ಪ್ಯಾರಾ ಮಿಲಿಟರಿ ಪಡೆಗಳ ಪಥ ಸಂಚಲನೆ


ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಏ.26 : ಅರಸೀಕೆರೆ ಹೋಬಳಿಯಲ್ಲಿ ಜಗಳೂರು ವಿಧಾನ ಸಭಾ ಕ್ಷೇತ್ರದ ಚುನಾವಣೆ ಪ್ರಯುಕ್ತ ಪಿಎಸ್ಐ. ಎ.ಕಿರಣ್ ಕುಮಾರ್ ನೇತೃತ್ವದಲ್ಲಿ ಪ್ಯಾರ ಮಿಲಿಟರಿ ಪಡೆಗಳು ಪಥ ಸಂಚಲನ ನಡೆಸಿದರು.
ತಾಲ್ಲೂಕಿನ ಅರಸೀಕೆರೆ ಹೋಬಳಿಯ ಅರಸೀಕೆರೆ, ಕಂಚಿಕೆರೆ, ಲಕ್ಷ್ಮಿಪುರ, ಹಿರೇಮೇಗಳಗೆರೆ, ಉಚ್ಚಂಗಿದುರ್ಗ, ಗ್ರಾಮಗಳಲ್ಲಿ ಪ್ಯಾರ ಮಿಲಿಟರಿ ಪಡೆಗಳ ಪಥ ಸಂಚಲನವನ್ನು ಪಿಎಸ್ಐ.ಎ. ಕಿರಣ್ ಕುಮಾರ್ ನೇತೃತ್ವದಲ್ಲಿ ಅರಸೀಕೆರೆ ಪೋಲೀಸ್ ಸಿಬ್ಬಂದಿ, ಸಿ.ಆರ್.ಪಿ.ಎಫ್. ಪಡೆ ಪಥ ಸಂಚಲನ ಮಾಡಿದರು.
ಮತದಾನ ಮಾಡಲು ಭಯ ಪಡಬೇಡಿ, ಯಾವುದೇ ಅಕ್ರಮಗಳಿಗೆ ಕಡಿವಾಣ ಹಾಕಲು ಹಿಂಜರಿಯುವುದಿಲ್ಲ ಎಂದು ಪಿಎಸ್ಐ.ಎ.ಕಿರಣ್ ಕುಮಾರ್ ಎಚ್ಚರಿಕೆ ನೀಡಿದರು.

One attachment • Scanned by Gmail