ಪೌಷ್ಠಿಕ ಆಹಾರ ಪದಾರ್ಥಗಳ ಪ್ರದರ್ಶನ

????????????????????????????????????

ಸಿರುಗುಪ್ಪ ಮಾ 30 : ನಗರದ ಸಿ.ಡಿ.ಪಿ.ಓ ಕಛೇರಿಯ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶು ಅಭಿವೃದ್ದಿ ಯೋಜನೆ ಇವರ ಸಹಯೋಗದಲ್ಲಿ ಕೇಂದ್ರ ಸರ್ಕಾರದ ಪೋಷಣ್ ಪಕ್ವಾಡ್ ಅಭಿಯಾನದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಂದ ತಯಾರಿಸಿದ ಪೌಷ್ಠಿಕ ಆಹಾರ ಪದಾರ್ಥಗಳ ಪ್ರದರ್ಶನ ನಡೆಯಿತು.
ಪ್ರದರ್ಶನದಲ್ಲಿ ತಾಲೂಕು ಶಿಶು ಅಭಿವೃದ್ದಿ ಅಧಿಕಾರಿ ಎಸ್.ಕೆ.ಜಲಾಲಪ್ಪ ಮಾತನಾಡಿ ಪೌಷ್ಠಿಕ ಆಹಾರಗಳಾದ ಕಾಳುಗಳು, ಹಾಲೂ, ಮೊಟ್ಟೆ, ತಾಜಾ ತರಕಾರಿಗಳಿಂದ ಉತ್ತಮ ಆಹಾರ ಪದಾರ್ಥಗಳನ್ನು ತಯಾರಿಸಿ ಮಕ್ಕಳನ್ನು ಉಣ್ಣಬಡಿಸುವುದಿಂದ ಉತ್ತಮ ಆರೋಗವಂತರಾಗಲು ಸಾಧ್ಯವಾಗುತ್ತದೆ.
ಇದೇ ಸಂದರ್ಭದಲ್ಲಿ ಶಿಶು ಅಭಿವೃದ್ದಿ ಯೋಜನೆಯ ಹಿರಿಯ ಮೇಲ್ವಿಚಾರಕಿಂiÀiರಾದ ಗಂಗವ್ವ ಉಳ್ಳಣ್ಣನವರ್, ಹೇಮಾವತಿ, ಮುನ್ನಿಕರುಣ, ಗಂಗವ್ವ.ಬಿ, ಮಹಾದೇವಿ, ಭಾಗ್ಯಮ್ಮ, ಮೈನಾವತಿ ಮುಖಂಡರಾದ ಪಕ್ಕೀರಪ್ಪ, ನಾಗೇಶಪ್ಪ, ಮಹಾದೇವ, ಗಂಗಪ್ಪ ಸೇರಿದಂತೆ ಅಂಗನವಾಡಿ ಶಿಕ್ಷಕಿಯರು, ಕಾರ್ಯಕರ್ತೆಯರು, ವಿವಿಧ ಸ್ವಸಹಾಯ ಗುಂಪುಗಳ ಸದಸ್ಯರು ಇದ್ದರು.