ ರಹಸ್ಯೆ ಕ್ಯಾಮರಾ ಇಟ್ಟು ಅದನ್ನು ಬೇರೆ ಬೇರೆ ವಾಟ್ಸಾಫ್ ಗ್ರೂಪ್‍ಗಳಿಗೆ ಹರಿದಾಡುವಂತಹ ಕೃತ್ಯದಲ್ಲಿ 3 ಜನ ಮುಸ್ಲಿಂ ಯುವತಿಯರು ಭಾಗಿಯಾಗಿದ್ದಾರೆಂಬ ಸುದ್ದಿ ದಟ್ಟವಾಗಿ ಹರಿದಾಡುತ್ತಿದೆ ಆದರೆ ಇದರಲ್ಲಿ ಭಾಗಿಯಾಗಿರುವ ಯುವತಿಯರ ಮನೆಗೆ ಪೊಲೀಸ್‍ರು ಹೋಗುವ ಬದಲು ಈ ರಹಸ್ಯೆ ಕ್ಯಾಮರಾವನ್ನು ಬೇದಿಸಿದ ಯುವತಿಯ ಮನೆಗೆ ಹೋಗಿ ಬೆದರಿಸುವಂತಹ ಕಾರ್ಯ ಮಾಡಿರುವದು ರಾಜ್ಯದಲ್ಲಿ ಮಹಿಳೆಯರ ಮೇಲಿ ಭದ್ರತೆ ಕುಸಿದು ಹೋಗಿದೆ ಎಂಬುದು ಎದ್ದು ಕಾಣುತ್ತಿದೆ ಆದರೆ ಈ ವಿಷಯವನ್ನು ಗ್ರಹ ಸಚೀವರು ಸಣ್ಣ ಪ್ರಕರ್ಣ ಇದೆ ಎಂದು ಮುಚ್ಚಿ ಹಾಕಲು ಪ್ರಯತ್ನಿಸುತ್ತಿರುವ ಒಳಗುಟ್ಟೇನೆಂಬುದು ತಿಳಿಯುತ್ತಿಲ್ಲಾವೆಂದ ಅವರು ಕಾಲೇಜು ವಿಧ್ಯಾರ್ಥಿನಿಯರ ಮಾನವನ್ನು ಹರಾಜು ಹಾಕುವ ಪ್ರಕರ್ಣ ಸಣ್ಣದಾದರೆ ದೊಡ್ಡ ಪ್ರಕರ್ಣವೆಂದು ಯಾವುದನ್ನು ನಿರ್ಧರಿಸುತ್ತಾರೆಂಬುದನ್ನು ಗ್ರಹ ಸಚೀವರು ಭಹಿರಂಗ ಪಡಿಸಬೇಕೆಂದು ಒತ್ತಾಯಿಸಿದರು.

ಇಡೀ ಸ್ತ್ರಿ ಕುಲಕ್ಕೆ ಅಪಮಾನ ಮಾಡುವಂತಹ ಕೃತ್ಯವೆಸಗಿದವರ ರಕ್ಷಣೆಗೆ ಗೃಹ ಸಚೀವರು ನಿಲ್ಲುತ್ತಿದ್ದಾರೆಂಬುದು ಮೇಲ್ನೋಟಕ್ಕೆ ಕಾಣುವದರ ಜೊತೆಗೆ ಈ ಪ್ರಕರ್ಣವನ್ನು ಮುಚ್ಚಿ ಹಾಕುವಂತಹ ಕೆಲಸ ಬೆನ್ನಹಿಂದೆ ನಡೆದಿದೆ ಎಂಬುದರ ಬಗ್ಗೆ ಸಂಶಕ್ಕೆ ಕಾರಣವಾಗಿದೆ ಎಂದು ಹೇಳಿದ ಕೂಚಬಾಳ ಅವರು ಇದರಲ್ಲಿ 3 ಜನ ಮುಸ್ಲಿಂ ಯುವತಿಯರು ಭಾಗಿಯಾಗಿರುವದು ಮುಂಚೂಣಿಯಲ್ಲಿ ಕಾಣುತ್ತಿದೆ ಈ ಪ್ರಕರ್ಣ ಬೆಳಕಿಗೆ ಬಂದ ಕೂಡಲೇ ಕಾಲೇಜಿನವರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರೂ ಇಲ್ಲಿಯವರೆಗೆ ಪ್ರಕರ್ಣ ದಾಖಲಿಸಿಲ್ಲಾ ಇದರ ಹಿನ್ನೇಲೆ ಏನು ಎಂಬುದು ಹೊರಬೇಕಿದೆ ಇದರ ಹಿಂದೆ ಯಾರ್ಯಾರು ಇದ್ದಾರೆ ಇದರ ಹಿಂದೆ ಷಡ್ಯಂತ್ರ ಏನಿದೆ ಎಂಬುದು ಹೊರಬರಬೇಕಾದರೆ ಕೂಡಲೇ ನ್ಯಾಯಾಂಗ ತನಿಖೆಗೆ ಈ ಪ್ರಕರ್ಣವನ್ನು ವಹಿಸಬೇಕೆಂದು ಒತ್ತಾಯಿಸಿದರು.

