ಪ್ಯಾನ್ ವಲ್ರ್ಡ್ `ವಾತಾಪಿ’

ಪ್ಯಾನ್ ಇಂಡಿಯಾ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಇದೀಗ ಅದರ ಸಾಲಿಗೆ  ‘ವಾತಾಪಿ’ ಸೇರ್ಪಡೆಯಾಗುತ್ತಿದೆ.  ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಿಂದಿ, ಇಂಗ್ಲೀಷ್, ಚೈನಿಸ್ ಮತ್ತು ಜಪಾನೀಸ್ ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿರುವುರಿಂದ ಇದು ಪ್ಯಾನ್ ವಲ್ರ್ಡ್ ಸಿನಿಮಾವೆಂಬುದು ವಿಶೇಷ.

ಶಿವ ಪೂರ್ಣ(ಲೋಕೇಶ್), ಜಿ.ಕೆ.ತಿರುಮಲೇಶ್ ಹಾಗೂ ಮುತ್ತುರಾಜ್ ಜಂಟಿಯಾಗಿ ಬಂಡವಾಳ ಹೂಡುತ್ತಿರುವುದು ಹೊಸ ಅನುಭವ. ‘ಕ್ಷಿಪ್ರ’ ನಿರ್ದೇಶನ ಮಾಡಿದ್ದ ಸತೀಶ್ ಕೃಷ್ಣ ರಚನೆ, ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ.

ಥ್ರಿಲ್ಲರ್, ಪುರಾಣ ಕಾಲದ ಕಥೆಯನ್ನು ಹೊಂದಿದೆ. ತಾರಾಗಣದಲ್ಲಿ ರಾಜೀವ್ರಾಥೋಡ್, ಪಲ್ಲವಿಪ್ರಕಾಶ್, ರಾಬರ್ಟ್, ಜಿ.ಕೆ.ತಿರುಮಲೇಶ್, ಕಸ್ತೂರಿ, ರಫೀಕ್, ಮಂಜೇಶ್ಗೌಡ, ಚೈತ್ರಾ, ಭಾನು, ಶೃತಿ, ಬೇಬಿ ಆರಾಧ್ಯ ಇವರೊಂದಿಗೆ ಹಿರಿಯ ಕಲಾವಿದರುಗಳು ಅಭಿನಯಿಸುತ್ತಿದ್ದಾರೆ.

ಬಾಹುಬಲಿ’ ಸೇರಿದಂತೆ ಹಲವು ಬ್ಲಾಕ್ಬಸ್ಟರ್ ತೆಲುಗು ಸಿನಿಮಾಗಳಿಗೆ ಕ್ಯಾಮರಮೆನ್ ಆಗಿರುವ ಪ್ರಸಾದ್ಪುಲಿಚರ್ಲ ಮೊದಲ ಬಾರಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಕಲೇಶಪುರ, ನಂದಿಬೆಟ್ಟ, ನೆಲಮಂಗಲ, ರಾಮೋಜಿ ಫಿಲಂ ಸಿಟಿ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ.  ಅಂದ ಹಾಗೆ ಮುಂದಿನ ತಿಂಗಳು ಮಾಡಲು ತಂಡ ಯೋಜನೆ ರೂಪಿಸಿಕೊಂಡಿದೆ.