ಪ್ಯಾರೀಸ್‌ನಲ್ಲಿ ರಾಮ್ ಚರಣ್ ದಂಪತಿ

ಹೈದರಾಬಾದ್,ಸೆ.೯-’ಆರ್ ಆರ್ ಆರ್’ ಖ್ಯಾತಿಯ ನಟ ರಾಮಚರಣ್ ಕೈಯಲ್ಲಿ ಈಗಾಗಲೇ ಹಲವು ಸಿನಿಮಾಗಳಿವೆ. ಈ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಸ್ವಲ್ಪ ಬಿಡುವು ಮಾಡಿಕೊಂಡು ಪತ್ನಿ ಉಪಾಸನಾ ಕಾಮಿನೇನಿ ಅವರೊಂದಿಗೆ ಫ್ರಾನ್ಸ್ ಪ್ರವಾಸಕ್ಕೆ ತೆರಳಿದ್ದಾರೆ.
ಅವರ ಪುಟ್ಟ ಮಗಳು ಕ್ಲಿನ್ ಕಾರಾ ಹುಟ್ಟಿದ ನಂತರ ದಂಪತಿಗಳ ಮೊದಲ ಪ್ರವಾಸ ಇದಾಗಿದೆ. ರಾಮಚರಣ್ ತನ್ನ ಮಗಳೊಂದಿಗೆ ಫ್ರೆಂಚ್ ವೈನ್, ಚೀಸ್ ಮತ್ತು ಕೆಲವು ಸುಂದರ ಸ್ಥಳಗಳನ್ನು ಆನಂದಿಸುತ್ತಿದ್ದಾರೆ. ಕೆಲಸದ ಒತ್ತಡ ಮತ್ತು ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ರಾಮಚರಣ್ ಕುಟುಂಬಕ್ಕಾಗಿ ಸಮಯವನ್ನು ಮೀಸಲಿಡುತ್ತಾರೆ.
ತಮ್ಮ ಮುಂದಿನ ಪ್ರಾಜೆಕ್ಟ್ ’ಗೇಮ್ ಚೇಂಜರ್’ ಚಿತ್ರೀಕರಣ ಪ್ರಾರಂಭವಾಗುವ ಮೊದಲು ಅವರು ತಮ್ಮ ಪತ್ನಿ ಮತ್ತು ಮಗಳೊಂದಿಗೆ ಸುಂದರ ಕ್ಷಣವನ್ನು ಆನಂದಿಸಿದ್ದಾರೆ
ಅಲ್ಲಿ ಮದುವೆ ಕಾರ್ಯಕ್ರಮವೊಂದರಲ್ಲಿ ಈ ಜೋಡಿ ಭಾಗಿಯಾಗಿದ್ದಾರೆ. ರಾಮಚರಣ್ ಕುಟುಂಬದೊಂದಿಗೆ ತಮ್ಮ ಅತ್ಯುತ್ತಮ ಸಮಯವನ್ನು ಕಳೆಯುತ್ತಾರೆ. ’ಗೇಮ್ ಚೇಂಜರ್’ ಶೂಟಿಂಗ್ ಮುಂದಿನ ವಾರ ಆರಂಭ ಮಾಧ್ಯಮ ವರದಿಗಳ ಪ್ರಕಾರ, ನಟ ರಾಮಚರಣ್ ಮುಂದಿನ ವಾರ ಭಾರತಕ್ಕೆ ಮರಳುವ ನಿರೀಕ್ಷೆಯಿದೆ. ’ಗೇಮ್ ಚೇಂಜರ್’ ಚಿತ್ರೀಕರಣ ಸೆಪ್ಟೆಂಬರ್ ೧೩ ರಂದು ಹೈದರಾಬಾದ್‌ನಲ್ಲಿ ಪ್ರಾರಂಭವಾಗಲಿದೆ. ಶಂಕರ್ ನಿರ್ದೇಶನದ ಈ ಚಿತ್ರವು ಹೈ-ಆಕ್ಟೇನ್ ಆಕ್ಷನ್ ಥ್ರಿಲ್ಲರ್ ಆಗಿರುತ್ತದೆ. ಗೇಮ್ ಚೇಂಜರ್ ನ ಸಂಪೂರ್ಣ ಶೂಟಿಂಗ್ ಶೆಡ್ಯೂಲ್ ನವೆಂಬರ್ ೨೦೨೩ ರೊಳಗೆ ಮುಗಿಯುವ ನಿರೀಕ್ಷೆಯಿದೆ , ಅಲ್ಲು ಅರ್ಜುನ್ ಶಂಕರ್ ಅವರ ಆಕ್ಷನ್ ಕಟ್ ’ಗೇಮ್ ಚೇಂಜರ್’ ಸೆಟ್ಟೇರಿ ಬಹಳ ಸಮಯವಾಗಿದೆ . ’ಗೇಮ್ ಚೇಂಜರ್’ ಚಿತ್ರದ ತಾಜಾ ಮಾಹಿತಿಗಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
ಈಗ ಸದ್ಯದ ಮಾಹಿತಿ ಪ್ರಕಾರ ಮುಂದಿನ ವಾರದಿಂದ ಚಿತ್ರದ ಶೂಟಿಂಗ್ ಶುರುವಾಗಲಿದೆ. ಚಿತ್ರದಲ್ಲಿ ರಾಮಚರಣ್ ನಾಯಕಿಯಾಗಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಕಾಣಿಸಿಕೊಳ್ಳಲಿದ್ದಾರೆ.