ಪೌಷ್ಠಿಕ ಆಹಾರ ದಿಂದ ಮಕ್ಕಳ ಆರೋಗ್ಯ ಸದೃಢ : ಪಾಪಣ್ಣ ಮನ್ನೆ

ಗುರುಮಠಕಲ್:ಸೆ.15: ಹೆಣ್ಣು ಸಂಸಾರದ ಕಣ್ಣು ಸಮಾಜದಲ್ಲಿ ತಾಯಿ ಯಾಗಿ ಅಕ್ಕ ತಂಗಿ ಹಾಗೂ ಹೆಂಡತಿ ಯಾಗಿ ಇದು ಅಲ್ಲದೆ ಕುಟುಂಬದ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸುವ ಮೂಲಕ ತಾಯಿಯ ಪಾತ್ರ ಬಹಳ ಮುಖ್ಯ ವಾದದ್ದು ಎಂದು ಪುರಸಭೆ ಅಧ್ಯಕ್ಷ ರಾದ ಪಾಪಣ್ಣ ಮನ್ನೆ ಹೇಳಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಆಡಳಿತ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ. ಹಾಗೂ ಕೃಷಿ ಇಲಾಖೆ. ತೋಟಗಾರಿಕೆ ಇಲಾಖೆ. ಆರೋಗ್ಯ ಇಲಾಖೆ. ಸಾರ್ವಜನಿಕ ಶಿಕ್ಷಣ ಇಲಾಖೆ ಪೆÇೀಷಣೆ ಮಾಸಾಚರಣೆ ಅಂಗವಾಗಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ಕಾರ್ಯಕ್ರಮದ ಪ್ರಯುಕ್ತ ಮಹಿಳಾ ಸಬಲೀಕರಣ ಹಾಗೂ ಪೌಷ್ಟಿಕತೆ ಕುರಿತು ಹೋಬಳಿ ಮಟ್ಟದ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಮಾನ್ಯ ತಹಸಿಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಗಳು ಶರಣಬಸವ ರಾಣಪ್ಪ ಅವರು ಮಾತನಾಡಿ ತಾಯಿಯಂದಿರು ಬೆಳೆಯುತ್ತಿರುವ ಮಗುವಿನ ಬಗ್ಗೆ ಬಹಳ ಕಾಳಜಿಯಿಂದ ನೋಡಿಕೊಳ್ಳುವದರೊದಿಗೆ ತಾಯಿಯಂದಿರು ಗಭೀರ್ಣಿ ಸ್ತ್ರೀಯರು ಪ್ರತಿ ಮಗುವಿನ ಬೆಳವಣಿಗೆಗಾಗಿ ಮಕ್ಕಳ ತಾಯಿಂದರು ಶಕ್ತಿ ವರ್ಧಕ ಆಹಾರಗಳನ್ನು ಸೇವನೆ ಮಾಡುವುದರ ಮುಖಾಂತರ ಮಕ್ಕಳ ಆರೋಗ್ಯ ಸದೃಢ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಿ ಡಿ ಪಿ ಒ ಶ್ರೀ ಮತಿ ವನಜಾಕ್ಷಿ ಬೆಂಡಿಗೇರಿ ಗುರುಮಠಕಲ್ ಅವರು ಸ್ವಾಗತ ಕೋರಿದರು. ತಾಲೂಕು ಪಂಚಾಯತ್ ಯೋಜನಾಧಿಕಾರಿಗಳು ಗುರುಮಠಕಲ್ ಕೆ.ಮಲ್ಲಪ್ಪ. ಡಾಕ್ಟರ್ ವೈದ್ಯಾಧಿಕಾರಿಗಳು ಶಿವಪ್ರಸಾದ್ ಮೈತಿ. ಪಶುವೈದ್ಯಾಧಿಕಾರಿಗಳು ಡಾಕ್ಟರ್ ಸುನಿಲ್ ಕುಮಾರ್ ಹಬೀಬ್. ಡಾಕ್ಟರ್ ಭಾಗ ರೆಡ್ಡಿ . ವಿವಿಧ ಇಲಾಖೆಗಳ ವಸ್ತು ಪ್ರದರ್ಶನವನ್ನು ಏರ್ಪಡಿಸಿ ಯೋಜನೆಗಳ ಮಾಹಿತಿ ನೀಡಲಾಯಿತು ಇದೆ ವೇಳೆ ಪೌಷ್ಠಿಕ ಆಹಾರ ಸಿದ್ದಪಡಿಸಿ ಪ್ರದರ್ಶಿಸಲಾಯಿತು ಅಂಗನವಾಡಿ ಕಾರ್ಯಕರ್ತೆಯರು ಮಹಿಳೆಯರು ಭಾಗವಹಿಸಿದ್ದರು.