ಈ ಹಿಂದೆ ಹಿಜಾಬ ಪ್ರಶ್ನೇ ಬಂದಾಗ ಜಾತಿ ವ್ಯವಸ್ಥೆಯನ್ನು ತೆಗೆದು ಹಾಕಬೇಕು ಸಮಾನತೆಯ ಜೊತೆಗೆ ಶಿಕ್ಷಣ ಸಿಗಬೇಕು ಎಂದು ಶಾಲಾ ಸಮವಸ್ತ್ರಗಳೇ ಧರಿಸಬೇಕೆಂದು ಸರ್ಕಾರಗಳೇ ಮಾಡಿದ್ದನ್ನು ಬಿಜೆಪಿ ಸರ್ಕಾರ ಜಾರಿ ಮಾಡಿದಾಗ ಅದನ್ನು ವಿರೋಧಿಸಿದವರೂ ಸ್ವಯಂ ಘೋಷಿತ ಜ್ಯಾತ್ಯಾತೀತ ಕಾಂಗ್ರೇಸ್‍ನವರು ಆಗಿದ್ದಾರೆ ಅದರ ಬಗ್ಗೆ ಕಾಂಗ್ರೇಸ್‍ನವರು ಅವಲೋಕನ ಮಾಡಿಕೊಳ್ಳಬೇಕಿದೆ ಈ ಹಿಂದೆ ಸಿದ್ರಾಮಯ್ಯನವರ ಕಾಂಗ್ರೇಸ್ ಸರ್ಕಾರವಿದ್ದಾಗ ಅಕಂಡಶ್ರೀನಿವಾಸ ಮೂರ್ತಿ ಎಂಬ ದಲಿತ ಶಾಸಕನ ಮನೆಯನ್ನು ಸುಟ್ಟು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಸುಮಾರು 500 ಕ್ಕೂ ಹೆಚ್ಚು ಸಾರ್ವಜನಿಕರ ವಾಹನಗಳನ್ನು ಸುಟ್ಟಂತಹ ವ್ಯಕ್ತಿಗಳನ್ನು ಅಮಾಯಕ ಯುವಕರಿದ್ದಾರೆ ಅವರನ್ನು ಬಿಡುಗಡೆ ಮಾಡಬೇಕೆಂದು ತನ್ವೀರ ಶೇಠವೆಂಬ ಶಾಸಕರು ಗ್ರಹ ಸಚೀವರಿಗೆ ಪತ್ರ ಬರೆದಿದ್ದಾರೆ ಇದಕ್ಕೆ ಗ್ರಹ ಸಚೀವರೂ ಕೂಡಾ ಪರಿಶೀಲಿಸಿ ಬಿಡುಗಡೆ ಮಾಡುವ ಬಗ್ಗೆ ಆಶ್ವಾಸನೆ ಕೊಟ್ಟಿದ್ದಾರೆಂದರೆ ದೇಶದ್ರೋಹ ಪ್ರಕರ್ಣದಲ್ಲಿ ಭಾಗಿಯಾದವರಿಗೆ ಈ ಕಾಂಗೇಸ್ ಸರ್ಕಾರದಲ್ಲಿ ಕುಮ್ಮಕ್ಕು ಇದೆ ಎಂಬುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ ಎಂದು ಕೂಚಬಾಳ ಅವರು ಆರೋಪಿಸಿದರು.

