
ಸಿಂಧನೂರು.ನ.೧೮- ತಾಲುಕಿನ ತುರವಿಹಾಳ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬೇರೊಬ್ಬರ ಜಮಿನೀನಲ್ಲಿನ ಮರಂ ಮಾರಿಕೊಂಡ ಕುರಿತು ಪ್ರಕರಣ ದಾಖಲಾದರೂ ಬಂಧನಕ್ಕೆ ಪೋಲಿಸರು ಹಿಂದೇಟು ಹಾಕುತ್ತಿದ್ದಾರೆಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ತಾಲುಕಿನ ಉಮಲೂಟಿ ಗ್ರಾಮದ ಸಿಮಾಂತರದಲ್ಲಿ ಪಿರ್ಯಾದುದಾರಳಾದ ಭಾಗಿರತಮ್ಮಳ ಗಂಡನಾದ ಹನುಮಪ್ಪ ಹೆಸರಿನಲ್ಲಿ ಸರ್ವೆ ನಂ ೧೩೫/ಪಿ ಯಲ್ಲಿ ೩ ಎಕರೆ ೭ ಗುಂಟೆ ಜಮೀನು ಇದ್ದು ,ಈ ಆಸ್ತಿಯ ದಕ್ಷಿಣ ಭಾಗಕ್ಕೆ ಆರೋಪಿತ ಪರಶುರಾಮ ತಂ ಮರಿಸ್ವಾಮಿ ಜಮೀನು ಇದೆ. ದೂರುದಾರರು ಕಡು ಬಡವರಾಗಿದ್ದು ದುಡಿಯಲು ಬೆಂಗಳೂರಿಗೆ ಹೋಗಿದ್ದನ್ನು ದುರುಪಯೋಗ ಪಡಿಸಿಕೊಂಡು ಅಕ್ರಮವಾಗಿ ಒತ್ತುವರಿ ಮಾಡಿ ೨೦೧೪ ರಲ್ಲಿ ಕುಷ್ಟಗಿ – ಸಿಂಧನೂರು ರಾಜ್ಯ ಹೆದ್ದಾರಿಗೆ ನಮ್ಮ ಹೊಲದಲ್ಲಿ ೨೦ ಫಿಟ್ ಆಳದವರೆಗೆ ಮೂರು ಎಕರೆ ಜಮೀನು ತೊಡಿ ಸುಮಾರು ೪,೫೦,೦೦೦ ರೂ ಮೌಲ್ಯದ ಮರಂ ಮಾರಾಟ ಮಾಡಿದ್ದಾನೆ.ಈ ಕುರಿತು ೧೫-೧೦-೨೦೨೩ ರಂದು ತನ್ನ ಹೊಲದಲ್ಲಿ ಮರಂ ಅಗಿದಿದ್ದನ್ನು ಗಮನಿಸಿದ ಭಾಗಿರತಮ್ಮಳ ಪಕ್ಕದ ಜಮೀನಿನಲ್ಲಿದ್ದ ಪರಶುರಾಮನಿಗೆ ಈ ವಿಷಯ ವಾಗಿ ಕೇಳಿದಾಗ’ ನಿಮ್ಮ ಹೊಲ ನೀವು ನೋಡಿಕೊಳ್ಳಬೇಕು ಇನ್ನೊಂದು ಸಲ ನನ್ನ ಹತ್ತಿರ ಬಂದರೆ ಚಪ್ಪಲಿ ಯಿಂದ ಹೊಡೆಯುತ್ತೆನೆಂದು ತಳ್ಳಿ, ಸೀರೆ ಹಿಡಿದು ಎಳೆದಾಡಿ ಅವಮಾನ ಮಾಡಿ ಜೀವ ಬೆದರಿಕೆ ಹಾಕಿದ್ದಾನೆಂದು ಪ್ರಕರಣ ದಾಖಲಾಗಿದೆ. ಐಪಿಸಿ ೧೫೯ / ೨೦೨೩ ೪೪೭ ,೫೦೪ ,೩೨೩,೩೭೯,೩೫೪,೪೨೦,೫೦೬ ರ ಗುನ್ನೆ ನಂ ೧೨-೧೧-೨೦೨೩ ರಂದು ಸಂಜೆ( ೬-೦೦ ಪಿ.ಎಮ್ )ತುರವಿಹಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಪರಶುರಾಮ ಕೇವಲ ಜಮೀನು ಹೊತ್ತುವರಿ ಮಾಡುವುದಲ್ಲದೇ ಈ ಹಿಂದೆ ಎಮ್.ಎಸ್.ಐ.ಎಲ್ ಹೆಸರಿನಲ್ಲಿ ಕಳಪೆ ಮಟ್ಟದ ಮಧ್ಯ ಮಾರಾಟ ಮಾಡಿ ಜನರ ಆರೋಗ್ಯ ಹಾಳಾಗಲು ಕಾರಣನಾಗಿದ್ದ ಮತ್ತು ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಹಣವನ್ನು ದುರುಪಯೋಗ, ಅಬಕಾರಿ ಇಲಾಖೆ, ಮೀನುಗಾರಿಕೆ ಇಲಾಖೆಯ ಕಾನೂನು ಗಳನ್ನು ಉಲ್ಲಂಘನೆ ಮಾಡಿದ್ದಾನೆ ಹಾಗೂ ಪ್ರಸ್ತುತ ಅನಧಿಕೃತವಾಗಿ ರಾಜಾರೋಷವಾಗಿ ಮದ್ಯ ಮಾರಾಟ ದಂದೆಯಲ್ಲಿ ತೊಡಗಿದ್ದಾನೆ. ಇತನ ಮೇಲೆ ಅದೆಷ್ಟೋ ಪ್ರಕರಣಗಳು ದಾಖಲಾದರೂ ಕೂಡ ಬಂಧನಕ್ಕೆ ತುರವಿಹಾಳ ಪೋಲಿಸ್ ಠಾಣೆಯ ಪಿಎಸ್‌ಐ ಹಿಂದೇಟು ಹಾಕುತ್ತಿರುವುದರ ಉದ್ದೇಶ ಹೊಂದಾಣಿಕೆಯೋ ಏನು ಎಂಬುವುದು ತಿಳಿಯದಾಗಿದೆ.