ಪೌಷ್ಠಿಕ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ

ಚಿತ್ರದುರ್ಗ.ಸೆ.೭; : ಗರ್ಭಿಣಿ ಮತ್ತು ಬಾಣಂತಿಯರು ಪೌಷ್ಠಿಕ ಆಹಾರ ಸೇವನೆ ಮಾಡುವುದರಿಂದ ಆರೋಗ್ಯವಂತ ಮಕ್ಕಳನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ಚಿತ್ರದುರ್ಗ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಸುಧಾ ತಿಳಿಸಿದರು. ನಗರ ಬಿ.ಕೇಂದ್ರದ ಆಶ್ರಯ ಬಡಾವಣೆ ಅಂಗನವಾಡಿ ಬಿ. ಕೇಂದ್ರದಲ್ಲಿ ರಾಷ್ಟ್ರೀಯ ಪೋಷಣೆ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಎ,ಬಿ,ಸಿ,ಡಿ ವಿಟಮಿನ್ ದೊರೆಯುವ ಆಹಾರ ಮತ್ತು ಅವುಗಳ ಬಳಕೆ ಕುರಿತು ಮಾಹಿತಿ ನೀಡಿದರು. ಸಹಾಯಕ ಶಿಶು ಆಭಿವೃದ್ಧಿ ಯೋಜನಾಧಿಕಾರಿಗಳಾದ ಅತಿಕಾಖಾನ್ ಮಹಿಳಾ ಮೇಲ್ವಿಚಾರಕರಾದ ಎಚ್.ಎಸ್. ಮಂಜುಳಾ, 17ನೇ ವಾರ್ಡಿನ ಕೌನ್ಸಿಲರ್ ಜಯಪ್ಪ ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಾನಕಿ, ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು, ಸಹಾಯಕಿಯರು,ಇನ್ನರ್ ವೀಲ್ ಕ್ಲಬ್‌ನ ಜಿಲ್ಲಾ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಇದ್ದರು.