ಪ್ಯಾಂಟಿನ ಜೇಬಿನಲ್ಲಿಟ್ಟಿದ್ದ 90,500 ನಗದು, ಮೊಬೈಲ್ ಕಳವು

ಕಲಬುರಗಿ,ಮಾ.2-ಕಳ್ಳರು ಮನೆಯೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ಪ್ಯಾಂಟಿನ ಜೇಬಿನಲ್ಲಿಟ್ಟಿದ್ದ 90,500 ರೂ.ನಗದು ಮತ್ತು 10 ಸಾವಿರ ರೂ.ಮೌಲ್ಯದ ವಿವೋ ಮೊಬೈಲ್ ಕಳವು ಮಾಡಿದ್ದಾರೆ ಎಂದು ಬಡೇಪುರ ಬಡಾವಣೆಯ ನಾಗೇಶ ಹುಳಗೇರಿ ಎಂಬುವವರು ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.