ಜೇವರ್ಗಿ:ಜು.8 : ಮಕ್ಕಳ ಬೆಳವಣಿಗೆಗೆ ಪೌಷ್ಟಿಕ ಆಹಾರ ಸೇವನೆ ಬಹಳ ಮುಖ್ಯ. ಮಕ್ಕಳ ಆರೀಗ್ಯಕ್ಕೆ ಒಳ್ಳೆಯದು ಎಂದು ಭೀಮಾಶಂಕರ ಮದ್ರಿ ಅಭಿಮತಪಟ್ಟರು.
ತಾಲೂಕಿನ ಅಂಗನವಾಡಿ ಕೇಂದ್ರ ನೆಲೋಗಿ -6 ರಲ್ಲಿ ತಾಯಂದಿಯರ ಸಭೆ ಮತ್ತು ಪೂರಕ ಪೌಷ್ಟಿಕ ಆಹಾರದ ಸಭೆ ಜರುಗಿತು.
ಭೀಮಾಶಂಕರ ಮದ್ರಿ ಮಾತನಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದರಿಂದ ಮಕ್ಕಳು ಆರೋಗ್ಯವಂತರಾಗಿ ಜೀವಿಸುತ್ತಾರೆ. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದರಿಂದ ಯಾವುದೇ ರೋಗರುಜನಗಳು ಬರುವುದಿಲ್ಲ ಅದಕ್ಕಾಗಿ ತಾಯಂದಿರರು ಪೌಷ್ಟಿಕ ಆಹಾರ ಸೇವನೆ ಮಾಡಿ ಮಕ್ಕಳಿಗೂ ಪೌಷ್ಟಿಕ ಆಹಾರ ನೀಡಿ. ಪೌಷ್ಟಿಕ ಆಹಾರ ಸೇವನೆ ಒಳ್ಳೆ ಆರೋಗ್ಯ ನಿರ್ಮಾಣ ಮಾಡುತ್ತದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ದೇವೀಂದ್ರಪ್ಪ ಹಿಪ್ಪರಗಿ, ವಿಶ್ವನಾಥ ಮೆತ್ರಿ, ಬಸವರಾಜ ಬಾಡಿಗೆ, ಭೀಮಾಶಂಕರ ಮದ್ರಿ, ಶ್ರೀಮತಿ ರೇಣುಕಾ, ಶ್ರೀಮತಿ ಭಾರತಿ. ಎಂ. ಗುಜಗೊಂಡ, ಶ್ರೀಮತಿ ಸೌಭಾಗ್ಯ, ಶ್ರೀಮತಿ ನೀಲಮ್ಮ, ಶ್ರೀಮತಿ ಚನ್ನಮ್ಮ, ಗ್ರಾಮದ ಗರ್ಭಿಣಿಯರು ಅಂಗನವಾಡಿ ಮುದ್ದು ಮಕ್ಕಳು ಉಪಸ್ಥಿತರಿದ್ದರು.