
ದೇವದುರ್ಗ,ಮಾ.೧೯- ಹಿಂದಿನ ಕಾಲದ ಪೌಷ್ಠಿಕ ಆಹಾರ ಪದ್ದತಿ ಸೇವನೆಯಿಂದ ಆರೋಗ್ಯ ವೃದ್ಧಿ ಆಗಲಿದೆ ಎಂದು ಡಾ.ಲೀಲಾವತಿ ನರೇಂದ್ರ ಹೇಳಿದರು.
ಪಟ್ಟಣದ ಸಮೂಹ ಕ್ಯಾಂಪನ್ ಆವರಣದಲ್ಲಿ ಮುಂಜಾವು ಮಹಿಳಾ ವಿವಿದೋದ್ದೇಶ ಸಹಾಕರಿ ಸಂಘ ನಿಯಮಿತ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ಉತ್ಸವ ಹಾಗೂ ಮಹಿಳಾ ಶಕ್ತಿ ಸಮಾವೇಶ ಕಾರ್‍ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಒಲೆ ಮೇಲೆ ಮಾಡುವಂತ ಆಹಾರ ಅದರ ರುಚಿಯೇ ಬೇರೆ. ವಿದ್ಯುತ್ ಸಿಲೆಂಡರ್ ಮೇಲೆ ಮಾಡುವ ಅಡುಗೆಯ ರುಚಿಯ ಕೊರತೆ ಕಾಣುತ್ತಿದ್ದೇವೆ. ಆಹಾರ ಪದ್ದತಿ ಬದಲಾವಣೆಯಿಂದ ಆಸ್ಪತ್ರೆಯೇ ಬೇಕಿಲ್ಲ ಎಂದು ಹೇಳಿದರು.
ಸಾಧನೆ ಮಾಡಲು ಶರೀರ್ ಗಟ್ಟಿತನಬೇಕಿದೆ. ಮಾನಸಿಕ ಒತ್ತಡದಿಂದ ಹೊರಬರಬೇಕಿದೆ. ಗರ್ಭಿಣಿಯರಿಗೆ ಉತ್ತಮ ಪೌಷ್ಠಿಕ ಆಹಾರ ನೀಡುವುದ್ದರಿಂದ ಮಗು ತಾಯಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ ಎಂದು ಸಲಹೆ ನೀಡಿದರು. ಈ ಭಾಗದಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರವಿದೆ. ಆರೋಗ್ಯ, ಶಿಕ್ಷಣ ಕುರಿತು ಅನೇಕ ಜಾಗೃತಿ ಮೂಡಿಸುವ ಮೂಲಕ ಬದಲಾವಣೆ ತಂದಿದ್ದಾರೆ. ಮಹಿಳೆಯರು ಎಲ್ಲಾ ರಂಗದಲ್ಲಿ ಸೇವೆ ಸಲ್ಲಿಸುವುದ್ದರಿಂದ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಹೇಳಿದರು. ಸಾಧನೆ ಮಾಡುವ ವ್ಯಕ್ತಿಗಳಿಗೆ ಪ್ರತಿಯೊಬ್ಬರು ಕೈಜೋಡಿಸುವ ಕೆಲಸ ಮಾಡಬೇಕು ಎಂದರು.
ಎಸ್‌ಎಸ್ ಘಂಟಿ ಪ್ರಾಸ್ತವಿಕ ಮಾತನಾಡಿ, ಸ್ವಸಹಾಯ ಗುಂಪುಗಳ ಕೆಲ ಸದಸ್ಯರು ಉಳಿತಾಯ ಮಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯ, ಕೃಷಿ ಕ್ಷೇತ್ರದಲ್ಲಿ ಬದಲಾವಣೆ ಕಂಡಿವೆ. ೧೯೮೭ರಲ್ಲಿ ಸಮೂಹ ಸಂಸ್ಥೆ ಸ್ಥಾಪನೆಗೊಂಡಾಗ. ಗ್ರಾಮೀಣ ಭಾಗದಲ್ಲಿ ಅನರಕ್ಷತೆ ಹೆಚ್ಚಿತ್ತು. ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಗಬೇಕು ಎಂದು ಗೃಹ ಸಂಘ ಆರಂಭಿಸಿ, ಸತತ ಪ್ರಯತ್ನದಿಂದ ಬದಲಾವಣೆ ತರಲಾಯಿತ್ತ ಎಂದು ಹೇಳಿದರು. ಶಿಕ್ಷಣಕ್ಕೆ ಹೆಚ್ಚಿನ ಅದತ್ಯೆ ನೀಡಬೇಕು ಎಂದು ಅರಿವು ಮೂಡಿಸಲಾಯಿತು.
ಒಂದೊಂದು ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡುವ ಮೂಲಕ ಪುರಷತಗಿಂತ ಕಡಿಮೆ ಎಂಬಂತೆ ತೊರಿಸಿದ್ದಾರೆ. ಸ್ವಸಹಾಯ ಗುಂಪುಗಳಲ್ಲಿ ೧೨ ಸಾವಿರ ಮಹಿಳೆಯರು ಕಾರ್‍ಯನಿರ್ವಹಿಸುತ್ತಿದ್ದಾರೆ. ೨೩ ಕೋಟಿ ರೂ. ವ್ಯವಹಾರ ವಹಿವಾಟ ನಡೆಸಿದ್ದಾರೆ. ಆರ್‌ಡಿಸಿಸಿ ಬ್ಯಾಂಕ್ ನೆರವು ನೀಡಿದೆ ಎಂದು ಹೇಳಿದರು. ಕೃಷಿ ಚಟುವಟಿಕೆಯಲ್ಲಿ ಶೇ.೭೫ರಷ್ಟು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಶಾಂತಮ್ಮ ಬಾಲಪ್ಪ ಅರಕೇರಾ ಕಾರ್‍ಯಕ್ರಮ ಅಧ್ಯಕ್ಷತೆ ವಹಿಸಿದರು.
ಇದೇ ಸಂದರ್ಭದಲ್ಲಿ ಶಿಕ್ಷಕಿ ನಾಗಲಕ್ಷ್ಮೀ ಪಾಟೀಲ್, ಪಲ್ಲವಿ ರಾಘವೇಂದ್ರ, ಹನುಮಂತ್ರಾಯ, ಅಮರೇಗೌಡ ಹೇರುಂಡಿ, ಸಂಗೀತಾ, ಚಂದ್ರಕಲಾ ಸೇರಿದಂತೆ ಇತರರು ಇದ್ದರು.