ಚಾಮರಾಜನಗರ. ಜೂ.20:- ಪ್ರತಿಯೊಬ್ಬ ನಾಗರಿಕರು. ಪೌಷ್ಟಿಕ ಆಹಾರ ಸೇವನೆ ಮಾಡುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಬಿ ಎಸ್ ಭಾರತಿ ಅವರು ಕರೆ ನೀಡಿದರು
ಭಾನುವಾರ ಬೆಳಿಗ್ಗೆ ಜೋಡಿ ರಸ್ತೆ ರೋಟರಿ ಭವನ ಸಭಾಂಗಣದಲ್ಲಿ ಭಾರತ ಸರ್ಕಾರದ ನೆಹರು ಯುವ ಕೇಂದ್ರ. ಹೇ ಭುವನೇಶ್ವರಿ ಕನ್ನಡ ಯುವ ವೇದಿಕೆ. ರೋಟರಿ ಸಂಸ್ಥೆ. ಶ್ರೀ ವರಮಹಾಲಕ್ಷ್ಮಿ ಸಾಂಸ್ಕøತಿಕ ಕ್ರೀಡಾ ಸೇವಾ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಆಹಾರಮೇಳ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಸ್ಥಳದಲ್ಲಿ ಹಸಿ ಪದಾರ್ಥಗಳಿಂದ ತಯಾರು ಮಾಡಿದ್ದ ಆಹಾರವನ್ನು ಸೇವನೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿ. ತರಕಾರಿ. ಸೊಪ್ಪು. ಆಹಾರಗಳನ್ನು ಹೆಚ್ಚಾಗಿ ಸೇವಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ. ಹಿರಿಯ ಸಿವಿಲ್ ನ್ಯಾಯಾಧೀಶರು. ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ. ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ್ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ. ಮಾತನಾಡಿದವರು ಕಾನೂನನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಕಾನೂನು ತಿಳಿದುಕೊಳ್ಳಬೇಕು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ. ಕಾನೂನು ಅರಿವು ನೆರವು ನೀಡಲಾಗುವುದು. ಇದರ ಬಗ್ಗೆ ನಿಮ್ಮ ಪೆÇೀಷಕರಿಗೆ ಮಾಹಿತಿ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ರೋಟರಿ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಕಾಗಲವಾಡಿ ಚಂದ್ರು. ರೋಟರಿ ಜಿ. ಅಂಕಶೆಟ್ಟಿ, ಜೆಎಸ್‍ಎಸ್ ಆಸ್ಪತ್ರೆ ಸರ್ಜನ್ ಡಾಕ್ಟರ್ ಗೋವಿಂದ ಶೆಟ್ಟಿ, ರಾಷ್ಟ್ರೀಯ ಸೇವಾ ಯೋಜನೆ ಜಿಲ್ಲಾ ಸಂಯೋಜನೆ ಅಧಿಕಾರಿ. ಡಾಕ್ಟರ್ ಮಹೇಶ್ ಎಂಬಿ. ಜೆಎಸ್‍ಎಸ್ ಮಹಿಳಾ ಕಾಲೇಜು ಉಪನ್ಯಾಸಕ ಕೆ.ಎಸ್ ಮಹೇಶ್, ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಗೌರವಾಧ್ಯಕ್ಷ ಮಹಮ್ಮದ್ ಆಸ್ಕರ್, ಅಧ್ಯಕ್ಷ ಜಿ. ಬಂಗಾರು. ನೆಹರು ಯುವ ಕೇಂದ್ರ. ಸಹನ. ಉಪನ್ಯಾಸಕಿ ಮೇಘಶ್ರೀ ಸುರೇಶ್. ಕಲಾವಿದೆ ರಂಜಿತ, ಹರ್ಷಿತಾ, ಹೇಮಲತಾ, ಗುಂಡ್ಲುಪೇಟೆ ರೇಖಾ. ಚಾಮರಾಜನಗರ ವಿಶ್ವವಿದ್ಯಾಲಯದ ಪ್ರಿಯಾ ಚೈತ್ರ. ಇತರರು ಹಾಜರಿದ್ದರು.