ಪೌಷ್ಠಿಕ ಆಹಾರ ಮೇಳ


ಮುನವಳ್ಳಿ, ಡಿ1: ಸಮೀಪದ ಹರಳಕಟ್ಟಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಸವದತ್ತಿ ಇವರ ಸಂಯುಕ್ತ ಆಶ್ರಯದಲ್ಲಿ ಸ್ಪಂದನಾ ಜ್ಞಾನ ವಿಕಾಸ ಮಹಿಳಾ ಕೇಂದ್ರದಲ್ಲಿ ಪೌಷ್ಠಿಕ ಆಹಾರ ಮೇಳ ಕಾರ್ಯಕ್ರಮ ಜರುಗಿತು.
ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಪ್ರೇಮ ವಹಿಸಿ ಕಾರ್ಯಕ್ರಮದ ಯೋಜನೆಯ ಬಗ್ಗೆ ಮಾಹಿತಿ ನೀಡಿದರು, ಡಾ. ಪ್ರವೀಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪೌಷ್ಠಿಕ ಆಹಾರದ ಸೇವನೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು, ಮುಖ್ಯ ಅತಿಥಿಗಳಾಗಿ ಶಿಕ್ಷಕಿ ಮಂಜುಳಾ ಧರಣಿಯವರು ಮಾತನಾಡಿ ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ತಾಯಿಯ ಪಾತ್ರದ ಬಗ್ಗೆ ತಿಳಿಸಿದರು.
ವಲಯ ಮೇಲ್ವಿಚಾರಕ ಅನಂತ ಭಂಡಾರಿ, ಶಾಂತವ್ವ, ಉಪಸ್ಥಿತರಿದ್ದರು.
ತಾಲೂಕಿನ ಜ್ಞಾನ ವಿಕಾಸ ಸಮನ್ವಯಾಧಿಕಾರಿ ವಿಧ್ಯಾ ನಿರೂಪಿಸಿದರು. ಸದಸ್ಯರಾದ ಮಹಾದೇವಿ ಸ್ವಾಗತಿಸಿದರು, ಸೇವಾ ಪ್ರತಿನಿದಿ ರಚನಾ ವಂದಿಸಿದರು.