ಪೌಷ್ಠಿಕ ಆಹಾರ ಸೇವಿಸಿ ಸದೃಡ ಆರೋಗ್ಯ ಪಡೆಯಿರಿ

ಆಳಂದ:ಮಾ.31:ಗರ್ಬಿಣಿಯರು ಮತ್ತು ಬಾಣಂತಿಯರು, ಹೆಚಾಗಿ ಪೌಷ್ಠಿಕಾಂಶವುಳ್ಳ ಆಹಾರಗಳನ್ನು ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯಪಡೆದುಕೊಳ್ಳಬಹುದಾಗಿದೆ ಎಂದು ಜಿಡಗಾ ಪ್ರಾ.ಆ.ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಮಹಾನಂದ ಹೇಳಿದರು. ಆಳಂದ ತಾಲೂಕಿನ ಜಿಡಗಾ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಬಾಣಂತಿಯರಿಗೆ ಕಿಶೋರಿಯರಿಗೆ ಹಾಗೂ ಗರ್ಬಿಣಿಯರಿಗೆ ಪೌಷ್ಠಿಕ ಆಹಾರ ಅಭಿಯಾನÀ ಕುರಿತು ನಡೆದ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿ ಉತ್ತಮ ಆರೋಗ್ಯಕ್ಕಾಗಿ ಉತ್ತಮ ಆಹಾರ ಪದ್ದತಿಯು ಅವಶ್ಯಕವಾಗಿದೆ ಅದರಲ್ಲಿ ಗರ್ಬಿಣಿಯರು ಮತ್ತು ಬಾಣಂತಿಯರು ಸದೃಡವಾದ ಆಹಾರವನ್ನು ಸೇವಿಸಬೇಕು ಎಂದರು. ಅಂಗನವಾಡಿ ಶಿಕ್ಷಕಿ ಚಿತ್ರಬಾಯಿ ಆಶಾ ಕಾರ್ಯಕರ್ತರು ಹಾಗೂ ಬಾಣಂತಿಯರು ಇದ್ದರು.