ಈ ಹಿಂದೆ ಸಿದ್ರಾಮಯ್ಯನವರ ಸರ್ಕಾರವಿದ್ದಾಗ ಪಿಎಫ್‍ಆಯ್ ಮೇಲೆ ಇರುವಂತಹ 170 ಕೇಸಗಳನ್ನು ಹಿಂದಕ್ಕೆ ಪಡೆದು 1700 ಜನರ ಮೇಲಿರುವ ಪ್ರಕರ್ಣಗಳನ್ನು ಮುಚ್ಚಿಹಾಕಿದ್ದರ ಪರಿಣಾಮ ಎಷ್ಟೊಂದು ಹಿಂದೂಗಳ ಯುವಕರ ಹತ್ಯೆಯಾದವು ಎಂಬುದನ್ನು ನೆನಪಿಸಿಕೊಳ್ಳಲು ಮುಂದಾಗಬೇಕು ಮೊದಲು ರಾಷ್ಟ್ರದ ಹಿತಕೋಸ್ಕರ ಕೆಲಸ ಮಾಡುವಂತಹ ಕಾರ್ಯ ಮಾಡಬೇಕು, ಈ ಪ್ರಕರ್ಣದಲ್ಲಿ ಯಾರನ್ನಾದರೂ ರಕ್ಷಣೆ ಮಾಡುವ ನೆಪದಲ್ಲಿ ಕೆಸನ್ನು ಮುಚ್ಚಿ ಹಾಕಲು ನೋಡಿದರೆ ವಿರೋಧ ಪಕ್ಷವಾಗಿರುವ ಬಿಜೆಪಿ ಪಕ್ಷ ಸುಮ್ಮನೇ ಕೂಡುವದಿಲ್ಲಾ ಕೂಡಲೇ ಹೋರಾಟದ ಹಾದಿ ಹಿಡಿಯಲಿದೆ ಎಂದರು.

ಗ್ಯಾರೆಂಟಿ ಯೋಜನೆಗಳಿಗೆ ದುಡ್ಡು ಬೇಕು ಅಭಿವೃದ್ದಿಗೆ ದುಡ್ಡು ಕೇಳಬೇಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಅವರೇ ಹೇಳಿರುವದು ಕಾಂಗ್ರೇಸ್ ಸರ್ಕಾರದಿಂದ ಯಾವುದನ್ನು ನಿರಿಕ್ಷೀಸಲು ಸಾಧ್ಯವಿಲ್ಲಾ ಮತ್ತು ಸರ್ಕಾರದಲ್ಲಿ ಯಾವುದು ಚೆನ್ನಾಗಿಲ್ಲಾ ಸರ್ಕಾರ ರಚನೆಯಾದ ಕೆಲವೇ ತಿಂಗಳಲ್ಲಿ ಅಸಮಾದಾನ ಹೊರ ಬಿಳ್ಳತೊಡಗಿದೆ ಕೂಡಲೇ ಈ ಸರ್ಕಾರ ತೊಲಗಲಿ ಎಂಬುದು ಜನರ ಕೂಗಾಗಿದೆ ವರ್ಗಾವಣೆ ದಂದೆಯಲ್ಲಿ ತೊಡಗುವದರೊಂದಿಗೆ ರಾಜ್ಯದಲ್ಲಿ ಅರಾಜಕತೆ ನಿರ್ಮಾಣ ಮಾಡುವದರಲ್ಲಿ ಸಿದ್ರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ತೊಡಗಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರು ಹೇಳಿದರು.